ಸಾರಾಂಶ
ಕೇಂದ್ರದಲ್ಲಿ ಪ್ರಧಾನ ಮಂತ್ರಿ ಉತ್ತಮ ಆಡಳಿತ ನಡೆಸುತ್ತಿದ್ದು, ಬಡವರ ಆರೋಗ್ಯ, ಶಿಕ್ಷಣ ಮತ್ತು ಇತರ ಮೂಲಸೌಲಭ್ಯಗಳಿಗೆ ಆದ್ಯತೆ ನೀಡುತ್ತಿದ್ದು, ಸರಕಾರದಿಂದ ಜನಪ್ರಿಯ ಯೋಜನೆಗಳು ಜಾರಿಯಾಗಿವೆ ಎಂದು ರೋಣ ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಡಂಬಳ: ಕೇಂದ್ರದಲ್ಲಿ ಪ್ರಧಾನ ಮಂತ್ರಿ ಉತ್ತಮ ಆಡಳಿತ ನಡೆಸುತ್ತಿದ್ದು, ಬಡವರ ಆರೋಗ್ಯ, ಶಿಕ್ಷಣ ಮತ್ತು ಇತರ ಮೂಲಸೌಲಭ್ಯಗಳಿಗೆ ಆದ್ಯತೆ ನೀಡುತ್ತಿದ್ದು, ಸರಕಾರದಿಂದ ಜನಪ್ರಿಯ ಯೋಜನೆಗಳು ಜಾರಿಯಾಗಿವೆ ಎಂದು ರೋಣ ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಡಂಬಳ ಹೋಬಳಿಯ ಹಾರೋಗೇರಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಯುಷ್ಮಾನ್ ಯೋಜನೆಯಿಂದ ಅನೇಕರು ರೋಗಮುಕ್ತರಾಗಿದ್ದಾರೆ. ಕೇಂದ್ರ ಸರಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ರವಿ ಕರಿಗಾರ, ಅಂದಪ್ಪ ಹಾರೋಗೇರಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಫಕ್ಕೀರಪ್ಪ ಉಳ್ಳಾಗಡ್ಡಿ, ಶಿವಪ್ಪ ಅಂಕದ, ಪಿ.ಡಿ. ಪಾಟೀಲ, ವಾಸುಗೌಡ ಪಾಟೀಲ ವಿವಿಧ ಇಲಾಖೆಯ ಅಧಿಕಾರಿಗಳು ಬ್ಯಾಂಕ್ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಯುಷ್ಮಾನ್ ಚಲನಚಿತ್ರ ಪ್ರದರ್ಶಿಸಲಾಯಿತು. ಉಜ್ವಲ ಯೋಜನೆಯ ಸಿಲಿಂಡರ್ ವಿತರಿಸಲಾಯಿತು.