ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ: ಶಿವಶಂಕ್ರಪ್ಪ ಗುಂಡಕನಾಳ

| Published : Jan 21 2024, 01:31 AM IST / Updated: Jan 21 2024, 01:32 AM IST

ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ: ಶಿವಶಂಕ್ರಪ್ಪ ಗುಂಡಕನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಪಿಎಂಜೆಜೆಬಿವೈ-ಪಿಎಂಎಸ್‌ಬಿವೈ ಮತ್ತು ಎಪಿವೈ ಯೋಜನೆ, ಅಸಂಘಟಿತ ಕಾರ್ಮಿಕರು ಹಾಗೂ ಜನಸಾಮಾನ್ಯರಿಗಾಗಿ ಅಟಲ್ ಪಿಂಚಣಿ, ಹೀಗೆ ನೂರಾರು ಜನಪರ ಯೋಜನೆಗಳನ್ನು ಪ್ರಧಾನಿ ಮೋದಿ ಅವರ ಸರ್ಕಾರ ಜಾರಿಗೆ ತಂದಿದೆ ಅವುಗಳನ್ನು ಸದ್ಭಳಿಸಿಕೊಳ್ಳುವಂತೆ ಗುಂಡಕನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜನಸಾಮಾನ್ಯರಿಗೆ ಜಾರಿ ಮಾಡಿದೆ. ರೈತಾಪಿ ಜನರು ಹಾಗೂ ಬಡವರು ಯೋಜನೆಗಳ ಲಾಭ ಪಡೆಯಬೇಕೆಂದು ಎಂದು ಸುರಪುರ ತಾಲೂಕು ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಆರ್ಥಿಕ ಸಲಹೆಗಾರ ಶಿವಶಂಕ್ರಪ್ಪ ಗುಂಡಕನಾಳ ಹೇಳಿದರು.

ಪಟ್ಟಣದ ಅಗಸಿ ಹತ್ತಿರ ಮಲ್ಲಯ್ಯ ದೇವಸ್ಥಾನದ ಬಳಿ ನಮ್ಮ ಸಂಕಲ್ಪ ವಿಕಸಿತ ಭಾರತ (ಮೋದಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು) ಎನ್ನುವ ಗ್ಯಾರಂಟಿ ವಾಹನದ ಮೂಲಕ ಹಮ್ಮಿಕೊಂಡ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಎಂಜೆಜೆಬಿವೈ-ಪಿಎಂಎಸ್‌ಬಿವೈ ಮತ್ತು ಎಪಿವೈ ಯೋಜನೆಗಳನ್ನು ಮೋದಿ ಅವರು 2015ರಲ್ಲಿಯೇ ಜಾರಿಗೆ ತಂದರು. ಈ ಮೂರು ಸಾಮಾಜಿಕ ಭದ್ರತಾದಡಿ ಯೋಜನೆಗಳು ನಾಗರಿಕರ ಕಲ್ಯಾಣಕ್ಕೆ ಕಲ್ಪಿಸಲಾಗಿದ್ದು, ಅಪಾಯಗಳು ಅಥವಾ ನಷ್ಟಗಳು, ಜೀವನವನ್ನು ಸುರಕ್ಷಿತಗೊಳಿಸುವ ಅಗತ್ಯ ಹೊಂದಿವೆ ಎಂದರು.

ಅಸಂಘಟಿತ ಕಾರ್ಮಿಕರು ಹಾಗೂ ಜನಸಾಮಾನ್ಯರಿಗಾಗಿ ಅಟಲ್ ಪಿಂಚಣಿ ಯೋಜನೆಯು ಬಹಳ ಉಪಯುಕ್ತವಾಗಿದೆ. ಈ ಯೋಜನೆಯಡಿ 18-60 ವರ್ಷದವರೆಗೂ ಪಿಂಚಣಿ ಹಣ ಸಂದಾಯಿಸುತ್ತಾ ಬಂದರೆ, ಕೊನೆಗೆ ಕಟ್ಟಿದ ಹಣದ ಆಧಾರದ ಮೇಲೆ ನಾಗರಿಕರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಸಿಗಲಿದೆ ಎಂದು ತಿಳಿಸಿದರು.

ರೈತರು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಫಸಲ್ ಭೀಮಾ ಯೋಜನೆ ಹಾಗೂ ಪಿಎಂ ಕಿಸಾನ ಹೀಗೆ ಅನೇಕ ಯೋಜನೆಗಳು ಸಾರ್ಥಕಗೊಳಿಸಲಾಗಿದೆ. ಪ್ರತಿಯೊಬ್ಬ ರೈತರು ಹಾಗೂ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸಲು ಗ್ಯಾರಂಟಿ ವಾಹನದ ಮೂಲಕ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದೆ ಎಂದರು.

ಈ ವೇಳೆ ಬಿಜೆಪಿ ಮುಖಂಡರಿಂದ 2024ನೇ ಸಾಲಿನ ಯೋಜನೆಗಳ ಒಳಗೊಂಡ ಪ್ರಧಾನಿ ನರೇಂದ್ರ ಮೋದಿ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಮುಖಂಡರಾದ ವಿರೇಶ ಸಾಹುಕಾರ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಬಿಜೆಪಿ ತಾಲೂಕಾಧ್ಯಕ್ಷ ಮೇಲಪ್ಪ ಗುಳಗಿ, ಎಂ.ಎಸ್. ಚಂದಾ, ಸಂಗಣ್ಣ ವೈಲಿ, ಮುರಗೆಣ್ಣ ದೇಸಾಯಿ, ಗೌಡಪ್ಪ ಬಾಲಗೌಡ್ರು, ವಿರುಪಾಕ್ಷ ಸ್ಥಾವರಮಠ, ಬಸವರಾಜ ಮೇಲಿನಮನಿ, ಆನಂದ ಬಾರಗೀಡದ, ನಾಗಯ್ಯಸ್ವಾಮಿ ದೇಸಾಯಿಗುರು, ವಿನೋದ ದೊರೆ ಸೇರಿದಂತೆ ಇತರರಿದ್ದರು.