ಸಾರಾಂಶ
ಮಠಮಾನ್ಯ, ಧರ್ಮಕಾರ್ಯಗಳಿಗೆ ದಾನ, ಪರೋಪಕಾರ ಮಾಡುವುದರಿಂದ, ಸುಖ, ಶಾಂತಿ, ನೆಮ್ಮದಿ ಸಂತೃಪ್ತ
ಕನ್ನಡಪ್ರಭ ವಾರ್ತೆ ಪಾಲಬಾವಿ
ದಾನ, ಧರ್ಮ ಪರೋಪಕಾರ ಮಾಡಿದರೆ ಮಾನವ ಜನ್ಮವು ಸಾರ್ಥಕವಾಗುವುದು. ಮಠಮಾನ್ಯ, ಧರ್ಮಕಾರ್ಯಗಳಿಗೆ ದಾನ, ಪರೋಪಕಾರ ಮಾಡುವುದರಿಂದ, ಸುಖ, ಶಾಂತಿ, ನೆಮ್ಮದಿ ಸಂತೃಪ್ತವಾಗುವುದೆಂದು ನಿರ್ವಾನಟ್ಟಿ ಶಿವಾನಂದ ಮಠದ ಪೀಠಾಧಿಪತಿ ವಿದ್ಯಾನಂದ ಮಹಾಸ್ವಾಮೀಜಿ ಹೇಳಿದರು.ರಾಯಬಾಗ ತಾಲೂಕು ಕಟಕಬಾವಿ ಗ್ರಾಮದ ಪಿಡಾಯಿ ತೋಟದ ಆರಾಧ್ಯ ದೇವತೆ ಜಕ್ಕಮ್ಮದೇವಿ ಹಾಗೂ ಧರಿದೇವರ 6ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ವೇದಾಂತ ಪರಿಷತ್‌ನ 2ನೇ ದಿನದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚ ನೀಡಿದರು.
ಶ್ರೀ ಅಭಿನವ ಧರೇಶ್ವರ ಮಹಾಸ್ವಾಮೀಜಿ ವೇದಾಂತ ಪರಿಷತ್ ಪ್ರವಚನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ವೇದಿಕೆ ಮೇಲೆ ಧೂಪದಾಳದ ಸಿದ್ಧಾರೂಢ ಮಠದ ಪೀಠಾಧಿಪತಿ ಭೀಮಾನಂದ ಮಹಾಸ್ವಾಮೀಜಿ, ಇಟನಾಳದ ಸಿದ್ಧೇಶ್ವರ ಆಶ್ರಮದ ಸಿದ್ಧೇಶ್ವರ ಶರಣರು, ಕಂಕಣವಾಡಿ ಮಾರುತಿ ಶರಣರು, ದೂಪದಾಳದ ಕಲಾವತಿ ಅಮ್ಮನವರು, ಗೋಕಾಕ ಜ್ಞಾನ ಮಂದಿರದ ಮಾತೋಶ್ರೀ ಸುವರ್ಣ ತಾಯಿ ಹೊಸಮಠ ಇದ್ದರು. ಶಿವಾನಂದ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.ಶ್ರೀ ಜಕ್ಕಮ್ಮತಾಯಿ ಹಾಗೂ ಧರಿದೇವರ ಪುಣ್ಯಾಶ್ರಮದ ಪೀಠಾಧಿಪತಿ ಪವಾಡ ಪುರುಷರು ಶ್ರೀ ಅಭಿನವ ಧರೇಶ್ವರ ಮಹಾಸ್ವಾಮೀಜಿಗೆ ಎಲ್ಲ ಭಕ್ತರು ಸೇರಿಕೊಂಡು ಬೆಳ್ಳಿ ಕಿರೀಟಧಾರಣೆ ಮಾಡಿ ಭಕ್ತಿಯಿಂದ ಪುಷ್ಪವೃಷ್ಟಿ ಮಾಡಿದರು.
ಈ ವೇಳೆ ಅಜಿತ ಪಿಡಾಯಿ, ರೇವಪ್ಪ ಪಿಡಾಯಿ, ಧರೇಪ್ಪ ಪಿಡಾಯಿ, ಸಿದ್ದಪ್ಪ ಲೋಕೋರೆ, ಕೆಂಪಣ್ಣ ನಾವಿ, ನಿಂಗಪ್ಪ ಪಿಡಾಯಿ, ಮುದುಕಪ್ಪ ಪಿಡಾಯಿ, ಲಕ್ಷ್ಮಣ ಪಿಡಾಯಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪಕಾಂಡಿ, ಹನುಮಂತ ಪಿಡಾಯಿ, ಅಪ್ಪಾಸಿ ಪಿಡಾಯಿ, ನಿಂಗಪ್ಪ ಮಾಂಗ, ಮುದಕಪ್ಪ ಪಕಾಂಡಿ ಇತರರು ಇದ್ದರು. ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರ್ಪಣೆ ನೆರವೇರಿತು.