ಸಾರಾಂಶ
ಆಹಾರ ನಾಗರಿಕ ಸರಬರಾಜು ನಿಗಮವು ಪ್ರಾರಂಭವಾಗಿ 50ರ ವಸಂತದ ಹಂತದಲ್ಲಿ ಸುವರ್ಣ ಮಹೋತ್ಸವ ಆಚರಣೆ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಡಿತರ ವಿತರಕರ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ 29ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ
ಕನ್ನಡಪ್ರಭ ವಾರ್ತೆ ಕುಶಾಲನಗರಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಹಾಗೂ ರಾಜ್ಯ ಪಡಿತರ ವಿತರಕರ ಸಮಾವೇಶ ಗುರುವಾರ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಶಾಲನಗರ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ.ಎನ್. ಅಶೋಕ್ ತಿಳಿಸಿದ್ದಾರೆ.
ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಆಹಾರ ನಾಗರಿಕ ಸರಬರಾಜು ನಿಗಮವು ಪ್ರಾರಂಭವಾಗಿ 50ರ ವಸಂತದ ಹಂತದಲ್ಲಿ ಸುವರ್ಣ ಮಹೋತ್ಸವ ಆಚರಣೆ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಡಿತರ ವಿತರಕರ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ 29ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯ ಪಡಿತರ ವಿತರಕರು, ವಿ ಎಸ್ ಎಸ್ ಎನ್ ಕಾರ್ಯದರ್ಶಿಗಳು , ನ್ಯಾಯಬೆಲೆ ಅಂಗಡಿ ಕಾಡುದಾರರು ಈ ಕಾರ್ಯಕ್ರಮಕ್ಕೆ ತೆರಳಲ್ಲಿದ್ದಾರೆ ಎಂದು ಕೆ ಎನ್ ಅಶೋಕ್ ತಿಳಿಸಿದ್ದಾರೆ.ಸಾರಿಗೆ ವ್ಯವಸ್ಥೆ: ಜಿಲ್ಲೆಯಿಂದ ತೆರಳಲು ಈಗಾಗಲೇ ಬಸ್ ವ್ಯವಸ್ಥೆ ಮಾನ್ಯ ಶಾಸಕರಾದ ಡಾ.ಮಂತರ್ ಗೌಡ ಅವರು ಕಲ್ಪಿಸಿ ಕೊಟ್ಟಿರುತ್ತಾರೆ ಎಂದು ಮಾಹಿತಿ ನೀಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ವಿತರಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಪಡಿತರ ವಿತರಕರ ಹಲವು ಬೇಡಿಕೆಗಳನ್ನು ಈ ಸಮಾವೇಶದಲ್ಲಿ ಮುಂದಿಡಲಾಗುವುದು ಎಂದರು.
ಪಡಿತರ ವಿತರಕರ ಕಮಿಷನ್ ಏರಿಕೆ ಮಾಡುವುದು, ಇತರೆ ರಾಜ್ಯಗಳಲ್ಲಿ ಹೆಚ್ಚಿನ ಕಮಿಷನ್ ನೀಡುತ್ತಿದ್ದು, ಏಕರೂಪ ಕಮಿಷನ್ ನೀಡುವಂತೆ ಒತ್ತಾಯಿಸಲಾಗುವುದು ಎಂದರು. ಜಿಲ್ಲೆಯಲ್ಲಿ 274 ಪಡಿತರ ವಿತರಕ ಅಂಗಡಿಗಳಿದ್ದು ಪ್ರತಿ ಅಂಗಡಿಗಳಿಂದ ಐದು ಮಂದಿ ಸಮಾವೇಶಕ್ಕೆ ತೆರಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷ ಅರುಣಚಂದ್ರ, ಕಾರ್ಯದರ್ಶಿ ವಿನಯ್ ಕುಮಾರ್, ಸಹ ಕಾರ್ಯದರ್ಶಿ ವರದರಾಜ ದಾಸ್ ಮತ್ತು ನಿರ್ದೇಶಕ ಹರೀಶ್ ಕುಮಾರ್ ಇದ್ದರು.