ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅವರ ಹೊಸ ಸಿನಿಮಾ ರಾಶಿ ಟೈಟಲ್‌ ಬಿಡುಗಡೆ

| Published : Sep 23 2024, 10:55 AM IST

Rashi

ಸಾರಾಂಶ

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೆ ಇದರ ಟೈಟಲ್‌ ಬಿಡುಗಡೆ ಆಯಿತು. ಚಿತ್ರದ ಹೆಸರು ‘ರಾಶಿ’. ಅಂದಹಾಗೆ ಇಲ್ಲಿವರೆಗೂ ಅಕ್ಷಿತ್‌ ಶಶಿಕುಮಾರ್‌ ಆಗಿದ್ದವರು ಈ ಚಿತ್ರದಿಂದ ಆದಿತ್ಯ ಶಶಿಕುಮಾರ್‌ ಆಗಿದ್ದಾರೆ.

ಸಿನಿವಾರ್ತೆ  : ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೆ ಇದರ ಟೈಟಲ್‌ ಬಿಡುಗಡೆ ಆಯಿತು. ಚಿತ್ರದ ಹೆಸರು ‘ರಾಶಿ’. ಅಂದಹಾಗೆ ಇಲ್ಲಿವರೆಗೂ ಅಕ್ಷಿತ್‌ ಶಶಿಕುಮಾರ್‌ ಆಗಿದ್ದವರು ಈ ಚಿತ್ರದಿಂದ ಆದಿತ್ಯ ಶಶಿಕುಮಾರ್‌ ಆಗಿದ್ದಾರೆ. 

ವಿಜಯ್‌ ಪಾಳೇಗಾರ್‌ ನಿರ್ದೇಶನ ಈ ಚಿತ್ರದ ಶೀರ್ಷಿಕೆಯನ್ನು ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷ ಜಿ ಎಸ್‌ ಚಂದ್ರಶೇಖರ್, ನಟ ಶಶಿಕುಮಾರ್‌, ಬೆಂಗಳೂರು ಪೊಲೀಸ್‌ ಉಪ ಆಯುಕ್ತ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್ ಚಿದಂಬರ್‌ ಸೇರಿದಂತೆ ಹಲವು ಗಣ್ಯರು ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಆದಿತ್ಯ ಶಶಿಕುಮಾರ್‌, ‘ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ‌ ಇದು. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದ್ದು ಖುಷಿ ಆಗಿದೆ. ಈ ಚಿತ್ರದಿಂತ ನನ್ನ ಹೆಸರು ಆದಿತ್ಯ ಶಶಿಕುಮಾರ್‌ ಎಂದು ಬದಲಾಗಿದೆ’ ಎಂದರು. ವಿಜಯ್ ಪಾಳೇಗಾರ್, ‘ನಾನು ನಿರ್ದೇಶನ ಮಾಡುವ ಜತೆಗೆ ಗೀತರಚನೆ ಹಾಗೂ ಸಂಗೀತ ಸಂಯೋಜನೆ ಕೂಡ ಮಾಡುತ್ತಿದ್ದೇನೆ. ಇದು ನನ್ನ ಎರಡನೇ ಸಿನಿಮಾ’. ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್‌ ಅವರೇ ಕತೆ ಬರೆದಿದ್ದಾರೆ. ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ ಇದೆ. ಚಿತ್ರದ ನಾಯಕಿ ಸಮೀಕ್ಷ, ಪ್ರಮುಖ ಪಾತ್ರದಾರಿಗಳಾದ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಮುಂತಾದವರು ಹಾಜರಿದ್ದರು.