ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಬರೋಬ್ಬರಿ 608 ಆಸ್ತಿ : ಹರಾಜು ನೋಟಿಸ್‌

| N/A | Published : Feb 01 2025, 10:46 AM IST

BBMP

ಸಾರಾಂಶ

ನಗರದಲ್ಲಿ ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡು ಬರೋಬ್ಬರಿ 608 ಆಸ್ತಿಗಳನ್ನು ಹರಾಜು ಹಾಕುವುದಾಗಿ ಆಯಾ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಕಂದಾಯ ವಿಭಾಗದಿಂದ ನೋಟಿಸ್‌ ನೀಡಲಾಗಿದೆ.

 ಬೆಂಗಳೂರು : ನಗರದಲ್ಲಿ ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡು ಬರೋಬ್ಬರಿ 608 ಆಸ್ತಿಗಳನ್ನು ಹರಾಜು ಹಾಕುವುದಾಗಿ ಆಯಾ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಕಂದಾಯ ವಿಭಾಗದಿಂದ ನೋಟಿಸ್‌ ನೀಡಲಾಗಿದೆ.

ಕಳೆದ ಗುರುವಾರ ಮಹದೇವಪುರದ 60 ಆಸ್ತಿಗಳಿಗೆ ಹರಾಜು ನೋಟಿಸ್‌ ನೀಡಲಾಗಿತ್ತು. ಶುಕ್ರವಾರ ಇನ್ನುಳಿದ ಏಳು ವಲಯದ 548 ಆಸ್ತಿ ಮಾಲೀಕರಿಗೆ ತಮ್ಮ ಸ್ಥಿರಾಸ್ತಿ ಹರಾಜು ಹಾಕುವುದಾಗಿ ಬಿಬಿಎಂಪಿ ನೋಟಿಸ್‌ ನೀಡಿದ್ದು, ಈ ಮೂಲಕ ಒಟ್ಟು 608 ಆಸ್ತಿಗಳಿಗೆ ನೋಟಿಸ್‌ ನೀಡಿದೆ.

ತಕ್ಷಣವೇ ನಿಮ್ಮ ಆಸ್ತಿ ತೆರಿಗೆ ಪಾವತಿಸಿ:

ನಗರದಲ್ಲಿ 2 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರು ಸುಮಾರು 390 ಕೋಟಿ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ಹರಾಜು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ತಕ್ಷಣ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಕಂದಾಯ ವಿಭಾಗ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಯವಾರು ಆಸ್ತಿ ಹರಾಜು ನೋಟಿಸ್‌ ವಿವರ

ವಲಯ ಹರಾಜು ನೋಟಿಸ್‌ ಆಸ್ತಿ ಸಂಖ್ಯೆ

ಪೂರ್ವ 118

ಪಶ್ಚಿಮ 120

ದಕ್ಷಿಣ 109

ಮಹದೇವಪುರ 60

ಬೊಮ್ಮನಹಳ್ಳಿ 70

ಯಲಹಂಕ 40

ಆರ್.ಆರ್ ನಗರ 50

ದಾಸರಹಳ್ಳಿ 41

ಒಟ್ಟು 608