ಸಿಲಿಕಾನ್ ಸಿಟಿ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆ

| N/A | Published : Jul 11 2025, 10:54 AM IST

Kaveri software
ಸಿಲಿಕಾನ್ ಸಿಟಿ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದ್ದು, ವಿಶ್ವದಲ್ಲಿ ಪರಿಣಿತ ಟೆಕ್ಕಿಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದೆ. ಭಾರತದ ಒಟ್ಟು 6 ನಗರಗಳು ಈ ಪಟ್ಟಿಯಲ್ಲಿರುವುದು ವಿಶೇಷ.

 ನವದೆಹಲಿ: ಕರ್ನಾಟಕದ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದ್ದು, ವಿಶ್ವದಲ್ಲಿ ಪರಿಣಿತ ಟೆಕ್ಕಿಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದೆ. ಭಾರತದ ಒಟ್ಟು 6 ನಗರಗಳು ಈ ಪಟ್ಟಿಯಲ್ಲಿರುವುದು ವಿಶೇಷ.

ಈ ಬಗ್ಗೆ ಕೋಲಿಯರ್ಸ್ ಗ್ಲೋಬಲ್ ಟೆಕ್‌ ಮಾರ್ಕೆಟ್‌ ವರದಿ ಸಿದ್ಧಪಡಿಸಿದ್ದು, ಪ್ರಸ್ತಕ ವರ್ಷ 200ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆಯ ಟೆಕ್ ಉದ್ಯಮ ಆಧಾರವಾಗಿಟ್ಟುಕೊಂಡು ಪ್ರತಿಭೆ, ಬಂಡವಾಳ ಸೇರಿದಂತೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಆ ಪ್ರಕಾರ ಜಾಗತಿಕವಾಗಿ ಪರಿಣಿತ ಟೆಕ್ಕಿಗಳ ಪಟ್ಟಿಯಲ್ಲಿ ಭಾರತ ಮತ್ತು ಚೀನಾ ತನ್ನ ಪ್ರಾಬಲ್ಯ ಮುಂದುವರೆಸಿದೆ.

ಈ ಪಟ್ಟಿಯಲ್ಲಿ ಭಾರತದ ಆರು ನಗರಗಳು ಏಷ್ಯನ್ ಫೆಸಿಪಿಕ್ ರಾಷ್ಟ್ರಗಳ ಪಟ್ಟಿಯಲ್ಲಿ 10ರಲ್ಲಿ ಸ್ಥಾನ ಪಡೆದಿದೆ. ಬೆಂಗಳೂರು, ಹೈದರಾಬಾದ್‌, ಪುಣೆ, ದೆಹಲಿ, ಚೆನ್ನೈ, ಮುಂಬೈ ಆ ಪಟ್ಟಿಯಲ್ಲಿದೆ. ಸಿಂಗಾಪುರ ಅಗ್ರ 5ರಲ್ಲಿ ಸ್ಥಾನ ಪಡೆದ ಏಕೈಕ ಭಾರತದೇತರ ನಗರವಾಗಿದೆ. ಈ ಪಟ್ಟಿಯಲ್ಲಿ ಬೀಜಿಂಗ್ ಮತ್ತು ಟೋಕಿಯೋ ಕೂಡ ಇದೆ.

ಈ ವರದಿಯು ಬೆಂಗಳೂರಿನಲ್ಲಿ ಪರಿಣಿತ ಟೆಕ್ಕಿಗಳಿದ್ದು, ಜಾಗತಿಕ ತಂತ್ರಜ್ಞಾನವನ್ನು ಆಕರ್ಷಿಸುತ್ತಿದ್ದಾರೆ. ಇಲ್ಲಿ ಪ್ರತಿಭಾ ಸಾಂದ್ರತೆಯು ಹೆಚ್ಚಿದೆ. ಇತ್ತೀಚೆಗೆ ಯುವ ಟೆಕ್ಕಿಗಳೇ ಈ ವಲಯದಲ್ಲಿ ಹೆಚ್ಚಾಗುತ್ತಿದ್ದು 2014-2022ರ ಅವಧಿಯಲ್ಲಿ 25 ವರ್ಷ ಕ್ಕಿಂತ ಕೆಳಗಿನ ಉದ್ಯೋಗಿಗಳ ಪ್ರಮಾಣ ಶೇ.9 ರಷ್ಟು ಹೆಚ್ಚಾಗಿದೆ. ಇದು ಎಲ್ಲಾ ಉದ್ಯಮದ ಬೆಳವಣಿಗೆ ದರಕ್ಕಿಂತ ಶೇ.20ರಷ್ಟು ಅಧಿಕ. ಇದು ಮುಖ್ಯವಾಗಿ ಬೆಂಗಳೂರು, ಹೈದರಾಬಾದ್‌ ಮತ್ತು ಜಕಾರ್ತದಂತಹ ನಗರಗಳಲ್ಲಿ ಹೆಚ್ಚಿವೆ ಎಂದಿದೆ.

ಬೆಂಗಳೂರು ಮತ್ತು ಹೈದರಾಬಾದ್‌ ಟೆಕ್ಕಿಗಳ ಆದ್ಯತೆ ಸ್ಥಳಗಳಾಗಿದ್ದು, ಪ್ರತಿಭಾ ಲಭ್ಯತೆ, ಮಾಹಿತಿ ತಂತ್ರಜ್ಞಾನ ಸೌಕರ್ಯ, ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಜಾಗತಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತ ಉತ್ತಮ ಆಯ್ಕೆ ಎಂದು ವರದಿ ಹೇಳಿದೆ.

Read more Articles on