ಸಾರಾಂಶ
ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್‌ಸಿಎಲ್ ₹ 3000 ಕೋಟಿ ಸಾಲದ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ 2ನೇ ಹಂತದ ಯೋಜನೆಗೆ ಸಂಪೂರ್ಣ ಬಾಹ್ಯ ಸಾಲ ಪಡೆದಂತಾಗಿದೆ.
ಬೆಂಗಳೂರು : ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್‌ಸಿಎಲ್ ₹ 3000 ಕೋಟಿ ಸಾಲದ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ 2ನೇ ಹಂತದ ಯೋಜನೆಗೆ ಸಂಪೂರ್ಣ ಬಾಹ್ಯ ಸಾಲ ಪಡೆದಂತಾಗಿದೆ.
ಭಾರತ ಸರ್ಕಾರವು ಜರ್ಮನ್‌ನ ಹೂಡಿಕೆ ಬ್ಯಾಂಕ್ ಕೆಎಫ್‌ಡಬ್ಲ್ಯೂ ಜೊತೆ 3,044.54 ಕೋಟಿ (€340 ಮಿಲಿಯನ್) ಸಾಲಕ್ಕೆ ನವದೆಹಲಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೀಶಾ ಸಿನ್ಹಾ ಮತ್ತು ಕೆಎಫ್‌ಡಬ್ಲ್ಯೂ ಜರ್ಮನಿಯ ನಿರ್ದೇಶಕಿ (ದಕ್ಷಿಣ ಏಷ್ಯಾ) ಕ್ಯಾರೊಲಿನ್ ಗ್ಯಾಸ್ನರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಿಎಂಆರ್‌ಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಮಹೇಶ್ವರ್ ರಾವ್ ಅವರು ಕೆಎಫ್‌ಡಬ್ಲ್ಯೂ ಕಚೇರಿಯಲ್ಲಿ ಗ್ಯಾಸ್ನರ್ ಜೊತೆ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
2ನೇ ಹಂತದ ಯೋಜನೆ 75.06 ಕಿ.ಮೀ ಮಾರ್ಗದಲ್ಲಿ ವ್ಯಾಪಿಸಿದ್ದು ಈವರೆಗೆ ₹ 12,141.14 ಕೋಟಿ ಸಾಲವನ್ನು ಪಡೆದುಕೊಳ್ಳಲಾಗಿದೆ. ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ , ಏಜೆನ್ಸ್ ಫ್ರಾಂಕಾಯ್ಸ್ ಡಿ ಡೆವಲಪ್ಮೆಂಟ್ , ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ , ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಮೂಲಕ ₹ 9,096.60 ಕೋಟಿ ಸಾಲ ಪಡೆದುಕೊಂಡಿದ್ದು, ಈಗ ಜರ್ಮನಿಯ ಕೆಎಫ್‌ಡಬ್ಲ್ಯೂ ಬ್ಯಾಂಕ್ ಸಾಲ ಪಡೆಯಲಾಗಿದೆ.
ನಮ್ಮ ಮೆಟ್ರೋ 2ನೇ ಹಂತರ ಕಾಮಗಾರಿಗೆ ₹ 30,695 ಕೋಟಿ ಅನುಮೋದನೆ ನೀಡಲಾಗಿತ್ತು, ಆದರೆ ಕಾಮಗಾರಿ ವಿಳಂಬ, ಕಾಮಗಾರಿಗೆ ಹೆಚ್ಚಿನ ಭೂಮಿ ಅಗತ್ಯತೆ ಮತ್ತು ಇನ್ನಿತರ ಕಾರಣಗಳಿಂದ ಯೋಜನಾ ವೆಚ್ಚ ₹ 40,614.27 ಕೋಟಿ ಹೆಚ್ಚಳವಾಗಿದೆ.