ಮುಖ್ಯಮಂತ್ರಿ ಸಿದ್ದರಾಮಯ್ಯ ಹದಿನಾರನೇ ಬಜೆಟ್ : ಯಾವ ಜಿಲ್ಲೆಗೆ ಏನು ಕೊಡುಗೆ ? ಇಲ್ಲಿದೆ ಪೂರ್ಣ ವಿವರ

| N/A | Published : Mar 08 2025, 06:48 AM IST

'ತಂದೆಗೆ ನಾನು ಡಾಕ್ಟರ್ ಆಗಬೇಕೆಂಬ ಆಸೆ ಇತ್ತು' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಪರಿ ಇದು

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹದಿನಾರನೇ ಬಜೆಟ್ ಮಂಡನೆ ಮಾಡಿದ್ದು ರಾಜ್ಯದ ಯಾವ ಜಿಲ್ಲೆಗಳಿಗೆ ಏನೇನು ಕೊಡು ನೀಡಿದ್ದಾರೆ ಇಲ್ಲಿದೆ ಸಂಪೂರ್ಣ ವಿವರ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹದಿನಾರನೇ ಬಜೆಟ್ ಮಂಡನೆ ಮಾಡಿದ್ದು ರಾಜ್ಯದ ಯಾವ ಜಿಲ್ಲೆಗಳಿಗೆ ಏನೇನು ಕೊಡು ನೀಡಿದ್ದಾರೆ ಇಲ್ಲಿದೆ ಸಂಪೂರ್ಣ ವಿವರ

ಜಿಲ್ಲೆಗಳ ಬಜೆಟ್‌ ವಿವಿರ

1.ಬೀದರ್‌

*ಸರ್ಕಾರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್‌ ಪತ್ತೆ ವಿಭಾಗ ಆರಂಭ*ಎಸ್ಸಿ-ಎಸ್ಟಿ ಹಿಂದುಳಿದ ವರ್ಗಗಳ ವಸತಿ ಶಾಲೆ ಪಿಯು ಕಾಲೇಜಿನ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*100 ಅಭ್ಯರ್ಥಿಗಳಿಗೆ ಲಂಬಾಣಿ ಜನಾಂಗದ ಕಸೂತಿ ಕಲೆ ತರಬೇತಿ ಕೇಂದ್ರ

*ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್‌ ಪತ್ತೆ ವಿಭಾಗ ಆರಂಭ

*₹9 ಕೋಟಿ ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

2.ಕಲಬುರಗಿ

*₹100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್‌ ಮಾದರಿ ಕೇಂದ್ರ

*ಜೇವರ್ಗಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ನರ್ಸಿಂಗ್‌ ಕಾಲೇಜು

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಚಿತ್ತಾಪುರ ತಾಲೂಕಿನಲ್ಲಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ಆರಂಭ

*₹10 ಕೋಟಿ ವೆಚ್ಚದಲ್ಲಿ ಕೆಜಿಟಿಟಿಐ ಕೇಂದ್ರಗಳಲ್ಲಿ ಪ್ರಯೋಗಾಲಯ

*ಸೇಡಂ ಐಐಟಿ ಕೇಂದ್ರ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಉನ್ನತೀಕರಣ

*ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿಗೆ ಅನುದಾನ

*ವಾಗ್ದಾರಿ-ರಿಬ್ಬನ್‌ಪಳ್ಳಿ ರಸ್ತೆ ಅಭಿವೃದ್ಧಿ

*₹100 ಕೋಟಿ ವೆಚ್ಚದಲ್ಲಿ ಎಂಡೋಕ್ರೈನಾಲಜಿ ಸ್ಥಾಪನೆ

*₹92 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ

*₹304 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ

*₹9 ಕೋಟಿ ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

*ಪ್ರದೇಶಿಕ ಸಹಕಾರ ಭವನ ನಿರ್ಮಾಣಕ್ಕೆ ₹10 ಕೋಟಿ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

*ನೂತನ ಮೆಗಾ ಡೈರಿ ಪ್ರಾರಂಭಕ್ಕೆ ₹50 ಕೋಟಿ

*3000 ಹೆಕ್ಟೇರ್‌ನಲ್ಲಿ ಮಣ್ಣು ಮತ್ತು ನೀರು, ತ್ಯಾಜ್ಯ ನಿರ್ವಹಣೆ

*ಕೇಂದ್ರ ಸರ್ಕಾರದ ಸಹಯೋಗದಿಂದ ಪಿ.ಎಂ ಮಿತ್ರ ಜವಳಿ ಪಾರ್ಕ್‌

*ನವೋದ್ಯಮ ಪರಿಸರ ವ್ಯವಸ್ಥೆ

*ಅಗ್ರಿ-ಟೆಕ್‌ ವೇಗವರ್ಧಕ ಸ್ಥಾಪನೆ

*ಪ್ಲಗ್‌-ಆ್ಯಂಡ್‌-ಪ್ಲೇ ಸೌಲಭ್ಯವಿರುವ ಫ್ಲಾಟ್‌ ಫ್ಯಾಕ್ಟರಿ ಸ್ಥಾಪನೆ

3.ವಿಜಯಪುರ

*ಎಸ್ಸಿ-ಎಸ್ಟಿ ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*₹348 ಕೋಟಿ ವೆಚ್ಚದ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭ

*ಆಲಮಟ್ಟಿ ಡ್ಯಾಂ ಗೇಟನ್ನು 524.256 ಎತ್ತರಕ್ಕೇರಿಸಲು ಕ್ರಮ

*ತೊಗರಿ ಖರೀದಿ ಪ್ರೋತ್ಸಾಹಧನಕ್ಕೆ ₹138 ಕೋಟಿ

*3000 ಹೆಕ್ಟೇರ್‌ನಲ್ಲಿ ಮಣ್ಣು ಮತ್ತು ನೀರು, ತ್ಯಾಜ್ಯ ನಿರ್ವಹಣೆ

*ಮುದ್ದೆಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಆರಂಭ

*ತಿಡಗುಂಡಿಯಲ್ಲಿ ಪ್ಲಗ್‌-ಆ್ಯಂಡ್‌-ಪ್ಲೇ ಸೌಲಭ್ಯವಿರುವ ಫ್ಲಾಟ್‌ ಫ್ಯಾಕ್ಟರಿ

4.ಯಾದಗಿರಿ

*₹6 ಕೋಟಿ ವೆಚ್ಚದಲ್ಲಿ ನರ್ಸಿಂಗ್‌ ಕಾಲೇಜು ಆರಂಭ

*ಎಸ್ಸಿ-ಎಸ್ಟಿ ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಶಹಪುರಕ್ಕೆ ಒಳಚರಂಡಿ ವ್ಯವಸ್ಥೆ

*₹9 ಕೋಟಿ ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

*ಶಹಾಪುರದಲ್ಲಿ ಸುಸಜ್ಜಿತ ಕ್ರೀಡಾ ವಸತಿ ಶಾಲೆ ಆರಂಭಕ್ಕೆ ₹10 ಕೋಟಿ

5.ಬೆಳಗಾವಿ

*₹5 ಕೋಟಿಯಲ್ಲಿ ವಿಶೇಷ ಮಕ್ಕಳ ಸರ್ಕಾರಿ ವಸತಿ ಶಾಲೆ ಉನ್ನತೀಕರಣ

*ಎಸ್ಸಿ-ಎಸ್ಟಿ ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*ಬೈಲಹೊಂಗಲ ತಾಲೂಕಿನ ಸಂಗೊಳ್ಳಿ, ಖಾನಾಪುರ ತಾಲೂಕಿನ ನಂದಗಡದಲ್ಲಿ ಅಭಿವೃದ್ಧಿ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*₹10 ಕೋಟಿ ವೆಚ್ಚದಲ್ಲಿ ಕೆಜಿಟಿಟಿಐ ಕೇಂದ್ರಗಳಲ್ಲಿ ಪ್ರಯೋಗಾಲಯ

*ಐನಾಪುರ, ಎಂ.ಕೆ.ಹುಬ್ಬಳ್ಳಿ, ಕುಡಚಿ, ಬೈಲಹೊಂಗಲಕ್ಕೆ ಒಳಚರಂಡಿ ವ್ಯವಸ್ಥೆ

*ಬೈಲಹೊಂಗಲಕ್ಕೆ ವರ್ತುಲ ರಸ್ತೆ ನಿರ್ಮಾಣ

*50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

*ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ

*3000 ಹೆಕ್ಟೇರ್‌ನಲ್ಲಿ ಮಣ್ಣು ಮತ್ತು ನೀರು, ತ್ಯಾಜ್ಯ ನಿರ್ವಹಣೆ

*₹55 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ

*ಬೆಳಗಾವಿಯಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ

*ಕಿಯೋನಿಕ್ಸ್‌ ಮೂಲಕ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್‌ ಅಭಿವೃದ್ಧಿ

*ಪ್ಲಗ್‌-ಆ್ಯಂಡ್‌-ಪ್ಲೇ ಸೌಲಭ್ಯವಿರುವ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ)

*ಘಟಪ್ರಭಾದ ಆರೋಗ್ಯ ಧಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ಡಾ। ಎನ್‌.ಎಸ್‌.ಹರ್ಡೇಕರ ಸ್ಮಾರಕ

*ಸವದತ್ತಿ ಶ್ರೀ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ

*ಬೆಳಗಾವಿಯಲ್ಲಿ ಹೊಸ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ

6.ಬಾಗಲಕೋಟೆ

*ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಘಟಕ ವೈದ್ಯಕೀಯ ಕಾಲೇಜು

*ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ ಬಳಿ ಟ್ರಾಮಾ ಕೇರ್‌ ಸ್ಥಾಪನೆ

*ಎಸ್ಸಿ-ಎಸ್ಟಿ ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಬಾದಾಮಿ ಚಾಲುಕ್ಯ ಉತ್ಸವದಲ್ಲಿ ₹2 ಕೋಟಿ ವೆಚ್ಚದಲ್ಲಿ ನೃತ್ಯೋತ್ಸವ

7.ರಾಯಚೂರು

*₹50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪೆರಿಫೆರಲ್‌ ಕ್ಯಾನ್ಸರ್‌ ಚಿಕಿತ್ಸಾ ಘಟಕ ಸ್ಥಾಪನೆ

*ಎಸ್ಸಿ-ಎಸ್ಟಿ ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಜಿಟಿಟಿಸಿ ಸ್ಥಾಪನೆ

*ರಾಯಚೂರು ನಗರಕ್ಕೆ ವರ್ತುಲ ರಸ್ತೆ

*50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ

*3000 ಹೆಕ್ಟೇರ್‌ನಲ್ಲಿ ಮಣ್ಣು ಮತ್ತು ನೀರು, ತ್ಯಾಜ್ಯ ನಿರ್ವಹಣೆ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

* ರಾಯಚೂರಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್‌ ಸ್ಥಾಪನೆ

8.ಧಾರವಾಡ

*ಹುಬ್ಬಳ್ಳಿ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಯನ್ನು ಪ್ರೌಢಶಾಲೆ ಹಂತಕ್ಕೆ ಉನ್ನತೀಕರಣ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ನವಲಗುಂದ ತಾಲೂಕಿನ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕೆ ₹200 ಕೋಟಿ ವೆಚ್ಚ

* ಹುಬ್ಬಳ್ಳಿ-ಧಾರವಾಡದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ

* ಕಿಯೋನಿಕ್ಸ್‌ ಮೂಲಕ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್‌ ಅಭಿವೃದ್ಧಿ

* ಹುಬ್ಬಳ್ಳಿಯಲ್ಲಿ ಪ್ಲಗ್‌-ಆ್ಯಂಡ್‌-ಪ್ಲೇ ಸೌಲಭ್ಯವಿರುವ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ) ಸ್ಥಾಪನೆ

9.ಗದಗ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ರೋಣ ತಾಲೂಕಿನ ಕೋಟುಮಚಗಿಯಿಂದ ಕೊಪ್ಪಳ ಜಿಲ್ಲೆಯ ವೀರಾಪುರ ಗ್ರಾಮದ ವರೆಗೆ ಹಿರೇಹಳ್ಳದಲ್ಲಿ ಹೂಳೆತ್ತುವ ಕಾರ್ಯ

*ಮೆಡಿಕಲ್‌ ಕಾಲೇಜಿನಲ್ಲಿ ಸೂಪರ್‌ ಸ್ಪೇಷಾಲಿಟಿ ಕಾರ್‍ಡಿಯಾಕ್‌ ಯೂನಿಟ್‌ ಸ್ಥಾಪನೆಗೆ ₹10 ಕೋಟಿ

*ಡಂಬಳದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ

* ಲಕ್ಕುಂಡಿಯಲ್ಲಿರುವ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ

10.ಕೊಪ್ಪಳ

*₹100 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ

*ಯಲಬುರ್ಗಾದಲ್ಲಿ ₹6 ಕೋಟಿ ವೆಚ್ಚದಲ್ಲಿ ನರ್ಸಿಂಗ್‌ ಕಾಲೇಜು ಆರಂಭ

*ಎಸ್ಸಿ-ಎಸ್ಟಿ ಹಿಂದುಳಿದ ವರ್ಗಗಳ ವಸತಿ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿಗೆ ಅನುದಾನ

*ಕೊಪ್ಪಳ ಜಿಲ್ಲೆಯ ವೀರಾಪುರ ಗ್ರಾಮದ ವರೆಗೆ ಹಿರೇಹಳ್ಳದಲ್ಲಿ ಹೂಳೆತ್ತುವ ಕಾರ್ಯ

*₹9 ಕೋಟಿ ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ

*ಖಾಲಿಯಿರುವ 5267 ಶಿಕ್ಷಕರ ಹುದ್ದೆ ಭರ್ತಿಗೆ ಆದ್ಯತೆ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

*ಕುರಿ, ಮೇಕೆ ಮಾರುಕಟ್ಟೆಗೆ ಮೂಲಸೌಲಭ್ಯಕ್ಕೆ ₹25 ಕೋಟಿ

*ನೂತನ ನ್ಯಾಯಾಲಯ ಸಂರ್ಕಿರ್ಣ ನಿರ್ಮಾಣಕ್ಕೆ ₹50 ಕೋಟಿ

* ಯಲಬುರ್ಗಾದ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ₹6 ಕೋಟಿ

11.ಉತ್ತರ ಕನ್ನಡ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಕಾರವಾರ ನೌಕಾ ನೆಲೆಯ ವಿಮಾನ ನಿಲ್ದಾಣದ ಕಾಮಗಾರಿ ಆರಂಭ

*ಮಂಕಿ ಬಂದರು ನಿರ್ಮಾಣ, ಹೊನ್ನಾವರದಲ್ಲಿ ಹಡಗು ನಿರ್ಮಾಣ, ನದಿ ಕ್ರೂಸ್‌ ಪ್ರವಾಸೋದ್ಯಮಕ್ಕೆ ಡಿಪಿಆರ್‌

*ಕಡಲ ಕೊರತೆ ತಡೆಗೆ ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಪ್ಲ್ಯಾನ್‌ ಜಾರಿಗೆ ಡಿಪಿಆರ್‌

*₹200 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆ

*ಕೆಎಫ್‌ಡಿ ನಿಯಂತ್ರಣಕ್ಕಾಗಿ ₹ 50 ಕೋಟಿ

*ಮೀನುಗಾರಿಕೆ ಕೊಂಡಿ ರಸ್ತೆ ಅಭಿವೃದ್ಧಿಗೆ ₹30 ಕೋಟಿ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

*ಜೊಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲೂಕಾಗಿಸಲು ಒತ್ತು

* ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯ ಉನ್ನತೀಕರಣ

12.ಹಾವೇರಿ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

* ರಾಣೆಬೆನ್ನೂರಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್‌ ಸ್ಥಾಪನೆ

13.ವಿಜಯನಗರ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಇಂಡಿಯಲ್ಲಿ ಜಿಟಿಟಿಸಿ ಸ್ಥಾಪನೆ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

* ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ

14.ಬಳ್ಳಾರಿ

*ಸರ್ಕಾರಿ ಶ್ರವಣ ದೋಷವುಳ್ಳ ಮಕ್ಕಳ ಶಾಲೆ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೆ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಕಂಪ್ಲಿಯಲ್ಲಿ ಜಿಟಿಟಿಸಿ ಸ್ಥಾಪನೆ

*₹9 ಕೋಟಿ ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ಲಸಿಕೆ

*ಖಾಲಿಯಿರುವ 5267 ಶಿಕ್ಷಕರ ಹುದ್ದೆ ಭರ್ತಿಗೆ ಆದ್ಯತೆ

*50 ಶಾಲೆಗಳನ್ನು ಕೆಪಿಎಸ್‌ ಶಾಲೆಯನ್ನಾಗಿಸಲು ₹200 ಕೋಟಿ

*ಹೈನುಗಾರಿಕೆ ಉತ್ತೇಜನಕ್ಕೆ ₹10 ಕೋಟಿ ಅನುದಾನ

*ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ

15.ಶಿವಮೊಗ್ಗ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಶಿಕಾರಿಪುರ, ಸಾಗರಕ್ಕೆ ಒಳಚರಂಡಿ ವ್ಯವಸ್ಥೆ

*₹200 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆ

*ಕೆಎಫ್‌ಡಿ ನಿಯಂತ್ರಣಕ್ಕಾಗಿ ₹ 50 ಕೋಟಿ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

16.ದಾವಣಗೆರೆ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*ಸೂರಗೊಂಡನ ಕೊಪ್ಪದಲ್ಲಿ ವಸತಿ ಶಾಲೆ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*100 ಅಭ್ಯರ್ಥಿಗಳಿಗೆ ಲಂಬಾಣಿ ಜನಾಂಗದ ಕಸೂತಿ ಕಲೆ ತರಬೇತಿ

*ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ₹650 ಕೋಟಿ

*30 ಕೆರೆಗಳನ್ನು ತುಂಬಿಸಲು ₹2611 ಕೋಟಿ ಅನುದಾನ

*ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ

*ಕೊಂಡಜ್ಜಿ ಬೆಟ್ಟದಲ್ಲಿರುವ ವೃತ್ತಿರಂಗಭೂಮಿ ರಂಗಾಯಣದಲ್ಲಿ ಥಿಯೇಟರ್‌ ಮ್ಯೂಸಿಯಂ

17.ಚಿತ್ರದುರ್ಗ

*ಚಿತ್ರದುರ್ಗದಲ್ಲಿ ಟ್ರಾಮಾ ಕೇರ್‌ ಸ್ಥಾಪನೆ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಸಾಮರ್ಥ್ಯದ ಸ್ಥಾಪನೆ

*30 ಕೆರೆಗಳನ್ನು ತುಂಬಿಸಲು ₹2611 ಕೋಟಿ ಅನುದಾನ

*₹12ಕೋಟಿ ಅನುದಾನದಲ್ಲಿ ಸ್ವಯಂಚಾಲಿತ ಪರೀಕ್ಷ ಪಥ ನಿರ್ಮಾಣ

* ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ

18.ಉಡುಪಿ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಕಡಲ ಕೊರತೆ ತಡೆಗೆ ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಪ್ಲ್ಯಾನ್‌ ಜಾರಿಗೆ ಡಿಪಿಆರ್‌

*ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಲ್ಟಿ ಲೆವಲ್‌ ಪಾರ್ಕಿಂಗ್‌ ವ್ಯವಸ್ಥೆ

*ಮೀನುಗಾರಿಕೆ ಕೊಂಡಿ ರಸ್ತೆ ಅಭಿವೃದ್ಧಿಗೆ ₹30 ಕೋಟಿ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

* ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ₹3 ಕೋಟಿ ಅನುದಾನ

19.ಚಿಕ್ಕಮಗಳೂರು

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*₹200 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

* ಚಿಕ್ಕಮಗಳೂರು ಹಾಗೂ ಕಡೂರಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್‌ ಸ್ಥಾಪನೆ.

20. ತುಮಕೂರು

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಮಧುಗಿರಿಯಲ್ಲಿ ಜಿಟಿಟಿಸಿ ಸ್ಥಾಪನೆ

*ಮಧುಗಿರಿ, ಕೊರಟಗೆಯಲ್ಲಿ 62 ಕೆರೆ ತುಂಬಿಸಲು ₹553 ಕೋಟಿ

*30 ಕೆರೆಗಳನ್ನು ತುಂಬಿಸಲು ₹2611 ಕೋಟಿ ಅನುದಾನ

*ತುಮಕೂರು ಕೈಗಾರಿಕಾ ನೋಡ್‌ನಲ್ಲಿ ಜಪಾನೀಸ್‌ ಇಂಡಸ್ಟ್ರಿಯಲ್‌ ಪಾರ್ಕ್‌ ಸ್ಥಾಪನೆ.

21.ಚಿಕ್ಕಬಳ್ಳಾಪುರ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಚಿಂತಾಮಣಿಯಲ್ಲಿ ಸರ್‌ಎಂವಿ ಕಾಲೇಜು ಸ್ಥಾಪನೆಗೆ ₹150 ಕೋಟಿ

*ಎಚ್‌.ಎನ್‌ ವ್ಯಾಲಿ ಯೋಜನೆಯಡಿ 24 ಕೆರೆ ಭರ್ತಿಗೆ ₹70 ಕೋಟಿ

*ಹೈಟೆಕ್‌ ಹೂವಿನ ಮಾರುಕಟ್ಟೆ ಸ್ಥಾಪನೆ

*ಸಿಆರ್‌ಪಿಎಫ್‌ ಸ್ಥಾಪನೆಗೆ ₹ 80 ಕೋಟಿ

*ಡಾ। ಎಚ್‌.ನರಸಿಂಹಯ್ಯ ಅಧ್ಯಯನ ಮಾಡಿದ ಗೌರಿಬಿದನೂರಿನ ಸರ್ಕಾರಿ ಶಾಲೆ ಉನ್ನತೀಕರಣ

22.ದಕ್ಷಿಣ ಕನ್ನಡ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಉಳ್ಳಾಲ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿ.ಯು. ಕಾಲೇಜು

*10 ಕೋಟಿ ವೆಚ್ಚದಲ್ಲಿ ಕೆಜಿಟಿಟಿಐ ಕೇಂದ್ರಗಳಲ್ಲಿ ಪ್ರಯೋಗಾಲಯ

*ಉಳ್ಳಾಲ ₹705 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ

*ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್‌, ವಾಟರ್‌ ಮೆಟ್ರೋ, ಕೋಸ್ಟಲ್‌ ಬರ್ತ್‌ಗೆ ಡಿಪಿಆರ್‌

*ಕಡಲ ಕೊರತೆ ತಡೆಗೆ ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಪ್ಲ್ಯಾನ್‌ ಜಾರಿಗೆ ಡಿಪಿಆರ್‌

*ಮಂಗಳೂರಿನಲ್ಲಿ ಜಲ ಸಾರಿಗೆ ಸಂಗ್ರಹಾಲಯ ಮತ್ತು ಅನುಭವ ಕೇಂದ್ರ ಸ್ಥಾಪನೆ

*₹200 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆ

*ಕೆಎಫ್‌ಡಿ ನಿಯಂತ್ರಣಕ್ಕಾಗಿ ₹ 50 ಕೋಟಿ

*ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭ

*ವೆನ್ಲಾಕ್‌ ಆಸ್ಪತ್ರೆ ಅಭಿವೃದ್ಧಿಗೆ ₹650 ಕೋಟಿ

*ಪಿಲಕುಳದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್ ತರಬೇತಿ ಕೇಂದ್ರದ ಅಭಿವೃದ್ಧಿಗೆ ₹2 ಕೋಟಿ

*ಮೀನುಗಾರಿಕೆ ಕೊಂಡಿ ರಸ್ತೆ ಅಭಿವೃದ್ಧಿಗೆ ₹30 ಕೋಟಿ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

*ಮಂಗಳೂರಿನಲ್ಲಿರುವ ಮೀನಿಗಾರಿಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲ ದ್ವಿಗುಣಕ್ಕೆ ಒತ್ತು

* ಮಂಗಳೂರು-ಮಣಿಪಾಲ್‌ನಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ

* ಮಂಗಳೂರಲ್ಲಿ ಪ್ಲಗ್‌-ಆ್ಯಂಡ್‌-ಪ್ಲೇ ಸೌಲಭ್ಯವಿರುವ ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ) ಸ್ಥಾಪನೆ

* ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯ ಉನ್ನತೀಕರಣ

* ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ₹3 ಕೋಟಿ ಅನುದಾನ

23.ಹಾಸನ

**ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*₹200 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

* ಬೇಲೂರು-ಹಳೇಬಿಡು ತಾಣಗಳ ಅಭಿವೃದ್ಧಿಗೆ ಒತ್ತು

24.ಬೆಂಗಳೂರು ಗ್ರಾಮಾಂತರ

**ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ದೇವನಹಳ್ಳಿಗೆ ಮೆಟ್ರೋ ವಿಸ್ತರಣೆ

*ದೇವನಹಳ್ಳಿ- ವಿಜಯಪುರ- ಎಚ್.ಕ್ರಾಸ್- ವೇಮಗಲ್‌- ಮಾಲೂರುವರೆಗೆ 30 ಕಿ.ಮೀ. ರಸ್ತೆ ಅಭಿವೃದ್ಧಿ

* ಆದಿನಾರಾಯಣ ಹೊಸಹಳ್ಳಿಯಲ್ಲಿ ಜಿಲ್ಲಾ ಕ್ರೀಡಾಂಗಣ, ಸೈಕ್ಲಿಂಗ್‌ ವೆಲೋಡ್ರೋಮ್‌

* ಜಿಲ್ಲೆಯಲ್ಲಿ 41 ಕೆರೆ ತುಂಬಿಸಲು ಕಾಮಗಾರಿ ಜಾರಿ

25. ಕೋಲಾರ*ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ರೈತರ ಆಧುನಿಕ ಮಾರುಕಟ್ಟೆ ಸ್ಥಾಪನೆ

*ಸಿಆರ್‌ಪಿಎಫ್‌ ಸ್ಥಾಪನೆಗೆ ₹ 80 ಕೋಟಿ

*ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿ ಸೆಕ್ಟೆರ್‌ ನೆಟ್‌ ಝಿರೋ ಸಸ್ಟೈನಬಿಲಿಟಿ ಪಾರ್ಕ್‌

* ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ

26.ಕೊಡಗು

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*ಬುಡಕಟ್ಟು ವಸತಿ ಶಾಲೆ 12ನೇ ತರಗತಿವರೆಗೆ ಮೇಲ್ದರ್ಜೆಗೆ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆಯಲ್ಲಿ ಮಳೆಯಿಂದ ಹಾಳಾದ ರಸ್ತೆ, ಸೇತುವೆಗಳ ಪುನರ್‌ ನಿರ್ಮಾಣ

*₹200 ಕೋಟಿ ವೆಚ್ಚದಲ್ಲಿ ಭೂಕುಸಿತ ತಡೆ

*ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆ

*ಎಲೆ ಚುಕ್ಕೆ ರೋಗ ತಡೆಗೆ ಅಡಿಕೆ ಸಸ್ಯ ಸಂರಕ್ಷಣೆಗಾಗಿ ₹62 ಕೋಟಿ ಮೀಸಲು

27.ಮೈಸೂರು

*ಎಂಡೋಕ್ರೈನಾಲಜಿ ಕೇಂದ್ರ ಆರಂಭ

*₹100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್‌ ಮಾದರಿ ಕೇಂದ್ರ ಸ್ಥಾಪನೆ

*₹5 ಕೋಟಿಯಲ್ಲಿ ವಿಶೇಷ ಮಕ್ಕಳ ಸರ್ಕಾರಿ ವಸತಿ ಶಾಲೆ ಉನ್ನತೀಕರಣ

*ಎಸ್ಸಿ-ಎಸ್ಟಿ ಹಿಂದುಳಿದ ವರ್ಗಗಳ ವಸತಿ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*ಬುಡಕಟ್ಟು ವಸತಿ ಶಾಲೆ 12ನೇ ತರಗತಿವರೆಗೆ ಮೇಲ್ದರ್ಜೆಗೆ

*ಬುಡಕಟ್ಟು ವಸ್ತು ಸಂಗ್ರಹಾಲಯ ಸ್ಥಾಪನೆ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ವರುಣಾದಲ್ಲಿ ₹60 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ

*ವಿಮಾನ ನಿಲ್ದಾಣ ವಿಸ್ತರಣೆಗೆ ಯುಟಿಲಿಟಿ ಶಿಫ್ಟಿಂಗ್‌ಗೆ ಕ್ರಮ

*ಚಿತ್ರ ನಗರ ನಿರ್ಮಾಣಕ್ಕೆ ಬದ್ಧತೆ

*₹100 ಕೋಟಿ ವೆಚ್ಚದಲ್ಲಿ ಎಂಡೋಕ್ರೈನಾಲಜಿ ಸ್ಥಾಪನೆ

*ತಗಡೂರು ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಒತ್ತು

*ಮೈಸೂರಿನ ವಿವಿಯಲ್ಲಿ ಪ್ರೊ.ನಂಜುಂಡಸ್ವಾಮಿ ಪೀಠ ಆರಂಭ

*ನಬಾರ್ಡ್‌ ಸಹಯೋಗದಲ್ಲಿ ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ

*ಬನ್ನಿಮಂಟಪದಲ್ಲಿ ₹120 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ

*₹3 ಕೋಟಿ ವೆಚ್ಚದಲ್ಲಿ ಹೊಸ ಅಗ್ನಿ ಶಾಮಕ ಠಾಣೆ ಸ್ಥಾಪನೆ

*ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ

* ಮೈಸೂರಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ

* ಕಿಯೋನಿಕ್ಸ್‌ ಮೂಲಕ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್‌ ಅಭಿವೃದ್ಧಿ

* 150 ಎಕರೆ ಪ್ರದೇಶದಲ್ಲಿ ಪ್ರಿಂಟೆಡ್‌ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಅಭಿವೃದ್ಧಿ

*ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2500 ತಾಳೆಗರಿ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ₹1 ಕೋಟಿ

* ಮೈಸೂರು ರಂಗಾಯಣಕ್ಕೆ ₹2 ಕೋಟಿ

* ಸೋಮನಾಥಪುರ ತಾಣಗಳ ಅಭಿವೃದ್ಧಿಗೆ ಒತ್ತು

* ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯ

* ಟಿ.ನರಸೀಪುರ ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ ₹6 ಕೋಟಿ

* ಹೊಸ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ

* ಕುಸ್ತಿ, ವಾಲಿಬಾಲ್‌, ಖೋಖೋ ಅಕಾಡೆಮಿ ಸ್ಥಾಪನೆಗೆ ₹2 ಕೋಟಿ

28.ಮಂಡ್ಯ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಶ್ರೀರಂಗಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ

*ಮದ್ದೂರಿನಲ್ಲಿ ರಸ್ತೆ ಅಗಲೀಕರಣಕ್ಕೆ ವಿಸ್ತೃತ ಯೋಜನೆ

*3000 ಹೆಕ್ಟೇರ್‌ನಲ್ಲಿ ಮಣ್ಣು ಮತ್ತು ನೀರು, ತ್ಯಾಜ್ಯ ನಿರ್ವಹಣೆ

*ಕೃಷಿ ವಿವಿ ಮೂಲ ಸೌಕರ್ಯಕ್ಕೆ ₹25 ಕೋಟಿ

29.ರಾಮನಗರ

*ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್‌ ಪಿಯು ಕಾಲೇಜನ್ನಾಗಿ ಉನ್ನತೀಕರಣ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*₹705 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ

*ರಾಮನಗರ, ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆ ಕಾಮಗಾರಿಗೆ ₹250 ಕೋಟಿ

*ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ

30.ಬೆಂಗಳೂರು

*ನೆಫ್ರೋ-ಯುರಾಲಜಿ ಸಂಸ್ಥೆ ಕಟ್ಟಣ ಪೂರ್ಣಗೊಳಿಸುವ ಗುರಿ

*ಬೌರಿಂಗ್‌ ಮತ್ತು ಲೇಡಿ ಕರ್ಜನ್ ಆಸ್ಪತ್ರೆ 500 ಹಾಸಿಗೆ ಆಸ್ಪತ್ರೆ ಶೀಘ್ರ ಪೂರ್ಣ

*ಎಸ್ಸಿ-ಎಸ್ಟಿ ಹಿಂದುಳಿದ ವರ್ಗಗಳ ವಸತಿ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಾಸಿಕ ಆರೋಗ್ಯ ಕೇಂದ್ರ ಆರಂಭ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*ಒಬಿಸಿ ಅಭ್ಯರ್ಥಿಗಳು ಐಎಎಸ್‌, ಐಪಿಎಸ್‌, ಕೆಎಎಸ್‌, ಕೆಎಸ್‌ಪಿಎಸ್‌ ಅಭ್ಯಾಸಕ್ಕೆ 2 ವಸತಿ ನಿಲಯ

*ಬೌದ್ಧ ಅಧ್ಯಯನ ಅಕಾಡೆಮಿ ಆರಂಭ

*ಮಹಾಬೋಧಿ 100 ವರ್ಷ ಹಳೆಯ ಗ್ರಂಥಾಲಯ ಡಿಜಿಟಲೀಕರಣ

*ಆನೇಕಲ್‌ ತಾಲೂಕಿನ ಸೂರ್ಯನಗರದ 4ನೇ ಹಂತದಲ್ಲಿ 16,140 ನಿವೇಶನ ಅಭಿವೃದ್ಧಿ

*ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಯೋಜನೆಗೆ 121 ಕೋಟಿ.

*ಅಂತಾರಾಷ್ಟ್ರೀಯ ಉದ್ಯೋಗ ಮೇಳ

*ಇಂಡಿಯಾ ಸ್ಕಿಲ್ಸ್‌ ಸ್ಪರ್ಧೆ ಆಯೋಜನೆ

*₹10 ಕೋಟಿ ವೆಚ್ಚದಲ್ಲಿ ಕೆಜಿಟಿಟಿಐ ಕೇಂದ್ರಗಳಲ್ಲಿ ಪ್ರಯೋಗಾಲಯ

*ಮೆಟ್ರೋ 3ನೇ ಹಂತದಲ್ಲಿ 40.50 ಕಿ.ಮೀ. ಡೆಕ್ಕರ್‌ ಫ್ಲೈಓವರ್

*ಕಾಲುವೆ ಬಫರ್‌ ಝೋನ್‌ ಬಳಸಿ 300 ಕಿ.ಮೀ. ರಸ್ತೆ ನಿರ್ಮಾಣ

*460 ಕಿ.ಮೀ. ಆರ್ಟಿರಿಯಲ್‌, ಸಬ್‌ಆರ್ಟಿರಿಯಲ್‌ ರಸ್ತೆ ಅಭಿವೃದ್ಧಿಗೆ ₹660 ಕೋಟಿ ವೆಚ್ಚ

*120 ಕಿ.ಮೀ. ಉದ್ದದ ಫ್ಲೈಓವರ್, ಗ್ರೇಡ್‌ ಸೆಪರೇಟರ್‌ ನಿರ್ಮಾಣ

*ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ 21 ಯೋಜನೆಗೆ ₹1800 ಕೋಟಿ

*₹413 ಕೋಟಿ ವೆಚ್ಚದಲ್ಲಿ ಸಮಗ್ರ ಆರೋಗ್ಯ ಯೋಜನೆ ಅನುಷ್ಠಾನ

*ಪ್ರವಾಹ ನಿಯಂತ್ರಿಸಲು ಬಿಬಿಎಂಪಿ, ಜಲ ಮಂಡಳಿಗಳಿಗೆ ₹3000 ಕೋಟಿ

*ಜಲಮಂಡಳಿಯಿಂದ ಬಯೋಗ್ಯಾಸ್‌ ಆದಾಯ ಕಾರ್ಬನ್‌ ಕ್ರೆಡಿಟ್‌ ಯೋಜನೆ

*ಬಿಸಿನೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಭೂಸ್ವಾಧೀನ ಆರಂಭ

*98.60 ಕಿ.ಮೀ.ಗೆ ಮೆಟ್ರೋ ವಿಸ್ತರಣೆ.

*ಕಾವೇರಿ 6ನೇ ಹಂತ ಅನುಷ್ಠಾನಕ್ಕೆ ಡಿಪಿಆರ್‌.

*ವರ್ತೂರು, ಬೆಳ್ಳಂದೂರು ಕೆರೆಗಳ ಪುನರುಜ್ಜೀವನಕ್ಕೆ 234 ಕೋಟಿ ವೆಚ್ಚ

*ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ ₹7000 ಕೋಟಿ ಅನುದಾನ

*ಯೋಜನೆಗಳ ಅನುಷ್ಠಾನಕ್ಕೆ ಹೊಸ ಉದ್ದೇಶಿತ ಸಂಸ್ಥೆ ಸ್ಥಾಪನೆ

*ಬೈಯಪ್ಪನಹಳ್ಳಿ- ಹೊಸೂರು, ಯಶವಂತಪುರ ಚನ್ನಸಂದ್ರ ರೈಲ್ವೆ ದ್ವಿಪಥೀಕರಣಕ್ಕೆ ₹406 ಕೋಟಿ

*₹239 ಕೋಟಿ ವೆಚ್ಚದಲ್ಲಿ ಮಳೆ ನೀರು ಚರಂಡಿ ಪುನರ್‌ ನಿರ್ಮಾಣ, ಕೆರೆಗಳ ಪುನಃಶ್ಚೇತನ

*ನಂದಿನಿ ಲೇಔಟ್‌ನಲ್ಲಿ ಬಹುಪರೆದೆಯ ಚಿತ್ರ ಮಂದಿರ ನಿರ್ಮಾಣ

*7 ಪೊಲೀಸ್‌ ಠಾಣೆ, ಕಚೇರಿ ಪೂರ್ಣ

*30 ಕೋಟಿ ವೆಚ್ಚದಲ್ಲಿ 12 ಪೊಲೀಸ್‌ ಠಾಣೆ, 1 ಉಪವಿಭಾಗ ಕಚೇರಿ, 1 ವೃತ್ತ ಕಚೇರಿ, 1 ಹೊರಠಾಣೆಗಳ ನಿರ್ಮಾಣ

*ನೆಫ್ರೋ-ಯುರಾಲಜಿ ಕಟ್ಟಡ ನಿರ್ಮಾಣಕ್ಕೆ ₹26 ಕೋಟಿ

*ಬೆಂ.ಉತ್ತರ ತಾಲೂಕಿನಲ್ಲಿ ₹150 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ

*ನಗರ ವಿವಿಯನ್ನು ಮನಮೋಹನ್‌ ಸಿಂಗ್‌ ವಿವಿ ಎಂದು ನಾಮಕರಣ

*ಬೆಂ. ಪೂರ್ವ ತಾಲೂಕಿನ 18 ಕೆರೆ ಭರ್ತಿಗೆ ₹93.50 ಕೋಟಿ

*ನಗರದ ಹೊರವಲಯದಲ್ಲಿ ಸ್ಯಾಟಲೈಟ್‌ ಮಾರ್ಕೆಟ್‌ ಸ್ಥಾಪನೆ

*ನಗರಾಭಿವೃದ್ಧಿ ಬ್ರ್ಯಾಂಡ್‌ ಬೆಂಗಳೂರಿಗೆ ಆದ್ಯತೆ

*ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಫೀನೋಟೈಪಿಂಗ್‌ ಸೌಲಭ್ಯ

*ಕೆ,ಆರ್‌.ಪುರಂನಲ್ಲಿ ಹೊಸ ಸ್ಯಾಟಲೈಟ್‌ ಬಸ್‌ ನಿಲ್ದಾಣ ನಿರ್ಮಾಣ

*ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಸಾರಿಗೆ ಹಬ್‌ ನಿರ್ಮಾಣ

*ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ

*ಐಐಎಸ್ಸಿ ಜತೆ ₹48 ಕೋಟಿ ವೆಚ್ಚದಲ್ಲಿ ಕ್ವಾಂಟಮ್‌ ರಿಸರ್ಚ್‌ ಪಾರ್ಕ್‌ ಹಂತ-2 ಸ್ಥಾಪನೆ

* ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್‌ನ ಪುನರ್ ನಿರ್ಮಾಣಕ್ಕೆ ₹57 ಕೋಟಿ

* ಕಿಯೋನಿಕ್ಸ್‌ ಮೂಲಕ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್‌ ಅಭಿವೃದ್ಧಿ

*ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರ ಸ್ಥಾಪನೆ

*ಡಾ। ಜಿ.ಎಸ್.ಶಿವರುದ್ರಪ್ಪ ಟ್ರಸ್ಟ್‌ ಕಾರ್ಯ ಚಟುವಟಿಕೆಗೆ ₹1 ಕೋಟಿ ವೆಚ್ಚದಲ್ಲಿ ಕಟ್ಟಡ

* ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ ಅಭಿವೃದ್ಧಿ

*ವಿದ್ಯಾನಗರದಲ್ಲಿರುವ ಈಜುಕೋಳ ಅಂತಾರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಣ

*3000 ಕೊಳಚೆ ನೀರು ಸಂಸ್ಕರಣಾ ಘಟಕ ಕಾರ್ಯಾಚರಣೆಯ ಮೇಲುಸ್ತುವರಿಗೆ ತಂತ್ರಾಂಶ ಬಳಕೆ

*ಬಿಬಿಎಂಪಿ ವ್ಯಾಪ್ತಿಯಲ್ಲಿ ₹2000 ಕೋಟಿ ವೆಚ್ಚದಲ್ಲಿ ಪ್ರವಾಹ ನಿರ್ವಹಣಾ ವ್ಯವಸ್ಥೆ

*ಜಲಮಂಡಳಿಯಿಂದ ₹1070 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ, ಒಳಚರಂಡಿ ಪಂಪಿಂಗ್‌ ವ್ಯವಸ್ಥೆ

31.ಚಾಮರಾಜನಗರ

*ಎಸ್ಸಿ-ಎಸ್ಟಿ ಹಿಂದುಳಿದ ವರ್ಗಗಳ ವಸತಿ ಶಾಲೆ ಪಿಯು ಕಾಲೇಜನ್ನಾಗಿ ಉನ್ನತೀಕರಣ

*ಬುಡಕಟ್ಟು ವಸತಿ ಶಾಲೆ 12ನೇ ತರಗತಿವರೆಗೆ ಮೇಲ್ದರ್ಜೆಗೆ

*2 ಮೆಟ್ರಿಕ್‌ ನಂತರದ ವಸತಿ ನಿಲಯ

*₹12ಕೋಟಿ ಅನುದಾನದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣ

*₹2 ಕೋಟಿ ವೆಚ್ಚದಲ್ಲಿ ಒಲಂಪಿಕ್ಸ್ ಮಾದರಿ ಈಜುಕೋಳ ನಿರ್ಮಾಣ