ಸಾರಾಂಶ
ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ವಿಭಾಗದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ವಾರ್ತಾ ಇಲಾಖೆಯಿಂದ ಕೊಡಮಾಡುವ 2017ರಿಂದ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರು : ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ವಿಭಾಗದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ವಾರ್ತಾ ಇಲಾಖೆಯಿಂದ ಕೊಡಮಾಡುವ 2017ರಿಂದ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ‘ಕನ್ನಡಪ್ರಭ’ ಕಾರ್ಯನಿರ್ವಾಹಕ ಸಂಪಾದಕ ಎಸ್.ಗಿರೀಶ್ ಬಾಬು ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಶೇಷ ಯೋಜನೆಗಳ ಸಂಪಾದಕ ವಿನೋದ ಕುಮಾರ್ ಬಿ.ನಾಯ್ಕ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರೊಂದಿಗೆ ಎರಡೂ ವಿಭಾಗದಲ್ಲಿ ತಲಾ 7 ಮಂದಿ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಗೆ ಅರ್ಹರ ಆಯ್ಕೆಗಾಗಿ ವಾರ್ತಾ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ಸಮಿತಿಯು ಹಲವು ವರದಿಗಳನ್ನು ಪರಿಶೀಲಿಸಿ 14 ಅರ್ಹ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಗಿರೀಶ್ ಬಾಬು ಅವರು ಸಮಾಜದಲ್ಲಿ ಬದಲಾವಣೆ ತರುವಂತಹ ಹಲವು ವಿಶೇಷ ವರದಿಗಳನ್ನು ಬರೆದಿದ್ದನ್ನು ಗುರುತಿಸಿ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಪರಿಣಾಮಕಾರಿ ವರದಿ ಮಾಡಿದ್ದಕ್ಕಾಗಿ ವಿನೋದಕುಮಾರ್ ಬಿ.ನಾಯ್ಕ್ ಅವರಿಗೆ 2019ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರ ವಿವರ:
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: ವಿಜಯಲಕ್ಷ್ಮೀ ಶಿಬರೂರು (2017), ಬಿಎಂಟಿ ರಾಜೀವ್ (2018), ವಿನೋದಕುಮಾರ್ ಬಿ.ನಾಯ್ಕ್ (2019), ಮಾಲತೇಶ ಅಂಗೂರ (2020), ಸುಧೀರ್ ಶೆಟ್ಟಿ (2021), ಮಲ್ಲಿಕಾರ್ಜುನ ಹೊಸಪಾಳ್ಯ (2022), ಆರ್.ಮಂಜುನಾಥ (2023).
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: ಚೀ.ಜ.ರಾಜೀವ (2017), ದೇವಯ್ಯ ಗುತ್ತೇದಾರ್ (2018), ಗಿರೀಶ್ ಲಿಂಗಣ್ಣ (2019), ಎಂ.ಎನ್.ಯೋಗೇಶ್ (2020), ನೌಶಾದ್ ಬಿಜಾಪುರ (2021), ಜಿ.ಟಿ. ಸತೀಶ್ (2022), ಎಸ್.ಗಿರೀಶ್ ಬಾಬು (2023).