ಸಾರಾಂಶ
ಮೆಟ್ರೋ ರೈಲು ಯೋಜನೆಯ ಹಂತ-2ಎ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮಾರ್ಗದವರೆಗಿನ ಹೊರವರ್ತುಲ ರಸ್ತೆಯ ಮಾರ್ಗದಲ್ಲಿ ಬರುವ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಎಂಬಸಿ ಆಫೀಸ್ ಪಾರ್ಕ್ಸ್ (ಆರ್‌ಇಐಟಿ) ₹100 ಕೋಟಿ ನೀಡಲು ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು : ಮೆಟ್ರೋ ರೈಲು ಯೋಜನೆಯ ಹಂತ-2ಎ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮಾರ್ಗದವರೆಗಿನ ಹೊರವರ್ತುಲ ರಸ್ತೆಯ ಮಾರ್ಗದಲ್ಲಿ ಬರುವ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಎಂಬಸಿ ಆಫೀಸ್ ಪಾರ್ಕ್ಸ್ (ಆರ್‌ಇಐಟಿ) ₹100 ಕೋಟಿ ನೀಡಲು ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದದ ಪ್ರಕಾರ ಎಂಬಸಿ ಆರ್‌ಇಐಟಿಯ ಭಾಗವಾಗಿರುವ ವಿಕಾಸ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್), ಕಾಡುಬೀಸನಹಳ್ಳಿಯಲ್ಲಿ ನಿಲ್ದಾಣದಲ್ಲಿ ಹೊಸ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಒಪ್ಪಂದಂತೆ ₹100 ಕೋಟಿ ನೀಡಲಿದೆ. ‘ಎಂಬೆಸಿ ಟೆಕ್ ವಿಲೇಜ್ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ’ ಎಂದು ಮರು ನಾಮಕರಣ ಮಾಡಲಾಗುವುದು. 30 ವರ್ಷಗಳ ಅವಧಿಗೆ ಜಾಹೀರಾತು, ವಾಣಿಜ್ಯ ಸ್ಥಳ ಮತ್ತು ನೇರ ಸಂಪರ್ಕದ ಜೊತೆಗೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕುಗಳನ್ನು ಬಿಎಂಆರ್‌ಸಿಎಲ್ ಕಂಪನಿಗೆ ನೀಡಲಿದೆ.
ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣವು 17 ಕಿಮೀನ ಓಆರ್‌ಆರ್ ಮಾರ್ಗದ ಭಾಗವಾಗಿದೆ. ಯೋಜನೆಯ ಹಂತ-2A ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗಿನ 16 ನಿಲ್ದಾಣ ನಿರ್ಮಾಣ ಆಗಲಿದೆ.