ಬೈಕ್ ಟ್ಯಾಕ್ಸಿಗೆ ಮಾರ್ಗಸೂಚಿ ರೂಪಿಸಿ : ಸಚಿವಗೆ ಸಂಘ ಮನವಿ

| N/A | Published : May 19 2025, 11:00 AM IST

e bike taxi
ಬೈಕ್ ಟ್ಯಾಕ್ಸಿಗೆ ಮಾರ್ಗಸೂಚಿ ರೂಪಿಸಿ : ಸಚಿವಗೆ ಸಂಘ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಆದಷ್ಟು ಬೇಗ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ರೂಪಿಸುವಂತೆ ಬೈಕ್ ಟ್ಯಾಕ್ಸಿ ವೆಲ್‌ಫೇರ್ ಅಸೋಸಿಯೇಷನ್‌ ಸದಸ್ಯರು ಬೈಕ್‌ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ.

  ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಆದಷ್ಟು ಬೇಗ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ರೂಪಿಸುವಂತೆ ಬೈಕ್ ಟ್ಯಾಕ್ಸಿ ವೆಲ್‌ಫೇರ್ ಅಸೋಸಿಯೇಷನ್‌ ಸದಸ್ಯರು ಬೈಕ್‌ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರಿದ್ದು, ಬೆಂಗಳೂರಿನಲ್ಲೇ 2 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. 700 ಹೆಣ್ಣುಮಕ್ಕಳು ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದಾರೆ. ಇದರಲ್ಲಿ ಶೇ.75ರಷ್ಟು ಜನರಿಗೆ ಬೈಕ್ ಟ್ಸಾಕ್ಸಿ ಆದಾಯವೇ ಪ್ರಾಥಮಿಕ ಆದಾಯ ಮೂಲ. ತಿಂಗಳಿಗೆ 15,000 ರು.ನಿಂದ 35,000 ರು.ವರೆಗೆ ದುಡಿಯುತ್ತಾರೆ. ಸಮಯ ಸಿಕ್ಕಾಗ ಅರೆಕಾಲಿಕವಾಗಿ ಟ್ಯಾಕ್ಸಿ ಚಲಾಯಿಸುವವರಿಗೆ ಹೆಚ್ಚುವರಿ ಆದಾಯ ಸೃಷ್ಟಿಯಾಗಿ ಅವರ ದೈನಂದಿನ ಖರ್ಚು ನಡೆಯುತ್ತದೆ. ಹೀಗಾಗಿ, ಬೈಕ್ ಟ್ಯಾಕ್ಸಿ ಸುಗಮವಾಗಿ ಕಾರ್ಯ ನಿರ್ವಹಿಸಲು ಹೈಕೋರ್ಟ್ ನಿರ್ದೇಶನದಂತೆ ಆದಷ್ಟು ಬೇಗ ಮಾರ್ಗಸೂಚಿ ರೂಪಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

ಬೈಕ್ ಟ್ಯಾಕ್ಸಿಗಳಿಂದ ನೇರ ಉದ್ಯೋಗ, ಅರೆಕಾಲಿಕ ಉದ್ಯೋಗ ಸೃಷ್ಟಿ ಜೊತೆಗೆ ಜನಸಾಮಾನ್ಯರಿಗೆ ಕಚೇರಿ, ಕೆಲಸ ಕಾರ್ಯಗಳಿಗೆ ಓಡಾಡಲು ಅನುಕೂಲ ಆಗುತ್ತದೆ. ಉದ್ಯೋಗಿಗಳಿಗೆ ಕೊನೆಯ ಹಂತದ ಸಾರಿಗೆ ಸಂಪರ್ಕ ಸಮಸ್ಯೆ ನೀಗಿಸುತ್ತದೆ. ಬೈಕ್ ಟ್ಯಾಕ್ಸಿ ಬಾಡಿಗೆ ಒಂದು ಕಿ.ಮೀ 5 ರು. ಆಗುತ್ತದೆ. ಆಟೋ ಮತ್ತು ಕ್ಯಾಬ್‌ಗೆ ಹೋಲಿಸಿದರೆ ಬೈಕ್ ಟ್ಯಾಕ್ಸಿ ಬಾಡಿಗೆ ಕಡಿಮೆ ಇದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಬೇರೆ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗೆ ಇರುವ ಮಾರ್ಗಸೂಚಿ, ನಿಯಮಗಳ ದಾಖಲೆಗಳನ್ನು ನಮ್ಮ ಸಂಘದಿಂದ ಸಿದ್ಧಪಡಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಅಸೋಸಿಯೇಷನ್ ಅಧ್ಯಕ್ಷ ಆದಿ ನಾರಾಯಣ ತಿಳಿಸಿದರು.

Read more Articles on