ಸಾರಾಂಶ
ಸಂಸ್ಥಾರಸ್ಥರು ಮತ್ತು ಸನ್ಯಾಸಿಗಳ ನಡುವಿನ ವ್ಯತ್ಯಾಸವನ್ನು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ನೀಡಿದ್ದಾರೆ
ಸಂಸಾರಸ್ಥರು ಟ್ಯೂಬ್ ವಿತ್ ಟಯರ್. ಆದರೆ, ಟ್ಯೂಬ್ ಲೆಸ್ ಟಯರ್ ಆಗಿ ನಾವಿದ್ದೇವೆ ಸ್ವಾಮೀಜಿಗಳು. ನಮಗೆ ಟ್ಯೂಬ್ ಇರುವುದಿಲ್ಲ. ಬರಿ ಟಯರ್ ಮಾತ್ರ. ಹೀಗಾಗಿ, ಸ್ವಾಮೀಜಿಗಳು ಟ್ಯೂಬ್‌ಲೆಸ್ ಟಯರ್ ಆಗಲಿ, ಸಂಸಾರಸ್ಥರು ಮಾತ್ರ ವಿತ್ ಟ್ಯೂಬೇ ಇರಲಿ ಎಂದಾಗ ಸಭೆಯಲ್ಲಿದ್ದವರೆಲ್ಲ ನಕ್ಕಿದ್ದೇ ನಕ್ಕಿದ್ದು.
ಸಂಸಾರದ ರಥ ಸಾಗಲು ಎರಡು ರಥ ಬೇಕು, ಹೆಚ್ಚು ಕಡಿಮೆಯಾದರೂ ಸಂಸಾರ ಮುಂದೆ ಸಾಗುವುದಿಲ್ಲ ಎಂಬುದು ಹಳೆಯ ಮಾತು, ಈಗ ಕಾರು, ಬಸ್‌ಗಳ ಕಾಲ. ಹೀಗಾಗಿ ಪತಿ-ಪತ್ನಿ ಟೈರ್ ಇದ್ದಂತೆ ಹೇಳಬಹುದು, ಆದರೆ ಟೈರ್ ಒಳಗೆ ಇರುವ ಟ್ಯೂಬ್ ಯಾರಿಗೆ ಹೋಲಿಸಬೇಕು ಎಂಬ ಜಿಜ್ಞಾಸೆಗೆ ಉತ್ತರ ನೀಡುವ ಜೊತೆಗೆ ಸಂಸ್ಥಾರಸ್ಥರು ಮತ್ತು ಸನ್ಯಾಸಿಗಳ ನಡುವಿನ ವ್ಯತ್ಯಾಸವನ್ನು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ನೀಡಿದ್ದಾರೆ
ಸ್ವಾಮೀಜಿಗಳ ಪ್ರಕಾರ ಸಂಸ್ಥಾರಸ್ಥರು ಟ್ಯೂಬ್ ಇರುವ ಟಯರ್ ಇದ್ದಂತೆ, ಸನ್ಯಾಸಿಗಳು ಟ್ಯೂಬ್ ಇಲ್ಲದ ಟಯರ್ ಇದ್ದಂತೆ ಎಂದಿದ್ದಾರೆ.
ಕೊಪ್ಪಳದ ಮಧುಶ್ರೀ ಗಾರ್ಡ್‌ನಲ್ಲಿ ಪಂಚಮಸಾಲಿ ಸಮಾಜದ ಕಾರ್ಯಕ್ರಮದಲ್ಲಿ ಡಾ.ಬಸವರಾಜ ದಿಂಡೂರು ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಅವರ ಪತ್ನಿ ಯಾರು ಕರೆದರೂ ವೇದಿಕೆ ಮೇಲೆ ಬರಲೇ ಇಲ್ಲ. ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತು ಪ್ರಾರಂಭಿಸಿದಾಗ, ದಿಂಡೂರು ಅವರ ಇಷ್ಟೆಲ್ಲ ಸಾಧನೆಗೆ ಅವರ ಪತ್ನಿ ಕಾರಣ. ಅವರು ವೇದಿಕೆ ಮೇಲೆ ಬರಬೇಕು, ಆದರೆ, ನಾನು ಕೈ ಸನ್ನೆ ಮಾಡಿದೆ, ಸಂಘಟಕರಿಗೆ ಹೇಳಿ ಕಳುಹಿಸಿದೆ, ಆದರೂ ಅವರು ಬರಲಿಲ್ಲ, ದಯಮಾಡಿ ಅವರು ಬಂದು ಕುಳಿತುಕೊಳ್ಳಬೇಕು ಎಂದಾಗ ದಿಂಡೂರ ಪತ್ನಿ ವೇದಿಕೆಯಲ್ಲಿ ಆಸೀನರಾದರು.
ನಾನು ನಿಮ್ಮನ್ನು ಯಾಕೆ ಬರುವುದಕ್ಕೆ ಹೇಳಿದೆ ಎಂದರೆ, ನಾವು ಸುತ್ತಾಡುವ ಕಾರುಗಳಿಗೆ ಗಾಲಿ ಇದೆ. ಅದರಲ್ಲಿ ಏನೇನು ಇರುತ್ತವೆ ಗೊತ್ತೇನು, ಟಯರ್, ಟೂಬ್ ಮತ್ತು ಗಾಳಿ. ಇವು ಇದ್ದರೆ ಅದು ಓಡುತ್ತದೆ. ಹಂಗೇ ಸಂಸಾರದಲ್ಲಿ ಪತಿ ಟಯರ್ ಆದರೆ, ಪತ್ನಿ ಟ್ಯೂಬ್ ಇದ್ದಂತೆ. ಟಯರ್ ಒಳಗೆ ಹಣಿಕಿ ಹಾಕಿದರೂ ಗಾಡಿ ಓಡುವುದಿಲ್ಲ, ಟ್ಯೂಬ್ ಹೊರಗೆ ಹಣಿಕಿ ಹಾಕಿ ನೋಡಿದರೆ ಗಾಡಿ ಓಡುವುದಿಲ್ಲ. ಟಯರ್ ಹೊರಗೆ ಇರಬೇಕು, ಟ್ಯೂಬ್ ಒಳಗೆ ಇರಬೇಕು, ಅಂದರೆ ಜೊತೆಯಾಗಿಯೇ ಇರಬೇಕು ಎಂದರು.
ಅಷ್ಟೊತ್ತಿಗೆ ವೇದಿಕೆಯಲ್ಲಿಯೇ ಕುಳಿತಿದ್ದವರು ಈಗ ಟ್ಯೂಬ್ ಲೆಸ್ ಟಯರ್ ಬಂದಿವೆ ಎಂದಾಗ ಸ್ವಾಮೀಜಿ ಒಂದು ಕ್ಷಣ ಮೌನವಾಗಿ, ಸಂಸಾರಸ್ಥರು ಟ್ಯೂಬ್ ವಿತ್ ಟಯರ್. ಆದರೆ, ಟ್ಯೂಬ್ ಲೆಸ್ ಟಯರ್ ಆಗಿ ನಾವಿದ್ದೇವೆ ಸ್ವಾಮೀಜಿಗಳು. ನಮಗೆ ಟ್ಯೂಬ್ ಇರುವುದಿಲ್ಲ. ಬರಿ ಟಯರ್ ಮಾತ್ರ. ಹೀಗಾಗಿ, ಸ್ವಾಮೀಜಿಗಳು ಟ್ಯೂಬ್‌ಲೆಸ್ ಟಯರ್ ಆಗಲಿ, ಸಂಸಾರಸ್ಥರು ಮಾತ್ರ ವಿತ್ ಟ್ಯೂಬೇ ಇರಲಿ ಎಂದಾಗ ಸಭೆಯಲ್ಲಿದ್ದವರೆಲ್ಲ ನಕ್ಕಿದ್ದೇ ನಕ್ಕಿದ್ದು.
ಕಲಬುರಗಿ ಕಾರ್ಪೋರೇಟರ್‌ಗಳು ಬೆಳಗಿನ ವಾಕಿಂಗ್ ನಿಲ್ಸಿದ್ದಾರಂತ್ರಿ..
ಉತ್ತಮ ಆರೋಗ್ಯಕ್ಕಾಗಿ ಬೆಳಗಿನ ಹೊತ್ತು ಶುದ್ಧಗಾಳಿ ಸೇವಿಸುತ್ತಾ ಸಮಾಧಾನದಿಂದ ವಾಕಿಂಗ್ ಹೋದರೆ ಅಲ್ಲಿ ಹತ್ತಾರು ಸಮಸ್ಯೆ ಕೇಳಿ ಟೆನ್ಷನ್ ಹೆಚ್ಚಾದರೆ ಏನು ಮಾಡಬೇಕು? ಬೇರೇನೂ ಮಾಡಲು ಸಾಧ್ಯ ವಾಕಿಂಗ್ ಹೋಗುವುದನ್ನು ಬಿಡಬೇಕು ಅಷ್ಟೇ!
ಈ ರೀತಿ ಟೆನ್ಷನ್ ಮಾಡಿಕೊಳ್ಳದಿರಲು ಕಲಬುರಗಿ ಸಿಟಿ ಕಾರ್ಪೋರೇಷನ್‌ನ ಕೆಲ ಕಾರ್ಪೋರೇಟರ್‌ಗಳು ತಮ್ಮ ಬೆಳಗಿನ ವಾಕಿಂಗ್ ಹೋಗೋದನ್ನೇ ಬಿಟ್ಟುಬಿಟ್ಟಿದ್ದಾರಂತೆ!
ಇಷ್ಟಕ್ಕೂ ಇವರ ಟೆನ್ಷನ್ ಹೆಚ್ಚಿಸುವವರು ಬೇರೆ ಯಾರು ಅಲ್ಲ, ಅವರು ಪ್ರೀತಿಯಿಂದ ವೋಟ್ ಹಾಕಿದ ಜನ. ಯಾಕೆ ಈ ಟೆನ್ಷನ್ ಕೇಳಿದರೆ ಸದಸ್ಯರು.., ಬೆಳಗ್ಗೆದ್ದು ವಾಕಿಂಗ್ ಹೋಗೋ ದಾರಿಯಲ್ಲಿ ನಮ್ಗ ವೋಟ್ ಹಾಕಿದ ಜನ ಸಿಕ್ತಾರೆ, ನಮ್ಮ ಮನಿ ಮುಂದ ರೋಡ್ ಇಲ್ಲ, ಗಲ್ಯಾಗ ನಾಯಿ ಕಾಟ, ರಸ್ತಾ ಖಟರಾ ಐತಿ, ಸ್ಟ್ರೀಟ್ ಲೈಟ್ ಇಲ್ಲ, ನೀರೇ ಬರ್ತಿಲ್ಲಂತ ದೂರುಗಳ ಸುರಿಮಳೆ ಮಾಡ್ತಿದ್ದಾರೆ, ಇವನ್ನೆಲ್ಲ ಗಮನಕ್ಕ ತಂದ್ರೂ ಸ್ಪಂದಿಸೋ ಸ್ಥಿತಿಯಲ್ಲಿ ಪಾಲಿಕೆ ಇಲ್ಲ, ಇನ್ನೇನ್ ಮಾಡೋದಂತ ವಾಕಿಂಗ್ ಹೋಗೋದನ್ನ ನಿಲ್ಲಿಸಿದ್ದೇವೆಂತ ಪುರಪಿತೃಗಳೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗೋಳಾಡಿಗೊಂಡರು.
ನಮ್ಮ ಗಲ್ಯಾಗಿನ ಜನರ ಗೋಳ ನಿವಾರಿಸಿರಿ ಅಂತ ಹೇಳಿ ಹೇಳಿ ನಮಗೇ ಸಾಕ್ಯಾತು ನೋಡ್ರಿ ಎಂದು ವಿಷಾದಿಸಿದರು. ಬೀದಿ ದೀಪ ಹಾಕಂದ್ರ 5 ಸಾವಿರ ಲೈಟ್ ಬೇಕಂತ ಪ್ರಸ್ತಾವನೆ ಕಳ್ಸಿ 2 ವರ್ಷಾದ್ರೂ ಸರ್ಕಾರದಿಂದ ಅನುಮತಿ ಬಂದಿಲ್ಲಂತೀರಿ, ನಾಯಿ ಹಿಡೀರಿ ಅಂದ್ರ ಡಾಗ್ ಕ್ಯಾಚರ್ ನಮ್ಮ ಮಾತ ಕೇಳವವ್ಲ ಅಂತೀರಿ, ನಿಮ್ಮ ಸಮೂಬು, ಸಮಜಾಯಿಷಿ ನಿಮ್ಮ ಹತ್ರ ಇಟ್ಕೊಳ್ಳ್ರಿ, ನಮ್ಮ ವಾರ್ಡ್‌ಗಳ ಸಮಸ್ಯೆಗೆ ಮೊದ್ಲು ಪರಿಹಾರ ಕೊಡೋದು ಮಾಡ್ರಿ ಎಂದು ಹೇಳಿ ಪಾಲಿಕೆಯ ಕೆಲವರು ಮೀಟಿಂಗ್‌ನಲ್ಲೇ ಅಧಿಕಾರಿಗಳ ಬೆವರಿಳಿಸಿದ್ದಾರೆ.
- ಸೋಮರಡ್ಡಿ ಅಳವಂಡಿ.
- ಶೇಷಮೂರ್ತಿ ಅವಧಾನಿ