ಎಲ್‌ಇಡಿ ಹೆಡ್‌ಲೈಟ್‌: ಬೆಂಗಳೂರಿನಲ್ಲಿ ಅತಿ ಹೆಚ್ಚು ಕೇಸ್‌

| Published : Jul 09 2024, 11:58 AM IST

car head light

ಸಾರಾಂಶ

ಪ್ರಖರ ಬೆಳಕು ಸೂಸುವ ಎಲ್‌ಇಡಿ ಹೆಡ್‌ಲೈಟ್‌ ಅಳವಡಿಸಿರುವ ವಾಹನಗಳ ವಿರುದ್ಧ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ರಾಜ್ಯ ಪೊಲೀಸರು, ಕಳೆದ ಒಂದು ವಾರದಲ್ಲಿ 8,244 ಪ್ರಕರಣ ದಾಖಲಿಸಿದ್ದಾರೆ

ಬೆಂಗಳೂರು :  ಪ್ರಖರ ಬೆಳಕು ಸೂಸುವ ಎಲ್‌ಇಡಿ ಹೆಡ್‌ಲೈಟ್‌ ಅಳವಡಿಸಿರುವ ವಾಹನಗಳ ವಿರುದ್ಧ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ರಾಜ್ಯ ಪೊಲೀಸರು, ಕಳೆದ ಒಂದು ವಾರದಲ್ಲಿ 8,244 ಪ್ರಕರಣ ದಾಖಲಿಸಿದ್ದಾರೆ.ಈ ಸಂಬಂಧ ರಾಜ್ಯ ತರಬೇತಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಎಷ್ಟು ಪ್ರಕರಣ? ಬೆಂಗಳೂರು ನಗರ 3,354, ಮೈಸೂರು ನಗರ 381, ಹುಬ್ಬಳ್ಳಿ-ಧಾರವಾಡ ನಗರ 165, ಮಂಗಳೂರು ನಗರ 325, ಬೆಳಗಾವಿ ನಗರ 72, ಕಲಬುರಗಿ ನಗರ 50, ಬೆಂಗಳೂರು ಜಿಲ್ಲೆ 11, ಕೋಲಾರ 46, ಕೆಜಿಎಫ್‌ 105, ತುಮಕೂರು 247, ರಾಮನಗರ 99, ಚಿಕ್ಕಬಳ್ಳಾಪುರ 18, ಮೈಸೂರು ಜಿಲ್ಲೆ 91, ಮಂಡ್ಯ 60 , ಹಾಸನ 105, ಚಾಮರಾಜನಗರ 269, ಕೊಡಗು 193, ದಕ್ಷಿಣ ಕನ್ನಡ 205, ಉತ್ತರ ಕನ್ನಡ 263, ಚಿಕ್ಕಮಗಳೂರು 76, ಉಡುಪಿ 46, ದಾವಣಗೆರೆ 139, ಚಿತ್ರದುರ್ಗ 63, ಶಿವಮೊಗ್ಗ 139, ಹಾವೇರಿ 53, ಬೆಳಗಾವಿ 51, ಧಾರವಾಡ 152, ವಿಜಯಪುರ 45, ಬಾಗಲಕೋಟೆ 139, ಗದಗ 28, ಬೀದರ್‌ 63, ಕಲಬುರಗಿ 69, ಯಾದಗಿರಿ 76, ರಾಯಚೂರು 386, ಕೊಪ್ಪಳ 160, ಬಳ್ಳಾರಿ 206, ವಿಜಯನಗರದಲ್ಲಿ 294 ಪ್ರಕರಣಗಳನ್ನು ದಾಖಲಿಸಲಾಗಿದೆ.