ಸಾರಾಂಶ
384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ಲೋಪ-ದೋಷಗಳನ್ನು ಪತ್ತೆಹಚ್ಚಿರುವ ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು : 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ಲೋಪ-ದೋಷಗಳನ್ನು ಪತ್ತೆಹಚ್ಚಿರುವ ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಒಂದೇ ಪ್ರಶ್ನೆಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬೇರೆ ಬೇರೆ ಅರ್ಥ ಬರುವಂತೆ ಬರೆದಿರುವುದು, ಇಸವಿಯಲ್ಲಿ ಲೋಪ, ಪುನರಾವರ್ತನೆ, ವಾಕ್ಯ ರಚನೆಯಲ್ಲಿ ಲೋಪ, ಗೊಂದಲ ಮತ್ತು ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ಧ ಅರ್ಥ ಬರುವಂತೆ ಅನುವಾದ ಮಾಡಿರುವುದು ಸೇರಿದಂತೆ ಅನೇಕ ಗೊಂದಲಗಳು ಪ್ರಶ್ನೆಪತ್ರಿಕೆಯಲ್ಲಿ ಕಂಡುಬಂದಿವೆ.
ಏನೇನು ದೋಷ?
- ‘ಲೋಕ್ ಅದಾಲತ್ ಅಧಿನಿಯಮ -2002 (ತಿದ್ದುಪಡಿ)’ ಎಂಬುದರ ಇಂಗ್ಲಿಷ್ ಪ್ರಶ್ನೆ ಸರಿಯಿದ್ದು, ಕನ್ನಡದಲ್ಲಿ ‘2022’ ಎಂದು ಮುದ್ರಿಸಲಾಗಿದೆ.
- ದೊಡ್ಡ ಗಾತ್ರದ ಕೊಕ್ಕರೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ? ಎಂದು ಪ್ರಶ್ನೆ ಕೇಳಿ, ಅದಕ್ಕೆ ಮೊದಲನೇ ಹೇಳಿಕೆ, ‘ಇದು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಒಂದಾಗಿದೆ’ ಎಂದು ಕನ್ನಡದಲ್ಲಿ ಕೇಳಿದ್ದರೆ, ಇಂಗ್ಲಿಷ್‌ನಲ್ಲಿ Heaviest (ಭಾರದ) ಎಂದು ಕೇಳಿ ಗೊಂದಲ ಮೂಡಿಸಲಾಗಿದೆ.
- ವಿವರಣಾತ್ಮಕವಾಗಿರುವ ವಾಕ್ಯದ ಪ್ರಶ್ನೆಯೊಂದಕ್ಕೆ, ಕನ್ನಡದಲ್ಲಿ ‘ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆ’ ಎಂದು ಮುದ್ರಿಸಲಾಗಿದ್ದು, ಇಂಗ್ಲಿಷ್‌ನಲ್ಲಿ State Assembly (ರಾಜ್ಯದ ವಿಧಾನಸಭೆ) ಎಂದು ಮುದ್ರಿಸಲಾಗಿದೆ.