ಶೀಘ್ರ 1 ದಿನ ಮದ್ಯ ಮಾರಾಟ ಬಂದ್‌ : ಅಬಕಾರಿ ಸನ್ನದು ನವೀಕರಣ ಶುಲ್ಕ ಭಾರೀ ಹೆಚ್ಚಳ

| N/A | Published : May 25 2025, 10:42 AM IST

all liquor shop will be closed in madhya pradesh
ಶೀಘ್ರ 1 ದಿನ ಮದ್ಯ ಮಾರಾಟ ಬಂದ್‌ : ಅಬಕಾರಿ ಸನ್ನದು ನವೀಕರಣ ಶುಲ್ಕ ಭಾರೀ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಅಬಕಾರಿ ಸನ್ನದುಗಳ ನವೀಕರಣ ಶುಲ್ಕ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಿಂಗಳಾಂತ್ಯದೊಳಗೆ ಒಂದು ದಿನ ಮದ್ಯ ಮಾರಾಟ ಬಂದ್‌ ಮಾಡಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

  ಬೆಂಗಳೂರು : ಅಬಕಾರಿ ಸನ್ನದುಗಳ ನವೀಕರಣ ಶುಲ್ಕ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಿಂಗಳಾಂತ್ಯದೊಳಗೆ ಒಂದು ದಿನ ಮದ್ಯ ಮಾರಾಟ ಬಂದ್‌ ಮಾಡಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೇ 29ರಂದು ಮದ್ಯ ಮಾರಾಟ ಬಂದ್‌ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಶನಿವಾರ ನಡೆದ ಮದ್ಯ ಮಾರಾಟಗಾರರ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ದಿನಾಂಕ ನಿಗದಿ ಮಾಡದೆ ಮೇ ಅಂತ್ಯದೊಳಗೆ ಒಂದು ದಿನ ಸಾಂಕೇತಿಕವಾಗಿ ಮದ್ಯ ಮಾರಾಟ ಬಂದ್‌ ಮಾಡೋಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

‘ಈಗಾಗಲೇ ಮೂರು ಬಾರಿ ಮದ್ಯ ಮಾರಾಟ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ವ್ಯಾಪರಕ್ಕೆ ಹೊಡೆತ ಬಿದ್ದಿದೆ. ಇದರ ನಡುವೆ ಸರ್ಕಾರ ಸನ್ನದುಗಳ ನವೀಕರಣ ಶುಲ್ಕವನ್ನೂ ಮೂರ್ನಾಲ್ಕು ಪಟ್ಟು ಹೆಚ್ಚಿಸಲು ಮುಂದಾಗಿದೆ. ಇದನ್ನು ವಿರೋಧಿಸಿ ಒಂದು ದಿನವಾದರೂ ಮದ್ಯ ಮಾರಾಟ ನಿಲ್ಲಿಸಿ ನಮ್ಮ ವಿರೋಧ ವ್ಯಕ್ತಪಡಿಸಬೇಕು’ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿರುವುದು ಬಂದ್‌ಗೆ ಕರೆಕೊಡಲು ಮೂಲ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Read more Articles on