ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!

| N/A | Published : Aug 04 2025, 10:49 AM IST

Mother
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Share this Article
  • FB
  • TW
  • Linkdin
  • Email

ಸಾರಾಂಶ

‘ಇಬ್ಬರು ಪುತ್ರರನ್ನು ಹೊಂದಿದ ತಾಯಿಗೆ ತವರಿಗೆ ಕರೆಸಿ ಉಡಿತುಂಬಿ, ಹಸಿರು ಸೀರೆ ಉಡಿಸಿ, ಹಸಿರು ಬಳೆ ತೊಡೆಸಬೇಕು. ಇಲ್ಲದಿದ್ದರೆ ಕೆಡುಕಾಗಲಿದೆ’. ಹೀಗೊಂದು ಗಾಳಿಸುದ್ದಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ವಾರದಿಂದ ವದಂತಿಯಾಗಿದೆ

ಹುಬ್ಬಳ್ಳಿ  : ‘ಇಬ್ಬರು ಪುತ್ರರನ್ನು ಹೊಂದಿದ ತಾಯಿಗೆ ತವರಿಗೆ ಕರೆಸಿ ಉಡಿತುಂಬಿ, ಹಸಿರು ಸೀರೆ ಉಡಿಸಿ, ಹಸಿರು ಬಳೆ ತೊಡೆಸಬೇಕು. ಇಲ್ಲದಿದ್ದರೆ ಕೆಡುಕಾಗಲಿದೆ’. ಹೀಗೊಂದು ಗಾಳಿಸುದ್ದಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ವಾರದಿಂದ ವದಂತಿಯಾಗಿದೆ. ಈ ಸುದ್ದಿ ಹರಡಿದ್ದೇ ತಡ ಜನರು ಸೀರೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.

ಆದರೆ, ಇದನ್ನು ಯಾರು ಹೇಳಿದರು? ಏಕೆ ಆಚರಿಸಬೇಕು ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರವಿಲ್ಲ. ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ತಾಯಿಯನ್ನು ತವರು ಮನೆಗೆ ಕರೆಸಿ ಹಸಿರು ಸೀರೆ, ಹಸಿರು ಬಳೆ ಉಡಿಸಿ, ಉಡಿತುಂಬಿ, ಆರತಿ ಮಾಡಿ ಕಳಿಸುವ ಕಾರ್ಯಕ್ರಮ ನಡೆಯುತ್ತಿದೆ. ಬಾಂಧವ್ಯ ಗಟ್ಟಿಗೊಳ್ಳಲು ಸಹಕಾರಿ:

ಈ ರೀತಿಯ ನೆಪದಲ್ಲಾದರೂ ಹೆಣ್ಣು ಮಗಳು ತವರು ಮನೆಗೆ ಬಂದು ಅಲ್ಲಿ ನೀಡುವ ಉಡುಗೊರೆ ತೆಗೆದುಕೊಂಡು ತವರು ಮನೆಗೆ ಒಳಿತಾಗಲಿ ಎಂದು ಹರಸಿ ಹೋಗುತ್ತಾಳೆ. ಇದರಿಂದಾಗಿ ತವರು ಮನೆಯ ಸಂಬಂಧ ಗಟ್ಟಿಗೊಳ್ಳುತ್ತವೆ ಎಂಬುದಾಗಿ ಕೆಲ ಹಿರಿಯರು ಹೇಳಿದ್ದಾರೆ. ಕಳೆದ 8-10 ವರ್ಷಗಳ ಹಿಂದೆ ಒಬ್ಬನೇ ಗಂಡು ಮಗನಿದ್ದರೆ ಬೆಳ್ಳಿ ಕಡಗ ಕೊಡಬೇಕೆಂಬ ವದಂತಿ ಹಬ್ಬಿತ್ತು. ಆಗ ಕೂಡ ಬಂಗಾರ, ಬೆಳ್ಳಿ ಅಂಗಡಿಗಳಿಗೆ ಭರ್ಜರಿ ವ್ಯಾಪಾರ ನಡೆದಿತ್ತು.

Read more Articles on