ನಗರದಲ್ಲಿ ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲೇ ಬಿಸಾಡುವ ಕಸದ ಸಮಸ್ಯೆಯನ್ನು ಪರಿಹರಿಸಲು ನಗರದ ಯುವ ಎಂಜಿನಿಯರ್‌ವೊಬ್ಬರು ‘ನಮ್ಮ ಕಸ’ ಹೆಸರಿನ ಪೋರ್ಟಲ್ ಅಭಿವೃದ್ಧಿಪಡಿಸಿದ್ದಾರೆ. ವೃತ್ತಿಯಲ್ಲಿ ಪ್ರೋಗ್ರಾಂ ಎಂಜಿನಿಯರ್ ಆಗಿರುವ ನಗರದ ಜ್ಯೋತಿಷ್ ವಿ.ಎಂ ಅಭಿವೃದ್ಧಿಪಡಿಸಿರುವ ಪೋರ್ಟಲ್
ಬೆಂಗಳೂರು : ನಗರದಲ್ಲಿ ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲೇ ಬಿಸಾಡುವ ಕಸದ ಸಮಸ್ಯೆಯನ್ನು ಪರಿಹರಿಸಲು ನಗರದ ಯುವ ಎಂಜಿನಿಯರ್‌ವೊಬ್ಬರು ‘ನಮ್ಮ ಕಸ’ ಹೆಸರಿನ ಪೋರ್ಟಲ್ ಅಭಿವೃದ್ಧಿಪಡಿಸಿದ್ದಾರೆ.
ವೃತ್ತಿಯಲ್ಲಿ ಪ್ರೋಗ್ರಾಂ ಎಂಜಿನಿಯರ್ ಆಗಿರುವ ನಗರದ ಜ್ಯೋತಿಷ್ ವಿ.ಎಂ ಅಭಿವೃದ್ಧಿಪಡಿಸಿರುವ ಪೋರ್ಟಲ್ ಬಿಡುಗಡೆ ಮಾಡಿದ ಮೂರು ದಿನಗಳಲ್ಲೇ 228 ದೂರುಗಳು ಸಲ್ಲಿಕೆಯಾಗಿವೆ.
ಫೋಟೋಗಳನ್ನು ಯಾರು ಬೇಕಾದರೂ ವೀಕ್ಷಿಸಬಹುದಾಗಿದೆ
ಯಾವ ಮಾದರಿಯ ಕಸ, ಹೆಚ್ಚು ಕಸ ಇದೆಯೋ ಅಥವಾ ಕಮ್ಮಿ ಇದೆಯೋ, ಎಷ್ಟು ದಿನಗಳ ಹಿಂದೆ ದೂರು ಸಲ್ಲಿಕೆಯಾಗಿದೆ, ಸಮಸ್ಯೆ ಪರಿಹಾರವಾಗಿದೆಯೋ ಅಥವಾ ಇಲ್ಲವೋ ಎಂಬೆಲ್ಲಾ ಮಾಹಿತಿಯು ಇದರಲ್ಲಿ ಇರುತ್ತದೆ. ಫೋಟೋಗಳನ್ನು ಯಾರು ಬೇಕಾದರೂ ವೀಕ್ಷಿಸಬಹುದಾಗಿದೆ.
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಗೊಡವೆ ಇಲ್ಲ
ಇನ್ನು ಇಲ್ಲಿ ದೂರು ನೀಡಲು ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಗೊಡವೆ ಇಲ್ಲ. ವೆಬ್‌ಸೈಟ್‌ಗೆ ಭೇಟಿ ನೀಡಿ ಕಸದ ಫೋಟೋ ಮತ್ತು ಜಿಪಿಎಸ್ ಆಧಾರಿತವಾಗಿ ಕಸ ಬಿದ್ದಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡರೆ ಸಾಕು. ದೂರು ದಾಖಲಾಗುತ್ತದೆ. ಜಿಪಿಎಸ್ ಆಧಾರದ ಮೇಲೆ ಆ ಸ್ಥಳದ ವಾರ್ಡ್ ಸಂಖ್ಯೆ, ಸಂಬಂಧಿಸಿದ ಶಾಸಕರು ಮತ್ತು ಸಂಸದರ ವಿವರಗಳು ಅದರಲ್ಲಿ ಕಾಣಿಸುತ್ತವೆ. ಸಾರ್ವಜನಿಕರು ಸಲ್ಲಿಸುವ ಈ ಕಸದ ದೂರುಗಳನ್ನು ಪರಿಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಾಯ ಆ್ಯಪ್‌ಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆ ಪರಿಹಾರವಾಗಿದ್ದರೆ ಪರಿಹಾರವಾಗಿದೆ ಎಂದು ಮಾರ್ಕ್ ಮಾಡಲು ಆಪ್ಷನ್ ನೀಡಲಾಗಿದೆ.
ಅನೇಕ ದಿನಗಳಿಂದ ನಗರದ ಕಸದ ಸಮಸ್ಯೆಯನ್ನು ಗಮನಿಸಿದೆ. ವೃತ್ತಿಯ ಜೊತೆಗೆ ನಗರದ ಸಮಸ್ಯೆಯ ಪರಿಹಾರಕ್ಕೆ ಪರಿಹಾರ ಕಂಡು ಹಿಡಿಯಲು ಒಪನ್ ಸೋರ್ಸ್ ಟೂಲ್‌ಗಳನ್ನು ಬಳಸಿ ವೆಬ್‌ಸೈಟ್ ಅಭಿವೃದ್ಧಿಪಡಿಸಿದ್ದೇನೆ. ಇದರಲ್ಲಿ ಫೋನ್ ನಂಬರ್ ನಮೂದಿಸಿದರೆ ಸಾಕು. ಹೆಸರು ಸೇರಿದಂತೆ ಇನ್ನಿತರ ಯಾವುದೇ ವಿವರಗಳು ಬೇಕಾಗಿಲ್ಲ ಎಂದು ಜ್ಯೋತಿಷ್ ಹೇಳಿದ್ದಾರೆ.
ಕಸದ ಕುರಿತು ದೂರು ಸಲ್ಲಿಸಲು, ಪಾಲಿಕೆಗೆ ಅಲರ್ಟ್ ಮಾಡಲು ಭೇಟಿ ನೀಡಬೇಕಾದ ವಿಳಾಸ www.nammakasa.in.
