ದುಬೈನಿಂದ ಚಿನ್ನ ಸಾಗಿಸುವ ಮುನ್ನ ತನ್ನ ಗೆಳೆಯ ಸಾಹಿಲ್‌ಗೆ ವಾಟ್ಸಪ್ ಮೆಸೇಜ್ ಮಾಡಿದ್ದ ರನ್ಯಾ

| N/A | Published : Apr 01 2025, 10:49 AM IST

Kannada Actress Ranya Rao Smuggling Gold

ಸಾರಾಂಶ

ದುಬೈನಿಂದ ಚಿನ್ನ ಸಾಗಿಸುವ ಮುನ್ನ ತನ್ನ ಗೆಳೆಯ ಹಾಗೂ ಬಳ್ಳಾರಿ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್‌ಗೆ ನಟಿ ರನ್ಯಾ ರಾವ್ ಅವರು ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿದ್ದರು ಎಂಬ ಸಂಗತಿ ಡಿಆರ್‌ಐ ತನಿಖೆಯಲ್ಲಿ ಪತ್ತೆಯಾಗಿದೆ.

ಬೆಂಗಳೂರು : ದುಬೈನಿಂದ ಚಿನ್ನ ಸಾಗಿಸುವ ಮುನ್ನ ತನ್ನ ಗೆಳೆಯ ಹಾಗೂ ಬಳ್ಳಾರಿ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್‌ಗೆ ನಟಿ ರನ್ಯಾ ರಾವ್ ಅವರು ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿದ್ದರು ಎಂಬ ಸಂಗತಿ ಡಿಆರ್‌ಐ ತನಿಖೆಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಸಾಹಿಲ್‌ನನ್ನು ಸಹ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ. ವಿಚಾರಣೆ ವೇಳೆ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದಲ್ಲಿ ತನ್ನ ಪಾತ್ರದ ಕುರಿತು ಆತ ಬಹಿರಂಗಪಡಿಸಿದ್ದಾನೆ. ಅಲ್ಲದೆ, ಸಾಹಿಲ್ ಮೊಬೈಲನ್ನು ಜಪ್ತಿ ಮಾಡಿ ಪರಿಶೀಲಿಸಿದಾಗ ರನ್ಯಾ ಹಾಗೂ ಆತನ ನಡುವಿನ ಮಾತುಕತೆ ವಿವರ ಪತ್ತೆಯಾಗಿದೆ ಎನ್ನಲಾಗಿದೆ.

ದುಬೈನಿಂದ ಕಳ್ಳ ಮಾರ್ಗದಲ್ಲಿ ರಾಜ್ಯಕ್ಕೆ ರನ್ಯಾ ತರುತ್ತಿದ್ದ ಚಿನ್ನ ಸಾಹಿಲ್ ಮೂಲಕ ವಿಲೇವಾರಿಯಾಗುತ್ತಿತ್ತು. ಇನ್ನು, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಸಾಹಿಲ್ ಕುಟುಂಬ ಸಹ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದೆ. ತಮ್ಮ ಅಂಗಡಿ ಮಾತ್ರವಲ್ಲದೆ ಬೇರೆ ವ್ಯಾಪಾರಿಗಳಿಗೆ ರನ್ಯಾರವರಿಂದ ಪಡೆದ ಚಿನ್ನವನ್ನು ಸಾಹಿಲ್ ಮಾರಾಟ ಮಾಡಿಸುತ್ತಿದ್ದ. ಹೀಗಾಗಿ, ದುಬೈನಿಂದ ಚಿನ್ನ ತೆಗೆದುಕೊಂಡು ಬರುವ ವೇಳೆ ರನ್ಯಾ ಆತನಿಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಿದ್ದಳು ಎಂದು ತಿಳಿದು ಬಂದಿದೆ.