ಸ್ಟಾರ್ಟ್‌ಅಪ್‌, ಪಾಲುದಾರಿಕೇಲಿ ಸೇಲ್ಸ್‌ಫೋರ್ಸ್ ಮೇಲುಗೈ - ಎಂ.ಡಿ ಸಂಕೇತ್‌ ಅಭಿಮತ

| N/A | Published : Apr 21 2025, 10:47 AM IST

Salesforce

ಸಾರಾಂಶ

ವಿಶ್ವದ ನಂ1 ಎಐ ಸಿಆರ್‌ಎಂ ಆಗಿರುವ ಸೇಲ್ಸ್‌ಫೋರ್ಸ್ ಹಲವು ವರ್ಷಗಳಿಂದ ಭಾರತದಲ್ಲಿ ಹೂಡಿಕೆ ಮಾಡಿದೆ. ಭಾರತವು ಸೇಲ್ಸ್‌ಫೋರ್ಸ್‌ಗೆ ಪ್ರಮುಖ ಜಾಗತಿಕ ಕೇಂದ್ರವಾಗಿದೆ

ವೀರೇಶ ಎಸ್‌. ಉಳ್ಳಾಗಡ್ಡಿ

ಬೆಂಗಳೂರು : ವಿಶ್ವದ ನಂ1 ಎಐ ಸಿಆರ್‌ಎಂ ಆಗಿರುವ ಸೇಲ್ಸ್‌ಫೋರ್ಸ್ ಹಲವು ವರ್ಷಗಳಿಂದ ಭಾರತದಲ್ಲಿ ಹೂಡಿಕೆ ಮಾಡಿದೆ. ಭಾರತವು ಸೇಲ್ಸ್‌ಫೋರ್ಸ್‌ಗೆ ಪ್ರಮುಖ ಜಾಗತಿಕ ಕೇಂದ್ರವಾಗಿದೆ. ಪರಿಸರ ವ್ಯವಸ್ಥೆ ಮತ್ತು ಸ್ಟಾರ್ಟ್‌ಅಪ್‌, ಕೌಶಲ್ಯ, ಪಾಲುದಾರಿಕೆ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದು, ಬೆಳವಣಿಗೆಯಲ್ಲಿ ಮೇಲುಗೈ ಸಾಧಿಸಿದೆ ಎಂದು ಸೇಲ್ಸ್‌ಫೋರ್ಸ್ ಇಂಡಿಯಾ ಆಪರೇಶನ್ಸ್‌ ಎಂ.ಡಿ ಸಂಕೇತ್‌ ಅಟಲ್‌ ಹೇಳಿದರು.

ಹೈದರಾಬಾದ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೀಡಿಯಾ ಫಾಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು, ಡಿಜಿಟಲ್ ನಿರ್ವಹಣೆಯಲ್ಲಿ ಸೇಲ್ಸ್‌ಫೋರ್ಸ್ ಪ್ರಮುಖ ಪಾತ್ರವಹಿಸುತ್ತದೆ. ಕಳೆದ ದಶಕದಲ್ಲಿ ಸೇಲ್ಸ್‌ಫೋರ್ಸ್ ಭಾರತದಲ್ಲಿ ತಂತ್ರಜ್ಞಾನ, ಎಐ-ಚಾಲಿತ ರೂಪಾಂತರ ಮತ್ತು ಪ್ರತಿಭೆ ಅಭಿವೃದ್ಧಿಯನ್ನು ಉತ್ತೇಜಿಸಲು ವಿವಿಧೆಡೆ ಹೂಡಿಕೆ ಮಾಡಿದೆ. ಇದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹಾಗೂ ಹೈದರಾಬಾದ್, ಗುರ್‌ಗಾಂವ್, ಮುಂಬೈ, ಪುಣೆ, ಜೈಪುರದಲ್ಲಿ ಕಚೇರಿ ಹೊಂದಿದ್ದು, ಒಟ್ಟಾರೆ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದು ಸಾರ್ವಜನಿಕ ವಲಯ ಹಾಗೂ ಭಾರತದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಸೇಲ್ಸ್‌ಫೋರ್ಸ್ ಆದಾಯ ₹9116.3 ಕೋಟಿ:

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಕಂಪನಿ ಸಲ್ಲಿಸಿದ ಮಾಹಿತಿ ಪ್ರಕಾರ, ಸೇಲ್ಸ್‌ಫೋರ್ಸ್ ಇಂಡಿಯಾದ ಆದಾಯವು 2024 ಮಾರ್ಚ್ 31 ಹೋಲಿಸಿದರೆ ಶೇ. 36 ಕ್ಕಿಂತ ಹೆಚ್ಚು ಏರಿಕೆಯಾಗಿ ₹9116.3 ಕೋಟಿಗೆ ತಲುಪಿದೆ. ಸ್ಟಾರ್ಟ್-ಅಪ್‌ಗಳು, 2 ಮಿಲಿಯನ್‌ಗಿಂತಲೂ ಹೆಚ್ಚು ಸೇಲ್ಸ್‌ಫೋರ್ಸ್ ಡೆವಲಪರ್‌, ಟ್ರೇಲ್‌ಹೆಡ್‌ನ ಹೆಚ್ಚಿನ ಬಳಕೆದಾರರು, ಉಚಿತ ಆನ್‌ಲೈನ್ ಕಲಿಕಾ ವೇದಿಕೆಯನ್ನು ಹೊಂದಿದೆ ಎಂದು ತಿಳಿಸಿದರು.

ಯಾವ್ಯಾವ ಕಂಪನಿಯೊಂದಿಗೆ ಪಾಲುದಾರಿಕೆ:

ಏಜೆಂಟ್‌ಫೋರ್ಸ್ ಪ್ರಾರಂಭಿಸಲು ಗೂಗಲ್‌ನೊಂದಿಗೆ, ಎಐ ಅಭಿವೃದ್ಧಿಗೆ ಎನ್ವಿಡಿಯಾದೊಂದಿಗೆ ಸೇಲ್ಸ್‌ಫೋರ್ಸ್ ಪಾಲುದಾರಿಕೆ ಹೊಂದಿವೆ.

ಏಜೆಂಟ್‌ಫೋರ್ಸ್ ವ್ಯವಹಾರಕ್ಕೆ ಹೊಸ ದಿಗಂತ:

ಇಂಟರ್ನೆಟ್‌ನಂತೆಯೇ ಪರಿವರ್ತನಾತ್ಮಕ ಬದಲಾವಣೆ ಏಜೆಂಟ್‌ಟಿಕ್ ಎಐ ಜಾಗತಿಕವಾಗಿ 6 ಟ್ರಿಲಿಯನ್ ಡಾಲರ್‌ ಡಿಜಿಟಲ್ ಕಾರ್ಮಿಕ ಮಾರುಕಟ್ಟೆ ಅವಕಾಶ ನೀಡಲಿದೆ ಎಂದು ತಜ್ಞರು ಅಂದಾಜಿಸಿದ್ದು, ಸೇಲ್ಸ್‌ಫೋರ್ಸ್ ಸಮೀಕ್ಷೆಯ ಪ್ರಕಾರ ಎಐ ಇಂಟರ್ನೆಟ್‌ನಂತೆಯೇ ವ್ಯವಹಾರಕ್ಕೆ ಮಹತ್ವದ್ದಾಗಿದೆ.

ಬೆಂಗಳೂರಿನಲ್ಲಿ ಸೇಲ್ಸ್‌ಫೋರ್ಸ್ ಟವರ್ ತೆರೆಯಲು ಸಜ್ಜು:

2016ರಲ್ಲಿ ಸೇಲ್ಸ್‌ಫೋರ್ಸ್ ಹೈದರಾಬಾಸ್‌ನಲ್ಲಿ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ್ನು ತೆರೆದು 2023ರಲ್ಲಿ ಅದನ್ನು ವಿಸ್ತರಿಸಿತು. ಇದು ಕಂಪನಿಗೆ ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಭಾರತದ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಕಂಪನಿ ಬೆಂಗಳೂರಿನಲ್ಲಿ ಸೇಲ್ಸ್‌ಫೋರ್ಸ್ ಟವರ್ ತೆರೆಯಲು ಸಜ್ಜಾಗಿದೆ. ಇದು ದೇಶದಲ್ಲಿ ಸೇಲ್ಸ್‌ಫೋರ್ಸ್‌ನ ಮೊದಲ ಟವರ್ ಆಗಿದ್ದು, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್, ಚಿಕಾಗೋ, ಲಂಡನ್, ಡಬ್ಲಿನ್, ಸಿಡ್ನಿ, ಟೋಕಿಯೊ, ಅಟ್ಲಾಂಟಾ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಂಪನಿಯು ಮಾಡಿರುವ 10 ಟವರ್ ಹೂಡಿಕೆಗಳಲ್ಲಿ ಇದು ಒಂದಾಗಿದೆ.

ಯಾವ್ಯಾವ ಕಂಪನಿಗೆ ಸೇಲ್ಸ್‌ಫೋರ್ಸ್ ಸೇವೆ

ಜೈಪುರ ರಗ್ಸ್, ಆವಾಸ್ ಫೈನಾನ್ಷಿಯರ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಟಾಟಾ ಪ್ಲೇ, ಮಾಂಟೆ ಕಾರ್ಲೊ, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಮಹೀಂದ್ರಾ ಫೈನಾನ್ಸ್, ಏರ್ ಇಂಡಿಯಾ, ಬೆಂಗಳೂರಿನ ಎಥರ್‌ ಎನರ್ಜಿ, ಕೋಲ್ಕತ್ತಾದ ಬಂಧನ ಬ್ಯಾಂಕ್‌, ಚೆನ್ನೈನ ಪೋತಿಸ್‌ ವರ್ಣಮಹಲ್‌ ಜುವೇಲರ್‌ಗಳಿಗೆ ಸೇಲ್ಸ್‌ಫೋರ್ಸ್ ಸೇವೆ ನೀಡುತ್ತಿದೆ.