ಮಾ.1ರಿಂದ 20ವರೆಗೆ ದ್ವಿತೀಯ ಪಿಯು ಎಕ್ಸಾಂ । ಮಾ.21ರಿಂದ ಏ.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Jan 11 2025, 09:42 AM IST

sslc exam

ಸಾರಾಂಶ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿದೆ.

ಬೆಂಗಳೂರು : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿದೆ. ಅದರಂತೆ ಮಾರ್ಚ್‌.1ರಿಂದ 20ವರೆಗೆ ದ್ವಿತೀಯ ಪಿಯು ಪರೀಕ್ಷೆ ಹಾಗೂ ಮಾ.21ರಿಂದ ಏ.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ.

ಈ ಮೊದಲು ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಕೆಲ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ.

ವೇಳಾಪಟ್ಟಿಯು ಮಂಡಳಿ ವೆಬ್‌ಸೈಟ್‌ನಲ್ಲಿ https://kseab.karnataka.gov.in/ನಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. ದ್ವಿತೀಯ ಪಿಯು ಪರೀಕ್ಷೆ ಬೆಳಗ್ಗೆ 10ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. ಪ್ರತಿ ವಿಷಯದಲ್ಲೂ ಶೇ.20ರಷ್ಟು ಅಂಕಗಳಿಗೆ ಪ್ರಾಯೋಗಿಕ ಹಾಗೂ ಆಂತರಿಕ ಮೌಲ್ಯಮಾಪನ ಇರುವುದರಿಂದ ಈವರೆಗೆ 3.15 ಗಂಟೆ ಇದ್ದ ಪರೀಕ್ಷಾ ಕಾಲಾವಕಾಶವನ್ನು 3 ಗಂಟೆಗೆ ಇಳಿಸಲಾಗಿದೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಂದೆ ಇದ್ದಷ್ಟೇ ಸಮಯ ಇರಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಪರೀಕ್ಷೆಗಳು ಮಧ್ಯಾಹ್ನ 1.15ರವರೆಗೆ ನಡೆಯಲಿವೆ. ಪರೀಕ್ಷೆ ಬರೆಯಲು ಒಟ್ಟು 3.15 ನಿಮಿಷ ಕಾಲಾವಕಾಶ ದೊರೆಯಲಿದೆ.

ದ್ವಿತೀಯ ಪಿಯು ವೇಳಾಪಟ್ಟಿ

ಮಾ.1- ಕನ್ನಡ, ಅರೇಬಿಕ್

ಮಾ.3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾ.4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾ.5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾ.7- ಇತಿಹಾಸ, ಭೌತಶಾಸ್ತ್ರ

ಮಾ.10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

ಮಾ.12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ

ಮಾ.13- ಅರ್ಥಶಾಸ್ತ್ರ

ಮಾ.15- ಆಂಗ್ಲಭಾಷೆ

ಮಾ.17- ಭೂಗೋಳ ಶಾಸ್ತ್ರ

ಮಾ.18- ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಮಾ.19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್

ಮಾ.20- ಹಿಂದಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ

ಮಾ.21- ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ

ಮಾ.24- ಗಣಿತ, ಸಾಮಾನ್ಯ, ಸಮಾಜಶಾಸ್ತ್ರ

ಮಾ.26- ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ

ಮಾ.29- ಸಮಾಜ ವಿಜ್ಞಾನ

ಏ.1- ಜೆಟಿಎಸ್ ವಿಷಯಗಳು: ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್‌, ಎಎನ್‌ಎಸ್‌ಐ, ಸಾಮಾನ್ಯ ಅರ್ಥಶಾಸ್ತ್ರ

ಏ.2 - ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ

ಏ.4- ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು