ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ 65 ಶಾಲಾ ವಾಹನಗಳ ಜಪ್ತಿ : ಪ್ರಕರಣ

| N/A | Published : Feb 25 2025, 07:56 AM IST

School bus

ಸಾರಾಂಶ

ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ 231 ಶಾಲಾ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಪ್ರಕರಣ ದಾಖಲಿಸಿದ್ದು, 65 ವಾಹನಗಳನ್ನು ಜಪ್ತಿ ಮಾಡಲಾಗಿದೆ.

 ಬೆಂಗಳೂರು: ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ 231 ಶಾಲಾ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಪ್ರಕರಣ ದಾಖಲಿಸಿದ್ದು, 65 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಶಾಲಾ ವಾಹನಗಳಿಂದಾಗುತ್ತಿರುವ ನಿಯಮ ಉಲ್ಲಂಘನೆ ಪರಿಶೀಲಿಸಲು ಬೆಂಗಳೂರು ನಗರ ಜಂಟಿ ಸಾರಿಗೆ ಆಯುಕ್ತರ ನೇತೃತ್ವದಲ್ಲಿ 10 ತನಿಖಾ ತಂಡಗಳು ಸೋಮವಾರ ನಗರದ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿದವು.

 ಈ ವೇಳೆ 500ಕ್ಕೂ ಹೆಚ್ಚಿನ ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, 231 ವಾಹನಗಳು ಸುಪ್ರೀಂಕೋರ್ಟ್‌ ಮಾರ್ಗಸೂಚಿ ಉಲ್ಲಂಘಿಸಿ, ತೆರಿಗೆ ಪಾವತಿಸದೆ, ಅರ್ಹತಾ ಪತ್ರ ನವೀಕರಿಸದೇ, ರಹದಾರಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದದ್ದು ಪತ್ತೆಯಾಗಿದೆ. ಅಷ್ಟೂ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.