ಡಿಜಿ- ಐಜಿಪಿ ನಿಗಾದಲ್ಲಿ ಡ್ರಗ್ಸ್‌ ದಂಧೆ ತಡೆಗೆ ಕಾರ್ಯಪಡೆ

| N/A | Published : Aug 03 2025, 05:18 AM IST

Vidhan soudha

ಸಾರಾಂಶ

ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ತಡೆಯುವ ಉದ್ದೇಶದೊಂದಿಗೆ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆಗೆ ಸರ್ಕಾರ ಆದೇಶಿಸಿದೆ.

ಬೆಂಗಳೂರು : ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ತಡೆಯುವ ಉದ್ದೇಶದೊಂದಿಗೆ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆಗೆ ಸರ್ಕಾರ ಆದೇಶಿಸಿದೆ.

ಮೈಸೂರಿನಲ್ಲಿ ಮಾದಕ ವಸ್ತುಗಳ ಉತ್ಪಾದನೆಯ ಬೃಹತ್‌ ಘಟಕ ಪತ್ತೆಯಾದ ನಂತರದಿಂದ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚಿಸಿ ಆದೇಶಿಸಿದೆ. ಈ ಕಾರ್ಯಪಡೆ ಡಿಜಿ-ಐಜಿಪಿ ಅವರ ನಿಗಾವಣೆಯಲ್ಲಿ ಕೆಲಸ ಮಾಡಲಿದೆ. ಅಲ್ಲದೆ, ಈ ಕಾರ್ಯಪಡೆಯ ಕಾರ್ಯವರದಿಯನ್ನು ಸೈಬರ್‌ ಕಮಾಂಡ್‌ ಡಿಜಿ ಅವರಿಗೆ ಮಾಡಬೇಕು ಎಂದು ಸೂಚಿಸಲಾಗಿದೆ.

ಕಾರ್ಯಪಡೆಯ ಸಮರ್ಪಕ ಕಾರ್ಯನಿರ್ವಹಣೆಗಾಗಿ ಹೊಸದಾಗಿ 10 ಹುದ್ದೆಗಳನ್ನು ಸೃಜಿಸಲಾಗುತ್ತಿದೆ. ಆ ಹುದ್ದೆಗಳ ಪೈಕಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ, ಸಹಾಯಕ ಪೊಲೀಸ್‌ ಆಯುಕ್ತರ ತಲಾ 2 ಹುದ್ದೆ, ಸಹಾಯಕ ಆಡಳಿತಾಧಿಕಾರಿ, ಶಾಖಾಧೀಕ್ಷಕ, ಕಿರಿಯ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಶೀಘ್ರ ಲಿಪಿಗಾರ ಮತ್ತು ದಲಾಯತ್‌ ತಲಾ 1 ಹುದ್ದೆ ಸೃಷ್ಟಿಸಲು ನಿರ್ದೇಶಿಸಲಾಗಿದೆ. ಉಳಿದಂತೆ ನಕ್ಸಲ್‌ ನಿಗ್ರಹ ಕಾರ್ಯಪಡೆಯಿಂದ ಪಿಐ (ಸಿವಿಲ್‌) 2 ಹುದ್ದೆ, ಪಿಎಸ್‌ಐ (ಸಿವಿಲ್‌) 4 ಹುದ್ದೆ, ಮುಖ್ಯ ಪೇದೆ 20 ಹಾಗೂ 30 ಪೇದೆ ಹುದ್ದೆಗಳನ್ನು ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ.

- ರಾಜ್ಯದಲ್ಲಿ ಮಾದಕ ವಸ್ತು ಉತ್ಪಾದನೆ, ಮಾರಾಟ, ಬಳಕೆಗೆ ಕಡಿವಾಣ

- ಡಿಜಿ- ಐಜಿಪಿ ನಿಗಾದಲ್ಲಿ ಕಾರ್‍ಯಪಡೆ ಕೆಲಸ । ಇದಕ್ಕಾಗಿ 10 ಹುದ್ದೆ ಸೃಷ್ಟಿ

ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ

ರಾಜ್ಯದಲ್ಲಿ ಮಾದಕವಸ್ತು ಉತ್ಪಾದನೆ, ಮಾರಾಟ, ಬಳಕೆಗೆ ತಡೆ ಹೇರಲು ಕಠಿಣ ಕ್ರಮ

ಡ್ರಗ್ಸ್‌ ದಂಧೆ ಮೇಲೆ ನಿಗಾ ಇಡಲು ಮಾದಕ ವಸ್ತು ವಿರೋಧಿ ಕಾರ್ಯಪಡೆ ರಚಿಸಿ ಆದೇಶ

ಡಿಜಿ-ಐಜಿಪಿ ನಿಗಾದಲ್ಲಿ ಕಾರ್ಯನಿರ್ವಹಿಸಲಿರುವ ಪಡೆ. ಇದಕ್ಕಾಗಿ 10 ಹೊಸ ಹುದ್ದೆ ಸೃಷ್ಟಿ

Read more Articles on