ಎಸ್ಸೆಸ್ಸೆಲ್ಸಿ, ಪಿಯು ವಾರ್ಷಿಕ ಪರೀಕ್ಷೆ ವೇಳಾಪಟ್ಟಿ - ಮಾ.1ರಿಂದ 19ರವರೆಗೆ ಪಿಯುಸಿ ಪರೀಕ್ಷೆ

| Published : Dec 03 2024, 09:00 AM IST

CBSE board exams 2025 Class 12 Datesheet Released

ಸಾರಾಂಶ

ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ   ಪ್ರಕಟ

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ್ದು, ಮುಂದಿನ ವರ್ಷ ಮಾ.1ರಿಂದ 19ರವರೆಗೆ ದ್ವಿತೀಯ ಪಿಯುಸಿ, ಮಾ.20ರಿಂದ ಏ.2ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪಿಯು ಪರೀಕ್ಷೆಗಳಿಗೆ ಈ ಬಾರಿಯಿಂದ 15 ನಿಮಿಷ ಕಾಲಾವಕಾಶ ಕಡಿಮೆ ಮಾಡಲಾಗಿದೆ.

ಪಿಯುಸಿಯ ಎಲ್ಲ ಪರೀಕ್ಷೆಗಳನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ(ಸಂಗೀತ ವಿಷಯಗಳು 10ರಿಂದ 12.15ರವರೆಗೆ), ಎಸ್ಸೆಸ್ಸೆಲ್ಸಿಯ ಎಲ್ಲ ಪರೀಕ್ಷೆಗಳನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಸಲಾಗುತ್ತದೆ. ಸಂಗೀತ ವಿಷಯದ ಪರೀಕ್ಷೆಗಳಿಗೆ ಮಾತ್ರ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ಸಮಯ ನಿಗದಿಪಡಿಸಲಾಗಿದೆ. ಈ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಡಿ.16 ರೊಳಗೆ ಸಲ್ಲಿಸುವಂತೆ ಮಂಡಳಿ ಸೂಚಿಸಿದೆ. ಮಂಡಳಿ ವೆಬ್‌ಸೈಟ್‌ https://kseab.karnataka.gov.in ನಲ್ಲಿ ವೇಳಾಪಟ್ಟಿ ಲಭ್ಯವಿದ್ದು, ವಿದ್ಯಾರ್ಥಿಗಳ ಮಾಹಿತಿಗಾಗಿ ಎಲ್ಲ ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ.

-ದ್ವಿತೀಯ ಪಿಯು ವೇಳಾಪಟ್ಟಿ-

ಮಾ.1- ಕನ್ನಡ, ಅರೇಬಿಕ್‌

ಮಾ.3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾ.4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌

ಮಾ.5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾ.7- ಇತಿಹಾಸ, ಭೌತಶಾಸ್ತ್ರ

ಮಾ.8- ಹಿಂದಿ

ಮಾ.10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

ಮಾ.12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ

ಮಾ.13- ಅರ್ಥಶಾಸ್ತ್ರ

ಮಾ.15- ಇಂಗ್ಲಿಷ್‌

ಮಾ.17- ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮಾ.18- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಮಾ.19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೈಲ್‌, ಆಟೋಮೊಬೈಲ್‌, ಹೆಲ್ತ್‌ಕೇರ್‌, ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌

ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ

ಮಾ.20- ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ

ಮಾ.22- ಸಮಾಜ ವಿಜ್ಞಾನ

ಮಾ. 24- ದ್ವಿತೀಯ ಭಾಷೆ: ಇಂಗ್ಲಿಷ್‌, ಕನ್ನಡ

ಮಾ.27- ಗಣಿತ, ಸಮಾಜಶಾಸ್ತ್ರ

ಮಾ.29- ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಎನ್‌ಎಸ್‌ಕ್ಯೂಎಫ್‌ ವಿಷಯಗಳು

ಏ.1- ಜಿಟಿಎಸ್‌ ವಿಷಯಗಳು

ಏ.2- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ

ಪಿಯು ಪರೀಕ್ಷೆಗೆ 15 ನಿಮಿಷ ಕಡಿತ

ದ್ವಿತೀಯ ಪಿಯುಸಿಯ ಎಲ್ಲ ಪರೀಕ್ಷೆಗಳಿಗೂ ಈ ಬಾರಿಯಿಂದ 15 ನಿಮಿಷಗಳಷ್ಟು ಸಮಯ ಕಡಿಮೆ ಮಾಡಲಾಗಿದೆ. 2023-24ನೇ ಸಾಲಿನಿಂದ ಎಲ್ಲ ವಿಷಯಗಳಿಗೂ ಪ್ರಾಯೋಗಿಕ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳು ನಿಗದಿಯಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಈ ಮೊದಲಿನಂತೆ ಲಿಖಿತ ಪರೀಕ್ಷೆಯನ್ನು 100 ಅಂಕಗಳಿಗೆ ಬರೆಯುವಂತಿಲ್ಲ. ಪ್ರಾಯೋಗಿಕ ಪರೀಕ್ಷೆ ಇರುವ ವಿಜ್ಞಾನ ವಿಷಯಗಳಲ್ಲಿ ಶೇ.30ರಷ್ಟು ಅಂಕಗಳಿಗೆ, ಉಳಿದ ವಿಷಯಗಳಲ್ಲಿ ಶೇ.80 ಅಂಕಗಳಿಗೆ ಲಿಖಿತ ಪರೀಕ್ಷೆ ಬರೆಯಬೇಕು. ಉಳಿದ ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಇರಲಿದೆ. ಹಾಗಾಗಿ ಈವರೆಗೆ ಪರೀಕ್ಷೆ ಬರೆಯಲು ಇದ್ದ 3.15 ಗಂಟೆಗಳ (ಪ್ರಶ್ನೆ ಪತ್ರಿಕೆ ಓದಿಕೊಳ್ಳುವುದು ಸೇರಿ) ಕಾಲಾವಕಾಶವನ್ನು 3 ಗಂಟೆಗೆ ಇಳಿಸಲಾಗಿದೆ.