ಸಾರಾಂಶ
ದಾಸರಹಳ್ಳಿ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಶಾಸಕ ಎಸ್.ಮುನಿರಾಜು ಹೇಳಿದರು.
ಪೀಣ್ಯ ದಾಸರಹಳ್ಳಿ : ದಾಸರಹಳ್ಳಿ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಶಾಸಕ ಎಸ್.ಮುನಿರಾಜು ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಮಹೇಶ್ವರಿ ದೇವಸ್ಥಾನ ಹತ್ತಿರ ಕಾಳಶ್ರೀ ನಗರ, ಮಲ್ಲಸಂದ್ರ ರವೀಂದ್ರ ನಗರದ ಅಂಗನವಾಡಿ ಕೇಂದ್ರಕ್ಕೆ ಪೀಣ್ಯದ ಎಸ್‌ಆರ್‌ಪಿ ಸಿಂಥೆಟಿಕ್ ರಬ್ಬರ್ ಪ್ರಾಡೆಕ್ಟ್ಸ್ ಪ್ರೈವೆಟ್ ಲಿಮಿಟೆಡ್ ಸಹಕಾರದೊಂದಿಗೆ ಖುರ್ಚಿ ಹಾಗೂ ಮೇಜುಗಳನ್ನು ವಿತರಿಸಿ ಮಾತನಾಡಿದ ಅವರು, ದಾಸರಹಳ್ಳಿ ಕ್ಷೇತ್ರದಲ್ಲಿ 117 ಅಂಗನವಾಡಿಗಳಿದ್ದು, ಪ್ರಥಮ ಹಂತದಲ್ಲಿ ಈಗಾಗಲೇ ನನ್ನ ಸ್ವಂತ ಹಣದಿಂದ 200ಕ್ಕೂ ಹೆಚ್ಚು ಅಲ್ಮೇರಾಗಳನ್ನು ನೀಡಿದ್ದೇನೆ. ಉದ್ಯಮಿಗಳ ಸಹಕಾರದಿಂದ ಇಂದು ₹3 ಲಕ್ಷ ವೆಚ್ಚದಲ್ಲಿ 6 ಅಂಗನವಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸುತ್ತಿದ್ದು, ಕ್ರಮೇಣ ಎಲ್ಲಾ ಅಂಗನವಾಡಿಗಳ ಸುಧಾರಣೆಗೆ ಒತ್ತು ನೀಡಲಾಗುವುದು ಎಂದರು.
2008ರಲ್ಲಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಗೊಂಡ ಬಳಿಕ ಈವರೆಗೂ ಕ್ಷೇತ್ರದಲ್ಲಿ ಅನೇಕ ಶಾಲೆ, ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ ಅರ್ಥಿಕವಾಗಿ ಹಿಂದುಳಿದಿರುವ ಕಾರ್ಮಿಕರು ಹೆಚ್ಚಿದ್ದು, ಅವರ ಮಕ್ಕಳ ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಅನುಗುಣವಾಗಿ ಶಾಲಾ ಕೊಠಡಿ, ಲ್ಯಾಬ್, ಇತರ ಸೌಕರ್ಯಗಳನ್ನು ಒದಗಿಸಲು ಬದ್ಧನಾಗಿರುವೆ ಎಂದರು.
ಎಸ್‌ಆರ್‌ಪಿ ಸಿಂಥೆಟಿಕ್ ರಬ್ಬರ್ ಪ್ರಾಡೆಕ್ಟ್ಸ್ ಪ್ರೈವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ವೆಂಕಟೇಶ್ ಮಾತನಾಡಿ, ನಾವು ಮಾಡಿದ ಸೇವೆಯಿಂದ ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಂಕಣತೊಟ್ಟು ನಿಂತಿರುವ ಶಾಸಕ ಮುನಿರಾಜು ಅವರ ಕಾರ್ಯ ಶ್ಲಾಘನೀಯ ಎಂದರು.
ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಕೆ.ಎಸ್.ಶಕುಂತಲಾ ದೇವಿ, ಎಸಿಡಿಪಿಓ ಅನಿತಾ, ಮೇಲ್ವಿಚಾರಕಿ ವೈಶಾಲಿ ಕೆ.ಧೂಳೆ, ಬಿಬಿಎಂಪಿ ಮಾಜಿ ಸದಸ್ಯೆ ಉಮಾದೇವಿ ನಾಗರಾಜ್, ಬಿಜೆಪಿ ಮುಖಂಡರಾದ ಟಿ.ಎಸ್.ಗಂಗರಾಜು, ಶಿವಕುಮಾರ್, ಬಿ.ಟಿ.ಶ್ರೀನಿವಾಸ್, ಕೇಂಪೇಗೌಡ, ವಿನೋಧ್ ಗೌಡ, ರಘು, ಹುಚ್ಚರಂಗಯ್ಯ, ಯತೀಶ್, ಅಂಗನವಾಡಿ ಸಹಾಯಕಿಯರು ಇದ್ದರು.