ಸಾರಾಂಶ
ಹಿಂದಿನ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಚಿವರಿಗೆ ಆರೆಸ್ಸೆಸ್ ಸ್ವಯಂ ಸೇವಕರನ್ನು ಆಪ್ತ ಸಹಾಯಕರನ್ನಾಗಿ (ಪಿಎ) ನೇಮಿಸುವಂತೆ ನಾವು ಯಾರಿಗೂ ಹೇಳಿಲ್ಲ ಸಂಘದ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಬೆಂಗಳೂರು : ಹಿಂದಿನ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಚಿವರಿಗೆ ಆರೆಸ್ಸೆಸ್ ಸ್ವಯಂ ಸೇವಕರನ್ನು ಆಪ್ತ ಸಹಾಯಕರನ್ನಾಗಿ (ಪಿಎ) ನೇಮಿಸುವಂತೆ ನಾವು ಯಾರಿಗೂ ಹೇಳಿಲ್ಲ ಸಂಘದ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಯಂ ಸೇವಕರೂ ಈ ಸಮಾಜದ ನಾಗರಿಕರು. ಅವರ ಅರ್ಹತೆ ಸಾಮರ್ಥ್ಯ, ಅನುಭವದ ಆಧಾರದ ಮೇಲೆ ಪಿಎ ಆಗಿ ನೇಮಕ ಆಗಿರಬಹುದು. ಹಾಗಂತ ನೂರಕ್ಕೆ ನೂರಷ್ಟು ಸ್ವಯಂ ಸೇವಕರೇ ನೇಮಕವಾಗಿಲ್ಲ ಎಂದರು.
ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅಲ್ಲೂ ಹಲವು ಕಡೆ ಸಂಘದ ಹಿನ್ನೆಲೆಯ ಸ್ವಯಂ ಸೇವಕರ ನೇಮಕವಾಗಿದೆ. ಅಲ್ಲೂ ಅವರ ಅರ್ಹತೆ ಮೇಲೆ ನೇಮಕವಾಗಿದ್ದಾರೆ. ಒಂದು ವೇಳೆ ಅಕ್ರಮ ನೇಮಕಾತಿ ಆಗಿದ್ದರೆ ಪ್ರಶ್ನಿಸುವುದರಲ್ಲಿ ಅರ್ಥವಿದೆ. ಇಲ್ಲಿ ಹಾಗೆ ಆಗಿಲ್ಲ. ಹೀಗಾಗಿ ಪಿಎ ನೇಮಕಾತಿಯಲ್ಲಿ ಸಂಘದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.