ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ

| N/A | Published : May 11 2025, 11:10 AM IST

Indian Army
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
Share this Article
  • FB
  • TW
  • Linkdin
  • Email

ಸಾರಾಂಶ

ಹನಿಮೂನ್ ಮೊಟಕುಗೊಳಿಸಿ ದೇಶಸೇವೆಯ ಪಣತೊಟ್ಟು ಯುದ್ಧ ಭೂಮಿಯತ್ತ ಹೊರಟ ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ನಿವಾಸಿವಾದ ಯೋಧ ಜಯಂತ್ ಎಂಬುವವರೇ ಇದೀಗ ದೇಶಸೇವೆಗೆ ತೆರಳಿದ ಯೋಧ.

 ಕಾರವಾರ : ಹನಿಮೂನ್ ಮೊಟಕುಗೊಳಿಸಿ ದೇಶಸೇವೆಯ ಪಣತೊಟ್ಟು ಯುದ್ಧ ಭೂಮಿಯತ್ತ ಹೊರಟ ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ನಿವಾಸಿವಾದ ಯೋಧ ಜಯಂತ್ ಎಂಬುವವರೇ ಇದೀಗ ದೇಶಸೇವೆಗೆ ತೆರಳಿದ ಯೋಧ.

 ಜಯಂತ್‌ ಛತ್ತೀಸಘಡದ ಸಿ.ಆರ್.ಪಿ.ಎಫ್ ಬೆಟಾಲಿಯನ್‌ನಲ್ಲಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಜಯಂತ್‌ ಮದುವೆಯಾಗಿ 9 ದಿನವಷ್ಟೇ ಕಳೆದಿದ್ದು, ಪತ್ನಿಯನ್ನು ಬಿಟ್ಟು ಛತ್ತೀಸ್‌ಗಢದ ತನ್ನ ಬೆಟಾಲಿಯನ್‌ ಯುದ್ಧಕ್ಕಾಗಿ ತೆರಳಿದ್ದಾರೆ. 

ಕಳೆದ ಮೇ 1ರಂದು ಮದುವೆಯಾಗಿ ಊಟಿಗೆ ಹನಿಮೂನ್‌ಗೆ ತೆರಳಲು ನಿರ್ಧರಿಸಿದ್ದ ಜಯಂತ್ ದಂಪತಿ, ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಸೈನ್ಯದಿಂದ ಸೇವೆಗೆ ಸೇರಲು ತುರ್ತು ಕರೆ ಬಂದಿದೆ. ಆಗಲೇ ಕುಟುಂಬಸ್ಥರಿಗೆ ವಿಷಯ ತಿಳಿಸಿ ಕರ್ತವ್ಯದ ಕರೆಗೆ ಓಗೊಟ್ಟಿದ್ದಾರೆ. ವಿಷಯ ತಿಳಿದ ಸಿದ್ಧಾಪುರ ಜನರು, ಕುಟುಂಬಸ್ಥರೊಡಗೂಡಿ ಯೋಧನಿಗೆ ಸನ್ಮಾನ ಮಾಡಿ, ‘ಯುದ್ಧದಲ್ಲಿ ಗೆದ್ದು ಬಾ’ ಎಂದು ಹಾರೈಸಿ ಬೀಳ್ಕೊಟ್ಟಿದ್ದಾರೆ.