ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್‌) ಗದಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಫರ್ವೇಜ್‌ ವಿರುದ್ಧ ಹಲವು ದೂರುಗಳು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು : ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್‌) ಗದಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಫರ್ವೇಜ್‌ ವಿರುದ್ಧ ಹಲವು ದೂರುಗಳು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾಪತ್ತೆಯಾಗಿರುವ ಅಧಿಕಾರಿ ಫರ್ವೇಜ್‌ ಹೈದರಾಬಾದ್‌ಗೆ ಹೋಗಿರುವ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ಪರಿಶೀಲನೆ ನಡೆಯುತ್ತಿದೆ’ ಎಂದರು.

‘ಅಧಿಕಾರಿ ಕಾನೂನು ಪ್ರಕಾರ ಕೆಲಸ ಮಾಡುತ್ತಿರಲಿಲ್ಲ ಎಂಬ ದೂರುಗಳಿದ್ದು, ತನಿಖೆ ನಡೆಯುತ್ತಿದೆ. ಯಾವುದೇ ಕಾಮಗಾರಿ ನಡೆದರೂ ಕಾಮಗಾರಿಗೂ ಮುನ್ನ ಹಾಗೂ ನಂತರ ಆ ಸ್ಥಳ ಹೇಗಿದೆ ಎಂದು ವಿಡಿಯೋ ದಾಖಲೆ ಹೊಂದಿರಬೇಕು. ಆ ಮೂಲಕ ನಕಲಿ ಬಿಲ್ ವಂಚನೆ ತಡೆಯಬೇಕು ಎಂದು ಸೂಚಿಸಿದ್ದೇವೆ. ಆದರೆ ಈತ ಸ್ಥಳಗಳಿಗೆ ಭೇಟಿ ನೀಡುತ್ತಿರಲಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿಂದೆಯೂ ಆತ ನಾಪತ್ತೆ ಆದ ಪ್ರಕರಣ ನಡೆದಿದ್ದವು’ ಎಂದರು.

ಅವರೇನು ವಿತ್ತ ಅಧಿಕಾರಿಯೆ?

ಎಇಇ ಕೇಸನ್ನು ಏಕೆ ದೊಡ್ಡದು ಮಾಡುತ್ತಿದ್ದೀರಿ? ಅನುದಾನದ ಒತ್ತಡ ಅವರ ಮೇಲೆ ಏಕೆ ಬರಬೇಕು? ಅವರೇನು ಆರ್ಥಿಕ ಇಲಾಖೆ ಅಧಿಕಾರಿಯೆ? ಸರ್ಕಾರ ಅನುದಾನ ಕೊಡಲಿಲ್ಲ ಎಂದೇ ಅವರು ಕಣ್ಮರೆ ಆದರು ಎಂದು ಹೇಗೆ ನಂಬುತ್ತೀರಿ?

- ಕೆ.ಜೆ. ಜಾರ್ಜ್‌, ಸಚಿವ