ಬೆಂಗಳೂರು-ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್‌ ರೈಲು ಸಂಚಾರ ಸಂಬಂಧ ಪರೀಕ್ಷಾರ್ಥ ಸಂಚಾರವು ಶನಿವಾರ ಯಶಸ್ವಿಯಾಗಿ ನಡೆದಿದೆ.ಹಾಸನದಲ್ಲಿ ಕೆಲ ಸಮಯ ನಿಲ್ಲಿಸಿದ ಕಾರಣ ಸುಬ್ರಹ್ಮಣ್ಯ ರೋಡ್‌ಗೆ ಸಂಜೆ 3, ಪುತ್ತೂರಿಗೆ 3.30ಕ್ಕೆ ಹಾಗೂ ಮಂಗಳೂರಿಗೆ ಸಂಜೆ 4.30ಕ್ಕೆ ತಲುಪಿದೆ.

ಮಂಗಳೂರು: ಬೆಂಗಳೂರು-ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್‌ ರೈಲು ಸಂಚಾರ ಸಂಬಂಧ ಪರೀಕ್ಷಾರ್ಥ ಸಂಚಾರವು ಶನಿವಾರ ಯಶಸ್ವಿಯಾಗಿ ನಡೆದಿದೆ.

ಬೆಂಗಳೂರಿನ ಯಶವಂತಪುರದಿಂದ ಹೊರಟ 16 ಬೋಗಿಗಳ ವಂದೇ ಭಾರತ್‌

ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಟ 16 ಬೋಗಿಗಳ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು, ನಿಗದಿಯಂತೆ ಮಧ್ಯಾಹ್ನ 2.30ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಬೇಕಿತ್ತು.

ಮಂಗಳೂರಿಗೆ ಸಂಜೆ 4.30ಕ್ಕೆ

ಆದರೆ ಹಾಸನದಲ್ಲಿ ಕೆಲ ಸಮಯ ನಿಲ್ಲಿಸಿದ ಕಾರಣ ಸುಬ್ರಹ್ಮಣ್ಯ ರೋಡ್‌ಗೆ ಸಂಜೆ 3, ಪುತ್ತೂರಿಗೆ 3.30ಕ್ಕೆ ಹಾಗೂ ಮಂಗಳೂರಿಗೆ ಸಂಜೆ 4.30ಕ್ಕೆ ತಲುಪಿದೆ. ಇದರಲ್ಲಿ ಅಧಿಕಾರಿಗಳು, ತಾಂತ್ರಿಕ ವರ್ಗ ಮಾತ್ರ ಸಂಚರಿಸಿತು. ಆ.12ರಂದು ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್‌ವರೆಗೆ ಮೊದಲ ಪರೀಕ್ಷಾರ್ಥ ಸಂಚಾರ ನಡೆದಿತ್ತು.