ಪ್ರತಿಭಾ ಕಾರಂಜಿ ಆಯೋಜನೆಗೆ ಬಿಇಒ ಮೆಚ್ಚುಗೆ

| Published : Nov 18 2025, 12:45 AM IST

ಪ್ರತಿಭಾ ಕಾರಂಜಿ ಆಯೋಜನೆಗೆ ಬಿಇಒ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ ಸೂರ್ಯದೇವಸ್ಥಾನ ಶಾಲೆ ಸರ್ವಾಂಗೀಣ ಬೆಳವಣಿಗೆ ಜೊತೆಗೆ ಶಾಲೆಯೂ ಅಂದ ಚಂದವಾಗಿ ಕಾಣುವಂತಾಗಿದೆ. ಊರಿನವರ ಸಹಕಾರ, ಶಿಕ್ಷಕರ ಪರಿಶ್ರಮ ಮತ್ತು ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ನೋಡಿ ತುಂಬಾ ಸಂತೋಷವಾಗಿದೆ ಎಂದು ಬಿಇಒ ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಪ್ಪ

ಸೂರ್ಯದೇವಸ್ಥಾನ ಶಾಲೆ ಸರ್ವಾಂಗೀಣ ಬೆಳವಣಿಗೆ ಜೊತೆಗೆ ಶಾಲೆಯೂ ಅಂದ ಚಂದವಾಗಿ ಕಾಣುವಂತಾಗಿದೆ. ಊರಿನವರ ಸಹಕಾರ, ಶಿಕ್ಷಕರ ಪರಿಶ್ರಮ ಮತ್ತು ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ನೋಡಿ ತುಂಬಾ ಸಂತೋಷವಾಗಿದೆ ಎಂದು ಬಿಇಒ ರಾಘವೇಂದ್ರ ಹೇಳಿದರು.

ಸೂರ್ಯ ದೇವಸ್ಥಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಪ್ಪ ಗ್ರಾಮಾಂತರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ವೆಂಕಟೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಎನ್.ಜಿ. ಉದ್ಘಾಟಿಸಿ ಮಾತನಾಡಿದರು. ಎದುರಿಗೆ ಬಂದಿರುವ ದ್ವಾರಮಂಟಪ, ಸೆಲ್ಫಿ ಕಾರ್ನರ್, ಕಾಫಿ ತಿಂಡಿ, ಊಟ ಉಪಚಾರ, ಕೊಠಡಿ ವ್ಯವಸ್ಥೆ ವೇದಿಕೆ ವ್ಯವಸ್ಥೆ, ಅಲಂಕಾರ ಎಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ ಕೆ.ಕೆ. ಮಾತನಾಡಿ ಶಿಕ್ಷಕರ ಸತತ ಪರಿಶ್ರಮ ಮತ್ತು ಕ್ರಿಯಾಶೀಲತೆ ಹಾಗೂ ಊರಿನವರು ಪ್ರಯತ್ನದ ಫಲವಾಗಿ ಈ ಕಾರ್ಯಕ್ರಮ ಎಷ್ಟು ಅದ್ಧೂರಿಯಾಗಿ ಮೂಡಿ ಬಂದಿದೆ ಎಂದು ಶುಭ ಹಾರೈಸಿದರು.

ಉಪಾಧ್ಯಕ್ಷ ಅಭಿಷೇಕ್ ಸೆಲ್ಫಿ ಕಾರ್ನರ್ ಉದ್ಘಾಟಿಸಿ ಮಾತನಾಡಿ ಶಿಕ್ಷಕರ ಕ್ರಿಯಾಶೀಲತೆ ಮತ್ತು ಕಾರ್ಯಕ್ರಮ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿವೆಂಕಟೇಶ್‌ , ಗ್ರಾಮ ಪಂಚಾಯಿತಿ ಸದಸ್ಯ ರಾಜೀವಿ ಶುಭ ಹಾರೈಸಿದರು. ಇನ್ನೊಂದೆಡೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತ ತುಂಬಿದ ಕೊಳಗದಲ್ಲಿದ್ದ ಸಿಂಗಾರವನ್ನ ತೆರೆಯುವ ಮೂಲಕ ದಾನಿಗಳಾದ ಹರೀಶ್ ಕಂಟ್ರಾಕ್ಟರ್ ಮತ್ತು ಕೆಡಿಪಿ ಸದಸ್ಯ ರಾಜಶಂಕರ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ದಾನಿಗಳು, ಅಥಿತಿಗಳು ಮತ್ತು ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಯಶೋಧ ಆರ್.ಓ, ಆರ್.ಡಿ. ರವೀಂದ್ರ, ಸುಚಿತ್ಚಂದ್ರ, ರವೀಂದ್ರ ಗುಡ್ಡೆಕೊಪ್ಪ, ಮಾರುತಿ ಪ್ರಸಾದ್, ಗಂಗಾ ಶುಭಾಷ್, ಸಿಆರ್‌ಪಿಗಳಾದ ಜ್ಯೋತಿ, ಮಹಾಲಕ್ಷ್ಮಿ ಭಟ್, ಸುಖೇಶ್, ಮೇಘನಾ, ಶ್ರೀ ಸೂರ್ಯಸೋಮೇಶ್ವರ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಮಲ್ಲಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.