ಪಾಂಡವಪುರ:

ತಾಲೂಕಿನ ಕೆ.ಬೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೋಸ್ಕರ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಹಲವು ಮುಖಂಡರು ಚರ್ಚೆ ನಡೆಸಿದರು.

ಗ್ರಾಮದ ಶಾಲೆ ಅಭಿವೃದ್ಧಿಗಾಗಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಮುಖಂಡರಾದ ಮಧು ಬಿ.ಗೌಡ, ಕೆ.ಎಸ್.ಮಹದೇವೇಗೌಡ, ಶ್ರೀಕಂಠೇಗೌಡ, ಕೃಷ್ಣೇಗೌಡ, ಚಿಕ್ಕಣ್ಣ, ವಡ್ಡರಹಳ್ಳಿ ನಿಂಗೇಗೌಡ, ಬಿ.ಟಿ.ಶಿವಣ್ಣ, ಚಂದ್ರಣ್ಣ, ಮಾಕೇಗೌಡ, ಶಿಕ್ಷಕರಾದ ವಿಷಕಂಠೇಗೌಡ, ಚಾಗಶೆಟ್ಟಹಳ್ಳಿಯ ಕೆ.ಎಸ್.ಚಂದ್ರಸೇಖರ್ ಹಾಗೂ ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಮಾಜ ಸೇವಕ ಬೆಂಗಳೂರಿನ ಅರವಿಂದ್ ರಾಘವನ್ ಅವರೊಂದಿಗೆ ಶಾಲೆ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಇದೇ ವೇಳೆ ಚಾಗಶೆಟ್ಟಹಳ್ಳಿಯ ವಕೀಲರ ಸಿ.ಆರ್.ಜಗದೀಶ್ ಅವರು ಶಾಲೆಗೆ ವಾಟರ್ ಪಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದರು. ಕನ್ನಡಪ್ರಭ ಪ್ರಸರಣ ವಿಭಾಗದ ಗಿರೀಶ್, ಮುಖ್ಯ ಶಿಕ್ಷಕ ಟಿ.ಜೆ.ರಾಜೇಂದ್ರ, ಶಿಕ್ಷಕರಾದ ಕೆ.ಪಿ.ಮಂಜುಳ, ಜಿ.ಪಿ.ರಶ್ಮಿ, ಸಿ.ಟಿ.ಪೂರ್ಣಿಮ ಅವರು ಹಾಜರಿದ್ದು ಶಾಲೆ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ಕಲೆಹಾಕಿದರು.

ಜೂ.೨೬ರಂದು ಪಿ.ಎನ್. ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ


ಕನ್ನಡಪ್ರಭ ವಾರ್ತೆ ಮಂಡ್ಯಹಿರಿಯ ಪತ್ರಕರ್ತ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜಕೀಯ ಪರಿಚಯ ಪಿ.ಎನ್. ಜವರಪ್ಪಗೌಡ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ.೨೬ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಘದ ತಗ್ಗಹಳ್ಳಿ ವೆಂಕಟೇಶ್ ಹೇಳಿದರು.

ಮಾಜಿ ಸಚಿವ ಎಚ್.ವಿಶ್ವನಾಥ್ ಪುಸ್ತಕ ಬಿಡುಗಡೆ ಮಾಡುವರು. ಮೈಸೂರಿನ ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕನ್ನಡಪ್ರಭ ದಿನಪತ್ರಿಕೆ ಉಪ ಸಂಪಾದಕರಾಗಿದ್ದ ಕಾಡೆನಹಳ್ಳಿ ವೀರಣ್ಣಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪಿ.ಎನ್.ಜವರಪ್ಪಗೌಡ ಅವರ ಪುತ್ರ ಪಿ.ಜೆ.ಚೈತನ್ಯಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ:ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಾಡೇನಹಳ್ಳಿಯಲ್ಲಿ ಚೆನ್ನಮ್ಮ ಮತ್ತು ಈರೇಗೌಡರ ಪುತ್ರರಾಗಿ ವೀರಣ್ಣಗೌಡ ೧೯೫೯ರಲ್ಲಿ ಜನಿಸಿದರು. ತಂದೆ ಶಾಲಾ ಶಿಕ್ಷಕರು. ಶಿಕ್ಷಣ ಪ್ರೇಮ ತಂದೆಯಿಂದಲೇ ಬಂದು ಪತ್ರಿಕೋದ್ಯಮ ಮತ್ತು ಶಿಕ್ಷಣದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅಗ್ನಿಗೋಳ ಕಾದಂಬರಿ ಬಿರುಕು ಕಥನ ಸಂಕಲನವನ್ನು ಪ್ರಕಟಿಸುವುದರ ಮೂಲಕ ಸಾಹಿತಿಯಾಗಿ ರೂಪುಗೊಂಡಿದ್ದಾರೆ. ರಾಜ್ಯದ ದೂರದರ್ಶಿ ನಾಯಕರಾದ ಎಸ್.ಎಂ.ಕೃಷ್ಣ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ನಾಡಿನ ಪ್ರತಿಷ್ಠಿತ ಪತ್ರಿಕೆಯಾದ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿರುವ ಇವರು ಶ್ರೇಷ್ಠ ಸಂಘಟಕರು ಆಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಪಿಎನ್ ಜವರಪ್ಪಗೌಡ ಪತ್ರಿಕೋದ್ಯಮ ಪ್ರಶಸ್ತಿಯನ್ನು ೧೦,೦೦೦ ನಗದು ಹಾಗೂ ಪ್ರಶಸ್ತಿ ಫಲಕಗಳೊಂದಿಗೆ ನೀಡಿ ಗೌರವಿಸಲಾಗುತ್ತಿದೆ.