ಸಾರಾಂಶ
ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ)ಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅ.5 ಮತ್ತು 6ರಂದು ಬೆಸ್ಕಾಂನ ಆನ್‌ಲೈನ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ)ಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅ.5 ಮತ್ತು 6ರಂದು ಬೆಸ್ಕಾಂನ ಆನ್‌ಲೈನ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.ಐಟಿ ವ್ಯವಸ್ಥೆ ಉನ್ನತೀಕರಣದಿಂದ ಹೊಸ ಸಂಪರ್ಕ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆ, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ ಆರ್‌ಎಪಿಡಿಆರ್‌ಪಿ ಅಪ್ಲಿಕೇಷನ್ ಲಭ್ಯವಿರುವುದಿಲ್ಲ. ಹಾಗೆಯೇ, ಬೆಸ್ಕಾಂ ಕ್ಯಾಶ್ ಕೌಂಟರ್ ಪಾವತಿ, ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಕಾರ್ಯನಿರ್ವಹಿಸುವುದಿಲ್ಲ. ಆರ್‌ಎಪಿಡಿಆರ್‌ಪಿ ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಷನ್‌ಗಳೂ ಲಭ್ಯವಿರುವುದಿಲ್ಲ.
ಅ.4ರ ರಾತ್ರಿ 9ರಿಂದ ಆ.5ರ ಬೆಳಗ್ಗೆ 11ರವರೆಗೆ ಆನ್‌ಲೈನ್ ಬಿಲ್ ಪಾವತಿ ಸ್ಥಗಿತಗೊಳ್ಳಲಿದ್ದು, ಅ.5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ವ್ಯವಸ್ಥೆ ಪುನರಾರಂಭವಾಗಲಿದೆ. ಉಳಿದಂತೆ ಎಲ್ಲ ಸೇವೆಗಳು ಅ. 7ರಿಂದ ಪುನರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಿ ಅಥವಾ ಬೆಸ್ಕಾಂ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.