ಕುಷ್ಟಗಿಯ ಇನ್ನರ್ ವೀಲ್ ಕ್ಲಬ್‌ಗೆ ಬೆಸ್ಟ್ ಅವಾರ್ಡ್‌

| Published : Jun 14 2024, 01:08 AM IST

ಕುಷ್ಟಗಿಯ ಇನ್ನರ್ ವೀಲ್ ಕ್ಲಬ್‌ಗೆ ಬೆಸ್ಟ್ ಅವಾರ್ಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿಯ ಇನ್ನರ್ ವೀಲ್ ಕ್ಲಬ್ ಬೆಸ್ಟ್ ಅವಾರ್ಡ್‌ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದೆ.

ಸದಸ್ಯರ ಸಹಕಾರದಿಂದ ಹಲವು ಜನೋಪಯೋಗಿ ಕಾರ್ಯ- ಶಾರದಾ ಶೆಟ್ಟರಕನ್ನಡಪ್ರಭ ವಾರ್ತೆ ಕುಷ್ಟಗಿ

ಕುಷ್ಟಗಿಯ ಇನ್ನರ್ ವೀಲ್ ಕ್ಲಬ್ ಬೆಸ್ಟ್ ಅವಾರ್ಡ್‌ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲೊಂದರ ಸಭಾಂಗಣದಲ್ಲಿ ನಡೆದ ಕೃತಜ್ಞತೆ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯವು ನಮ್ಮ ಕ್ಲಬ್ ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ. ಕ್ಲಬ್ ವತಿಯಿಂದ ನಾವು ಫಲಾಪೇಕ್ಷೆ ಬಯಸದೆ ಸ್ವಂತ ಹಣದಲ್ಲಿ ಸುಮಾರು ಒಂದು ವರ್ಷಗಳ ಕಾಲ ಅಸಹಾಯಕ ಮಹಿಳೆಯರಿಗೆ ಆಹಾರ ಕಿಟ್‌ಗಳನ್ನು, ಒಂಬತ್ತು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು, ವಿದ್ಯಾರ್ಥಿಗಳಿಗೆ ಸಹಾಯ ಸಹಕಾರವನ್ನು, ಶಾಲೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡಲಾಗಿದೆ. ಒಟ್ಟು ಸುಮಾರು 108 ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಿದ್ದೇವೆ. ಈ ಕೆಲಸಗಳಿಗೆ ನಾವು ಯಾರ ಹತ್ತಿರವೂ ದೇಣಿಗೆ ಸಂಗ್ರಹ ಮಾಡಿಲ್ಲ. ಈ ಕಾರ್ಯದಿಂದ ನಮಗೆ ತೃಪ್ತಿ ಸಿಗುತ್ತಿದ್ದು, ಇನ್ನುಮುಂದೆ ಅನೇಕ ಕಾರ್ಯಗಳು ನಡೆಯಲಿವೆ. ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.

ನಮ್ಮ ಇನ್ನರ್ ವೀಲ್ ಕ್ಲಬ್‌ಗೆ ಹಾಗೂ ಪದಾಧಿಕಾರಿಗಳಿಗೆ ಬೆಸ್ಟ್ ಅವಾರ್ಡ್‌, ಬೆಸ್ಟ್ ಅಂಬಾಸಿಡರ್ ಅವಾರ್ಡ್‌, ಬೆಸ್ಟ್ ಎಡಿಟರ್ ಅವಾರ್ಡ್, ಬೆಸ್ಟ್ ಕ್ಲಬ್ ಸೆಕ್ರಟರಿ ಅವಾರ್ಡ್, ಸೇವಾ ಮಿತ್ರ ಅವಾರ್ಡ್‌ಗಳು ದೊರಕಿವೆ ಎಂದರು.

ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ, ಕ್ಲಬ್ ಸೆಕ್ರಟರಿ ವಂದನಾ ಗೋಗಿ, ಎಡಿಟರ್ ಮೇಘಾ ದೇಸಾಯಿ, ಖಜಾಂಚಿ ಗೌರಮ್ಮ ಕುಡತಿನಿ, ಶರಣಮ್ಮ ಅಂಗಡಿ, ಡಾ. ಕುಮುದಾ, ಶಶಿಕಲಾ ಬಯ್ಯಾಪುರ, ಸುಕನ್ಯಾ ಶೆಟ್ಟರ, ಅನಿತಾ ಗೋಗಿ, ಮಮತಾ ಅಜೇಯ, ನೇತ್ರಾ ಸೊಪ್ಪಿಮಠ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ ಪದಾಧಿಕಾರಿಗಳು, ಸದಸ್ಯರು ಇದ್ದರು. ಕುಷ್ಟಗಿಯ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು.