ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಅತ್ಯುತ್ತಮ ಸಾಧನೆ

| Published : Feb 11 2024, 01:46 AM IST

ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಅತ್ಯುತ್ತಮ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

29 ಚಾಂಪಿಯನ್ ಟ್ರೋಫಿ, 29 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಬ್ರೈನೋಬ್ರೈನ್‌ ಇಂಟರ್‌ ನ್ಯಾಷನಲ್ ದುಬೈ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ‘11ನೇ ಅಂತಾರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆ-2024’ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ವಿದ್ಯಾರ್ಥಿಗಳು ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮೆರೆದು 29 ಚಾಂಪಿಯನ್ ಟ್ರೋಫಿ, 29 ಚಿನ್ನದ ಪದಕ ಮತ್ತು 12 ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ.

81 ರಾಷ್ಟ್ರಗಳ ಒಟ್ಟು 21, 422 ಮಕ್ಕಳು ವಿವಿಧ ರಾಷ್ಟ್ರದ ಬ್ರೈನೋಬ್ರೈನ್ ಕೇಂದ್ರಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗು ಜಿಲ್ಲೆಯ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ ಒಟ್ಟು 70 ಮಂದಿ ಮಕ್ಕಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು.

ಆನ್‌ಲೈನ್ ಸ್ಪರ್ಧೆಯಲ್ಲಿ 4 ನಿಮಿಷಗಳ ನಿಗದಿತ ಸಮಯ ಮಾತ್ರವಿದ್ದು, ಮಡಿಕೇರಿ ಗುಡ್ಡಗಾಡು ಪ್ರದೇಶವಾದ್ದರಿಂದ ಇಂಟರ್‌ನೆಟ್ ಕನೆಕ್ಷನ್ ಹಾಗೂ ನೆಟ್ವರ್ಕ್ ಸಮಸ್ಯೆ ಇದ್ದರು ಸಹ ಸವಾಲಾಗಿ ಸ್ವೀಕರಿಸಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಿದ ಎಲ್ಲಾ 70 ಮಕ್ಕಳು ವಿಜೇತರಾಗಿರುವುದು ಪ್ರಶಂಸನೀಯವಾಗಿದೆ ಎಂದು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರು ಹರ್ಷ ವ್ಯಕ್ತಪಡಿಸಿದ್ದು, ಸಂಪೂರ್ಣ ಪ್ರಶಂಸೆ ಮತ್ತು ಅಭಿನಂದನೆ ಮಕ್ಕಳು ಹಾಗೂ ಪೋಷಕರಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.

ಚಾಂಪಿಯನ್ ಟ್ರೋಫಿ ವಿಜೇತರು: ಆರವ್ ಬೊಪಣ್ಣ ಬಿ.ಎಂ., ಅದಿತ್ ಗೌತಮ್ ಕೆ, ಅನೀಶನ್ ಪಿ, ಅನ್ವಿ ಪಿ, ಭುವನ್ ತಿಮ್ಮಯ್ಯ ಎಂ, ಚೇತಸ್ ಎಚ್.ಜೆ, ಚಿರಂತನ್ ಆರ್ ಕಾಮತ್, ಧೃತಿ ಎ.ಎಂ, ದಿಗಂತ್ ಎಸ್ ಅನ್ವೇಕರ್, ಗಾನವಿ ಗಂಗಮ್ಮ ಸಿ.ವಿ, ಜಾರ್ಜ್ ಮ್ಯಾಥ್ಯೂ, ಹವಿಂತಾ ಹೆಚ್.ಎಸ್, ಖುಷ್ ಮುದ್ದಯ್ಯ ಬಿ. ಕಿಶಿ ಕಾವೇರಮ್ಮ ಎ.ಎಲ್, ಕೋಸಿಗಿ ಸಮರ್ಥ್ ಸಾಮ್ರಾಟ್, ಕೋಸಿಗಿ ಸಾತ್ವಿಕ್ ಸಾಮ್ರಾಟ್, ಲಿಖಿತ್ ಸೋಮಣ್ಣ ಕೆ.ಎಲ್, ಲಿನಿತ್ ಬಿ.ಎಲ್, ಮೀನಾಕ್ಷಿ ಡಿ.ಎಂ, ಮಿಯ ಅರುಣ್, ನಮನ್ ಎಂ ಗೌಡ, ನಾಪಂಡ ನಿಶಾ ಪೂವಣ್ಣ, ನಿಶ್ಚಲ್ ಆರ್, ಪ್ರಧಾನ್ ಶತಾಯುಷ್, ಪುನಿತ ಪಿ.ಎಂ, ಶಿಶಿರ್ ಆರ್, ಶಿವಕುಮಾರ್ ಯು.ಆರ್, ಟಿ.ಪಿ ನಿಧಿ, ಯಶಿಕ ಎಸ್,

ಚಿನ್ನದ ಪದಕ ವಿಜೇತರು: ಅಫ್ಫಾನ್ ಅಹಮದ್ ಟಿ.ಬಿ, ಐಶ್ವರ್ಯ ಎಸ್, ಅಲುಫ್ ಎ.ಆರ್., ಅಪೇಕ್ಷಾ ಆರ್ ರೈ, ಬಿ.ಡಿ ಖುಷಿ, ಚಹನಾ ಎನ್.ಕೆ, ಚಾರ್ವಿ ಕೆ.ಟಿ, ದೀಷ್ಣಾ ಡಿ.ಎನ್, ಧ್ರುವನ್ ಎ.ಎಂ, ಧೃತಿ ಜೆ ಪೂಜಾರಿ, ಜಿ ಪ್ರಣಿತ, ಜಯಲಕ್ಷ್ಮೀ ಕೆ.ಎನ್, ಕೃಷ್ಣ ಪ್ರಿಯಾ ಪಿ.ಕೆ, ಕೃಪಾ ಆರ್, ಲಾಸ್ಯ ಕೆ.ಸಿ, ಲಕ್ಷ್ಯ ಕೆ.ಸಿ, ಎನ್ ನಿರನ್ ಪೂವಣ್ಣ, ನೈಷಾ ನಾಚಯ್ಯ ಪಾಲೆಕಂಡ, ಪ್ರಣತಿ ಎಸ್.ಪಿ, ಪ್ರಣಯ್ ಪ್ರಸನ್ನ ಸಿ.ಪಿ, ಪ್ರತ್ಯೂಶ ಎಂ ಸುವರ್ಣ, ಪ್ರೀತಂ ಟಿ.ಎಂ, ರಿಯಾಂಕ ಎಸ್.ವಿ, ರೂಪಲ್ ಮುತ್ತಮ್ಮ ಎಂ.ಎಲ್, ಸಿದ್ದಾರ್ಥ್ ಕೃಷ್ಣ ಪಿ, ಸುಬ್ಬಯ್ಯ ಕೆ.ಸಿ, ಟಿ.ಪಿ ನಿತ್ಯ. ತ್ರಿಶಾ ಎ.ವೈ, ಯಶಸ್ ಕೆ.ಯು.,

ಬೆಳ್ಳಿ ಪದಕ ವಿಜೇತರು: ಅಹಾನ್ ಬರ್ನ್ವಾಲ್, ಆಲ್ಫಾ ಎ.ಆರ್, ಅಮೂಲ್ಯ ಎಲ್, ಲಾಲಿತ್ಯ ಅಶೋಕ್ ಸಿ, ಮನವಿ ಬಿ.ಎಂ, ಮುಹಮ್ಮದ್ ಅಧಿಯಾನ್ ಡಿ.ಎ, ಪ್ರಾಹಿಲ್ ಪ್ರಸನ್ನ ಸಿ.ಪಿ, ಪ್ರೇಕ್ಷಾ ಟಿ.ಎಂ, ಶುಭಾಷ್ ಬಿ.ಎನ್, ತನ್ಮಯಿ ಬಿ.ಎಸ್, ವೈಷ್ಣವಿ ಬಿ.ಎಲ್., ವಂದಿತಾ ಉತ್ತಪ್ಪ ಪಿ.