ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಅಧೀನ ಸಂಸ್ಥೆ ಎನ್‌ಪಿಸಿ (ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್) ವತಿಯಿಂದ ಸ್ಥಾಪಿಸಲುದ್ದೇಶಿಸಿರುವ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೊತ್ತಿದೆ. ಹೋರಾಟದ ಮುಂದುವರಿದ ಭಾಗವಾಗಿ ಬುಧವಾರ ಬೇಸೂರು, ತುಮರಿ, ಬ್ಯಾಕೋಡು, ಹೆಗ್ಗೊಡು ಸೇರಿದಂತೆ ಈ ಭಾಗದ ನೂರಾರು ಗ್ರಾಮಸ್ಥರು ಪ್ರತಿಭಟನಾ ಪಾದಯಾತ್ರೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸಾಗರ
ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಅಧೀನ ಸಂಸ್ಥೆ ಎನ್‌ಪಿಸಿ (ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್) ವತಿಯಿಂದ ಸ್ಥಾಪಿಸಲುದ್ದೇಶಿಸಿರುವ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೊತ್ತಿದೆ. ಹೋರಾಟದ ಮುಂದುವರಿದ ಭಾಗವಾಗಿ ಬುಧವಾರ ಬೇಸೂರು, ತುಮರಿ, ಬ್ಯಾಕೋಡು, ಹೆಗ್ಗೊಡು ಸೇರಿದಂತೆ ಈ ಭಾಗದ ನೂರಾರು ಗ್ರಾಮಸ್ಥರು ಪ್ರತಿಭಟನಾ ಪಾದಯಾತ್ರೆ ನಡೆಸಿದರು.ಬುಧವಾರ ಬೆಳಿಗ್ಗೆ ಬೇಸೂರಿನ ಬಸವಣ್ಣ ದೇವಸ್ಥಾನದಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿವರೆಗೂ ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದಯಾತ್ರೆಗೆ ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮತ್ತು ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಚಾಲನೆ ನೀಡಿದರು.
‘ಉರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿ’ ಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆಯಲ್ಲಿ ಅಯ್ಯೋಯ್ಯೋ ಬೇಡ್ವೇ ಬೇಡ ಅಣುಸ್ಥಾವರ ಯೋಜನೆ ಬೇಡ... ಏಸೂರು ಕೊಟ್ರೂ ಬೇಸೂರು ಕೊಡೆವು! ಎಂಬ ಹಾಡು ಮೊಳಗಿತುಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ , ಈಗ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಮಲೆನಾಡಿನ ಜನ ಯಾವುದೇ ಪಕ್ಷ, ಪಂಗಡವಿಲ್ಲದೆ ಹೋರಾಡಬೇಕಿದೆ. ಈ ಮೂಲಕನಮ್ಮ ಬದುಕಿನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಆತಂಕ ಇನ್ನೂ ಸಾಗರ ತಾಲ್ಲೂಕಿನ ಜನರನ್ನು ಕಾಡುತ್ತಿರುವಾಗಲೆ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವಾದ ಮಲೆನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರು ಮಾತನಾಡಿ, ಎಲ್ಲಾ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ನೆಲದ ಸಂಕಷ್ಟ ಬಗ್ಗೆ ಧ್ವನಿ ಎತ್ತಬೇಕು. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಽಗಳು ಮೇಲ್ಮಟ್ಟದಲ್ಲಿ ಜನವಿರೋಽ ಯೋಜನೆಗಳನ್ನು ರೂಪಿಸಿ ನಮ್ಮ ಮೇಲೆ ಹೇರುವ ಕೆಲಸ ಮಾಡುತ್ತಾರೆ. ಇದರ ವಿರುದ್ದ ಪಕ್ಷಾತೀತವಾಗಿ ಹೋರಾಡಬೇಕು ಎಂದು ಹೇಳಿದರು.ಈಗಾಗಲೆ ಶರಾವತಿ ಸೇರಿದಂತೆ ಅನೇಕ ಜಲ ಯೋಜನೆಗಳಿಂದ ಮಲೆನಾಡು ಜನ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೇಸೂರು ಅಣುವಿದ್ಯುತ್ ಯೋಜನೆ ಜಾರಿಗೆ ಅವಕಾಶ ಕೊಡದೆ ಹೋರಾಟ ಮಾಡಬೇಕಿದೆ. ಜನರ ಸಂಘಟಿತ ಹೋರಾಟದ ಮುಂದೆ ಯಾವುದೇ ಸರ್ಕಾರವೂ ನಿರ್ಧಾರ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.
‘ಉರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿ’ ಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆ ಬೇಸೂರು, ಹುಲಿದೇವರಬನ, ಗೆಣಸಿನಕುಣಿ, ಆವಿನಹಳ್ಳಿ, ಕಾಗೇಹಳ್ಳ, ಹೊಸೂರು, ಚಿಪ್ಲಿಶಾಲೆ, ಇಕ್ಕೇರಿ ಸರ್ಕಲ್ ಹಾಗೂ ಸುಭಾಹಿತ್ ಬಿಲ್ಲಿಂಗ್ ಮಾರ್ಗವಾಗಿ ಸಾಗರ ಉಪವಿಭಾಗಾಽಕಾರಿಗಳ ಕಚೇರಿ ತಲುಪಿತು.ಜನಪರ ಹೋರಾಟಗಾರರಾದ ತೀ.ನಾ. ಶ್ರೀನಿವಾಸ್, ಬೇಸೂರು ಅಣುವಿದ್ಯುತ್ ಯೋಜನೆ ವಿರೋಽ ಹೋರಾಟ ಸಮಿತಿ ಅಧ್ಯಕ್ಷ ಇಂದೂಧರ ಗೌಡ, ತುಮರಿ ಜಿ.ಟಿ ಸತ್ಯನಾರಾಯಣ, ದಿನೇಶ್ ಶಿರವಾಳ, ನಾಗೇಂದ್ರ ಸಾಗರ, ಬಂದಗದ್ದೆ ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಚರಕ ಸಂಸ್ಥೆಯ ಪ್ರಕಾಶ್ ಕುಗ್ವೆ ಸೇರಿದಂತೆ ಚರಕ ಸಂಸ್ಥೆ ಪ್ರತಿನಿಧಿಗಳು, ರೈತರು, ಪರಿಸರಾಸಕ್ತರು, ಗ್ರಾಮಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಸಾರ್ವಜನಿಕರು ವಿವಿಧ ಸ್ಥಳಗಳಲ್ಲಿ ಪಾದಯಾತ್ರೆಗೆ ಸೇರ್ಪಡೆಗೊಂಡು ಬೆಂಬಲ ವ್ಯಕ್ತಪಡಿಸಿದರು.