ಸಮಾಜಕ್ಕೆ ಸಲ್ಲಿಸುವ ನಿಸ್ವಾರ್ಥ ಸೇವೆ ಶ್ಲಾಘನೀಯ

| Published : Sep 15 2024, 01:52 AM IST

ಸಾರಾಂಶ

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಇಂತಹ ಪುಣ್ಯದ ಕೆಲಸ ಮಾಡುತ್ತಿರುವ ಡಾ. ಬೆಟ್ ಕೆರೂರ್ದಂಪತಿಗಳ ಕಾರ್ಯ ಅಭಿನಂದನಾರ್ಹ.

ಕನ್ನಡಪ್ರಭ ವಾರ್ತೆ ಮೈಸೂರುಸಮಾಜಕ್ಕೆ ಸಲ್ಲಿಸುವ ನಿಸ್ವಾರ್ಥ ಸೇವೆ ಸದಾ ಶ್ಲಾಘನೀಯವಾದುದು ಎಂದು ಡಾ. ಸಿ.ಜಿ. ಬೆಟಸೂರಮಠ ಹೇಳಿದರು.ನಗರದಲ್ಲಿ ಡಾ. ವಸಂತ್ ಬೆಟ್ಕೆರೂರ್ ಮತ್ತು ಡಾ. ಮಂಗಳ ಬೆಟ್ಕೆರೂರ್ ಅವರು ಸ್ಥಾಪಿಸಿರುವ ದತ್ತಿನಿಧಿಯ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೆಟ್ಕೆರೂರ್ ದಂಪತಿ ಉದಾರ ಮನೋಭಾವವುಳ್ಳ ದಾನಿಗಳು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಈ ದತ್ತಿನಿಧಿ ಸ್ಥಾಪಿಸಿದ್ದಾರೆ. ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು. ಅವರು ಚೆನ್ನಾಗಿ ಓದಿ ಮುಂದೆ ಬಂದು ಉತ್ತಮ ಜೀವನ ನಡೆಸಬೇಕು. ಆಗ ಅದೇ ದತ್ತಿ ದಾನಿಗಳಿಗೆ ಅವರು ಸಲ್ಲಿಸಬಹುದಾದ ಕೃತಜ್ಞತೆ ಎಂದರು.ದತ್ತಿದಾನಿಗಳಾದ ಡಾ. ಮಂಗಳ ಬೆಟ್ಕೆರೂರ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿರುವಾಗಲೇ ಅವರಿಗೆ ವೃತ್ತಿ ಮಾರ್ಗದರ್ಶನ ನೀಡುವ ಸೌಲಭ್ಯ ಒದಗಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳಿಗೆ ತುಂಬಾ ಅನುಕೂಲವಾಗುತ್ತದೆ. ನಮ್ಮ ಯಶಸ್ಸಿನ ನಂತರ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡುಜೀವನವನ್ನು ವಿಕಾಸಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ನೆರವಾಗಲು ಅವಕಾಶ ಮಾಡಿಕೊಟ್ಟ ಪೂಜ್ಯ ಸುತ್ತೂರು ಶ್ರೀಗಳಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ತಿಳಿಸಿದರು.ಡಾ. ಬಿ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಇಂತಹ ಪುಣ್ಯದ ಕೆಲಸ ಮಾಡುತ್ತಿರುವ ಡಾ. ಬೆಟ್ ಕೆರೂರ್ದಂಪತಿಗಳ ಕಾರ್ಯ ಅಭಿನಂದನಾರ್ಹ. ಆರ್ಥಿಕ ಅಗತ್ಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದಿಂದ ಹೆಚ್ಚಿನ ನೆರವು ದೊರೆತು ಅವರ ಏಳಿಗೆಗೆ ಸಹಕಾರಿಯಾಗುತ್ತದೆ ಹೇಳಿದರು. ಡಾ. ಜಯದೇವ ಬೆಟ್ಕೆರೂರ್ಮತ್ತು ಕುಟುಂಬದ ಸದಸ್ಯರು ಮಾತನಾಡಿ, ಇಂತಹ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಅತ್ಯಂತ ನೆಮ್ಮದಿಯ ಭಾವನೆಯನ್ನು ಮೂಡಿಸುತ್ತಿದೆ. ಇಂತಹ ಕಾರ್ಯಗಳ ಮೂಲಕ ಡಾ. ವಸಂತ್ಬೆಟ್ ಕೆರೂರ್ದಂಪತಿ ಮಾದರಿಯಾಗಿದ್ದಾರೆ. ಮುಂದಿನ ಪೀಳಿಗೆಯವರೂ ಇದನ್ನು ಅನುಸರಿಸಬೇಕು ಎಂದು ತಿಳಿಸಿದರು.ದತ್ತಿ ದಾನಿಗಳಾದ ಡಾ. ವಸಂತ್ ಬೆಟ್ಕೆರೂರ್, ಮಕ್ಕಳಾದ ಅನುಪಮಾ, ನಿವೇದಿತಾ ಮತ್ತು ಕವಿತಾ ಅವರು ಆನ್ ಲೈವ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುನೀತಾ ಬೆಟ್ಕೆರೂರ್, ಉಮಾ ಬೆಟ್ಕೆರೂರ್, ಸಂಸ್ಥೆಗಳ ಮುಖ್ಯಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಸ್ವಾಗತಿಸಿದರು.

ನೀಮಾ ಸೋಮನ್ ಮತ್ತು ಶಹಾಲ ಶರೀನ್ ಪ್ರಾರ್ಥಿಸಿದರು. ಪೋಷಕರು ಮತ್ತು ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಾಂಶುಪಾಲ ಡಾ. ಎಂ. ಪ್ರಭು ವಂದಿಸಿದರು. ಅಧ್ಯಾಪಕಿ ಮಾನಸ ನಿರೂಪಿಸಿದರು.