ಕ್ರೀಡೆಗಳಿಗೆ ವಿಶ್ವಾದ್ಯಂತ ಉತ್ತಮ ಮಾನ್ಯತೆ: ಪ್ರತಿಭಾ

| Published : Jan 21 2024, 01:32 AM IST / Updated: Jan 21 2024, 01:33 AM IST

ಸಾರಾಂಶ

ಎಲ್ಲ ಕ್ರೀಡೆಗಳು ತನ್ನದೇ ಆದ ವೈಶಿಷ್ಠ್ಯತೆ ಹಾಗೂ ಸ್ಥಾನ ಹೊಂದಿರುತ್ತವೆ. ದೈಹಿಕವಾಗಿ ಸದೃಢವಾದ ವ್ಯಕ್ತಿಗಳು ಜೂಡೋ ಸ್ಪರ್ಧೇಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಎಂದು ಕಾಲೇಜು ಪ್ರಾಂಶುಪಾಲರಾದ ಡಾ. ಕೆ.ಆರ್. ಪ್ರತಿಭಾ ಹೊಳೆಹೊನ್ನೂರಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಎಲ್ಲ ಕ್ರೀಡೆಗಳು ತನ್ನದೇ ಆದ ವೈಶಿಷ್ಠ್ಯತೆ ಹಾಗೂ ಸ್ಥಾನ ಹೊಂದಿರುತ್ತವೆ ಎಂದು ಕಾಲೇಜು ಪ್ರಾಂಶುಪಾಲರಾದ ಡಾ. ಕೆ.ಆರ್. ಪ್ರತಿಭಾ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಸತ್ಯಧರ್ಮ ಕಲ್ಯಾಣ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಮಟ್ಟದ ಪುರುಷರ ಜೂಡೋ ಪಂದ್ಯಾವಳಿ ಮತ್ತು ವಿ.ವಿ. ತಂಡ ಆಯ್ಕೆ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೈಹಿಕವಾಗಿ ಸದೃಢವಾದ ವ್ಯಕ್ತಿಗಳು ಜೂಡೋ ಸ್ಪರ್ಧೇಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಭಾವಹಿಸಲು ನಿರಂತರ ದೈಹಿಕ ಶ್ರಮ ಹಾಗೂ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಕ್ರೀಡೆಗಳಿಗೆ ವಿಶ್ವಾದ್ಯಂತ ಉತ್ತಮ ಮಾನ್ಯತೆ ಇದೆ. ಅಲ್ಲದೇ, ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾ ಕೋಟಾದಡಿ ಸುಲಭವಾಗಿ ಆಯ್ಕೆ ಆಗಬಹುದಾಗಿದೆ ಎಂದ ಅವರು, ಕಾಲೇಜಿನ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ ಪಂದ್ಯಾವಳಿಗೆ ಸಹಕರಿಸಿದ ಎಲ್ಲರಗೂ ಕೃತಜ್ಞತೆ ಸಲ್ಲಿಸಿದರು.

ಕುವೆಂಪು ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎನ್.ಡಿ. ವಿರೂಪಾಕ್ಷ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದ ಜೂಡೋ ಪಂದ್ಯಾವಳಿಗೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ನಾನಾ ಷರತ್ತುಗಳು ಅನ್ವಯ ಆಗಲಿದ್ದು, ಕನಿಷ್ಠ ಸ್ಪರ್ಧಿಗಳ ಭಾಗವಹಿಸದಿದ್ದರೆ ಪಂದ್ಯಾವಳಿ ನಡೆಸಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ಎಲ್ಲ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳ ಜೂಡೋ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಡಾ.ಬಾಷಾ, ವಿನಯ್‍ಕುಮಾರ್, ಸಂತೋಷ್‍ ನಾಯ್ಕ, ಪ್ರಶಾಂತ್ ಸಿಂಗ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಡಾ.ರೋಹನ್ ಡಿ''''ಕಾಸ್ಟ, ಶಿರಾಳಕೊಪ್ಪ ಕಾಲೇಜಿನ ನಾರಾಯಣ್, ಭದ್ರಾವತಿಯ ಡಾ.ಅನಿಲ್‌ಕುಮಾರ್, ಪ್ರಾಧ್ಯಾಪಕರಾದ ಎಚ್.ಸುರೇಶ್ ಸಾಗರ್, ಚಂದ್ರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಿರ್ಮಲ ಗಣೇಶ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.ಆಸ್ಮ ಮೇಲಿನಮನಿ, ಐಕ್ಯುಎಸಿ ಸಂಚಾಲಕಿ ಡಾ.ಭಾರತಿದೇವಿ. ಗ್ರಂಥಪಾಲಕ ಡಾ. ಎಸ್.ರಾಜು ನಾಯ್ಕ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಎನ್.ಆರ್. ಶಂಕರ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

- - - ಬಾಕ್ಸ್‌ ಶಿಕಾರಿಪುರ ಕಾಲೇಜಿಗೆ ಸಮಗ್ರ ಪಶಸ್ತಿ

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಜೂಡೋ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಕ್ರಮವಾಗಿ ಆಯನೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಹಾಗೂ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಸಮಗ್ರ ಬಹುಮಾನ ಪಡೆದುಕೊಂಡವು.

60 ಕೆಜಿ ವಿಭಾಗ:

ಎಂ.ಜಿ.ಕಾರ್ತಿಕ್, ಆಯನೂರು ಕಾಲೇಜು (ಪ್ರಥಮ), ಎಚ್.ಡಿ.ಸಂಜಯ, ಹೊಳೆಹೊನ್ನೂರು ಕಾಲೇಜು (ದ್ವಿತೀಯ), ಎಂ.ಮಿಥುನ್, ಶಿರಾಳಕೊಪ್ಪ ಕಾಲೇಜು (ತೃತೀಯ) ಹಾಗೂ ಸಿ.ಆಕಾಶ, ಹೊಳೆಹೊನ್ನೂರು ಕಾಲೇಜು (ತೃತೀಯ).

66ಕೆಜಿ ವಿಭಾಗ: ಕೆ.ಸತೀಶ, ಶಿಕಾರಿಪುರ ಕಾಲೇಜು(ಪ್ರಥಮ), ಜೆ.ರೋಹನ್, ಆಯನೂರು ಕಾಲೇಜು (ದ್ವಿತೀಯ), ಅಪ್ಪು, ಆಯನೂರು ಕಾಲೇಜು (ತೃತೀಯ) ಹಾಗೂ ಎಸ್.ಪ್ರಜ್ವಲ್, ಹೊಳೆಹೊನ್ನೂರು ಕಾಲೇಜು (ತೃತೀಯ).

73 ಕೆಜಿ ವಿಭಾಗ:

ಎಸ್.ಮನೋಜ್, ಶಿಕಾರಿಪುರ ಕಾಲೇಜು (ಪ್ರಥಮ), ಎಂ.ಪಿ.ನಾಗರಾಜ, ಹೊಳೆಹೊನ್ನೂರು ಕಾಲೇಜು (ದ್ವಿತೀಯ), ಎಂ.ಶರತ್, ಆಯನೂರು ಕಾಲೇಜು (ತೃತೀಯ) ಹಾಗೂ ಜೆ.ಮಧು ಶಿರಾಳಕೊಪ್ಪ ಕಾಲೇಜು (ತೃತೀಯ). 81 ಕೆಜಿ ವಿಭಾಗ:

ಜೆ.ಎಂ.ಪವನ, ಶಿಕಾರಿಪುರ ಕಾಲೇಜು (ಪ್ರಥಮ), ಜಿ.ಜಿ.ಕಿರಣ, ಹೊಳೆಹೊನ್ನೂರು ಕಾಲೇಜು (ದ್ವಿತೀಯ), ಎಸ್.ಶ್ರೀಕಾಂತ್, ಹೊಳೆಹೊನ್ನೂರು ಕಾಲೇಜು (ತೃತೀಯ) ಹಾಗೂ ಸಾಹಿಲ್, ಹೊಳೆಹೊನ್ನೂರು ಕಾಲೇಜು- ತೃತೀಯ ಬಹುಮಾನ.

- - -

-19ಎಚ್‍ಎಚ್‍ಆರ್1:

ಜೂಡೋ ಪಂದ್ಯಾವಳಿಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಶಿಕಾರಿಪುರ ಸರ್ಕಾರಿ ಕಾಲೇಜು ತಂಡಕ್ಕೆ ಪ್ರಾಂಶುಪಾಲರಾದ ಡಾ. ಕೆ.ಆರ್. ಪ್ರತಿಭಾ ಪಾರಿತೋಷಕ ವಿತರಿಸಿದರು.