ಸರ್ಜಿಫೆಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ

| Published : Oct 22 2024, 12:22 AM IST

ಸರ್ಜಿಫೆಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಜಿಫೆಸ್ಟ್ ಸಮ್ಮೇಳನಗಳು ಪರೀಕ್ಷೆ ತಯಾರಿಯಲ್ಲಿರುವ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಸಮಕುಲಪತಿ ಡಾ.ಅರುಣ ಇನಾಮದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ಜಿಫೆಸ್ಟ್ ಸಮ್ಮೇಳನಗಳು ಪರೀಕ್ಷೆ ತಯಾರಿಯಲ್ಲಿರುವ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಸಮಕುಲಪತಿ ಡಾ.ಅರುಣ ಇನಾಮದಾರ ಹೇಳಿದರು.

ನಗರದ ಡೀಮ್ಡ್ ವಿವಿ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ನಡೆದ ಸ್ನಾತಕೋತ್ತರ ಪದವಿ ಪ್ರಾಯೋಗಿಕ ಪರೀಕ್ಷೆ ಆಧಾರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಥ ಸಮ್ಮೇಳನಗಳಲ್ಲಿ ಅನುಭವಿ ಪ್ರಾಧ್ಯಾಪಕರು ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಸಂದೇಹಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ವಿಶಿಷ್ಠ ಮತ್ತು ನವೀನ ಪ್ರಾಯೋಗಿಕ ಸಮ್ಮೇಳನಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು.ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನ ಸಹಾಯಕ ಡೀನ್ ಡಾ.ರಾಜಗೋಪಾಲ ಶೆಣೈ ವಿದ್ಯಾರ್ಥಿಗಳಿಗೆ ಸರ್ಜಿಫೆಸ್ಟ್‌ ಮಹತ್ವವನ್ನು ವಿವರಿಸಿದರು. ಅಲ್ಲದೇ, ಬಿಎಲ್‌ಡಿಇ ಆಸ್ಪತ್ರೆ ಅಭಿವೃದ್ಧಿ ಕಾರ್ಯಗಳು ಪ್ರಶಂಸಾರ್ಹವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಸಂಘಟನಾ ಅಧ್ಯಕ್ಷ ಡಾ.ಮಂಜುನಾಥ ಕೋಟೆಣ್ಣವರ ಮಾತನಾಡಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಣಕು ಪರೀಕ್ಷೆಯನ್ನು ಪ್ರಥಮ ಬಾರಿಗೆ ಆಯೋಜಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಹೇಳಿದರು.ಈ ಸಮ್ಮೇಳನದಲ್ಲಿ ರಾಜ್ಯದ ಶಸ್ತ್ರ ಚಿಕಿತ್ಸಾ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಹುಬ್ಬಳ್ಳಿ ಕೆಎಂಸಿ ಪ್ರಾಚಾರ್ಯ ಡಾ.ಗುರುಶಾಂತಪ್ಪ ಯಲಗಚ್ಚಿನ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ಸಂಘಟನಾ ಕಾರ್ಯದರ್ಶಿ ಡಾ.ದಯಾನಂದ ಬಿರಾದಾರ, ಬೆಳಗಾವಿ ಜೆಎನ್‌ಎಂಸಿ ಡಾ.ಶ್ರೀಶೈಲ ಮೆಟಗುಡ್ಡ, ಗದುಗಿನ ಜಿಮ್ಸ್‌ ಡಾ.ಜ್ಯೋತಿ ಕರೆಗೌಡರ, ಬಾಗಲಕೋಟೆ ಎಸ್‍ಎನ್‍ಎಂಸಿ ಡಾ.ಈಶ್ವರ ಕಲಬುರ್ಗಿ, ಸೋಲಾಪುರದ ಅಶ್ವಿನಿ ಮೆಡಿಕಲ್ ಕಾಲೇಜು ಡಾ.ಲಕ್ಷ್ಮಣ ಅಹಿರಸಂಗ, ಹುಬ್ಬಳ್ಳಿಯ ಖ್ಯಾತ ಸರ್ಜನ್ ಡಾ.ಚೇತನ ಹೊಸಕಟ್ಟಿ, ಬಿಎಲ್‌ಡಿಇ ಡೀಮ್ಡ್ ವಿವಿ ಡೀನ್ ಫ್ಯಾಕಲ್ಟಿ ಆಫ್ ಮೆಡಿಸಿನ್ ಡಾ.ತೇಜಸ್ವಿನಿ ವಲ್ಲಭ, ಡಾ.ವಿಜಯಾ ಪಾಟೀಲ, ಡಾ.ಶೃತಿ ಶೀಳಿನ, ಉಪಪ್ರಾಚಾರ್ಯ ಡಾ.ಎಂ.ಬಿ.ಪಾಟೀಲ, ಪ್ರಾಧ್ಯಾಪಕರಾದ ಡಾ.ರವಿಕುಮಾರ ಚೌಧರಿ, ಡಾ.ಪ್ರಸಾದ ಸಾಸನೂರ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ನಿಶಿಕಾಂತ ಗುಜರ, ಡಾ.ಸುಶೀಲಾ ಗರಗ, ಡಾ.ಆನಂದ ಝಳಕಿ, ಡಾ.ರಾಜಕುಮಾರ ಹಿರೇಮಠ, ಡಾ.ಸಂಜೀವ ರಾಠೋಡ, ಡಾ.ಶೃತಿ ಶೀಳಿನ, ಡಾ.ವೀಣಾ, ಡಾ.ಮಂಜುನಾಥ ಸಾವಂತ, ಡಾ.ನಾಗರಾಜ ಬಿರಾದಾರ ಇತರರು ಇದ್ದರುಮುಂತಾದವರು ಉಪಸ್ಥಿತರಿದ್ದರು.