ತಂಬಾಕು ರಹಿತ ಜೀವನದಿಂದ ಉತ್ತಮ ಆರೋಗ್ಯ: ಡಾ.ಸುನೀಲ ಸರೋದೆ

| Published : Jun 02 2024, 01:46 AM IST

ತಂಬಾಕು ರಹಿತ ಜೀವನದಿಂದ ಉತ್ತಮ ಆರೋಗ್ಯ: ಡಾ.ಸುನೀಲ ಸರೋದೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನದ ಜಾಗೃತಿ ಕಾರ್ಯಕ್ರಮಕ್ಕೆ ಆಯುಷ್ ವೈದ್ಯಾಧಿಕಾರಿ ಸುನೀಲ್ ಸರೋದೆ ಚಾಲನೆ ನೀಡಿದರು.

ಸಿರವಾರ: ತಂಬಾಕು ಸೇವನೆಯಿಂದ ಇಡೀ ಜೀವನದ ಜೊತೆಗೆ ಕುಟುಂಬವೂ ಸಂಕಷ್ಟ ಅನುಭವಿಸುತ್ತದೆ. ಪ್ರತಿಯೊಬ್ಬರೂ ತಂಬಾಕು ಸೇವನೆಯಿಂದ ದೂರವಿದ್ದು, ತಂಬಾಕು ರಹಿತ ಜೀವನ ನಡೆಸಿದರೆ ಆರೋಗ್ಯವಂತರಾಗಿರುತ್ತೇವೆ ಎಂದು ಆಯುಷ್ ವೈದ್ಯಾಧಿಕಾರಿ ಸುನೀಲ ಸರೋದೆ ಹೇಳಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಂಬಾಕು ಬಳಕೆಯಿಂದ ಅಸ್ತಮಾ, ಹಲ್ಲಿನ ಕ್ಷಯ, ವಸಡಿನ ಕಾಯಿಲೆ, ಉಸಿರಾಟಕ್ಕೆ ಸಂಬಂಧಿ ಕಾಯಿಲೆ, ಕಣ್ಣಿನ ಪೊರೆ, ಅನ್ನನಾಳ ಶ್ವಾಸಕೋಶದ, ಜಠರ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಲವಾರು ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.

ಗರ್ಭಿಣಿಯರು ತಂಬಾಕು ಸೇವನೆಯಿಂದ ಗರ್ಭಪಾತ, ಗರ್ಭ ಕ್ಯಾನ್ಸರ್ ಶಿಶುಗಳ ಮರಣ, ಕಡಿಮೆ ತೂಕದ ಮಗು ಜನನ ಸೇರಿ ಹಲವಾರು ರೋಗಳಿಗೆ ತುತ್ತಾಬೇಕಾಗುತ್ತದೆ ಎಂದರು.

ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಗ್ಯಾನಮಿತ್ರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಕ್ಷಯರೋಗ ಮೇಲ್ವಿಚಾರಕ ಪ್ರೇಮ ಪ್ರಸಾದ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನೀಲಮ್ಮ, ಫಾರ್ಮಸಿ ಅಧಿಕಾರಿ ವಿಧ್ಯಾರಾಣಿ, ಸಮುದಾಯ ಆರೋಗ್ಯಾಧಿಕಾರಿ ಕೆ.ಸುಮಾ, ಮಾಧುರಿ, ಆಶಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.