ಸಾರಾಂಶ
ಚನ್ನಪಟ್ಟಣ: ತಾಲೂಕಿನ ಬೇವೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಿಂಡಿಕೇಟ್‌ನ ೯ ನಿರ್ದೇಶಕರು ಗೆದ್ದು, ಪಿಎಸಿಎಸ್ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.
ಸಂಘದ ೧೧ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದ 2 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಮಿಕ್ಕ ಸ್ಥಾನಗಳಿಗೆ ೧೫ ಜನ ಸ್ಪರ್ಧಿಸಿದ್ದರು. ಕಾಂಗ್ರೆಸ್ ಬೆಂಬಲಿತರು ೯ನಿರ್ದೇಶಕರು ಆಯ್ಕೆಯಾಗಿ ಬ್ಯಾಂಕ್‌ನ ಆಡಳಿತ ಮಂಡಳಿ ಕೈ ವಶವಾಗಿದೆ.ಸಂಘದ ಸಾಲಗಾರರ ಸಾಮಾನ್ಯ ಕ್ಷೇತ್ರದ ೫ ನಿರ್ದೇಶಕರ ಸ್ಥಾನಕ್ಕೆ ಒಟ್ಟು ೭ ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದು ಇವರಲ್ಲಿ ಕಾಂಗ್ರೆಸ್ ಬೆಂಬಲಿತ ಸಿಂಡಿಕೇಟ್‌ನ ಅಭ್ಯರ್ಥಿಗಳಾದ ಬಿ.ಸಿ.ಯೋಗೀಶ್, ಬಿ.ಕೃಷ್ಣ, ದಯಾನಂದಸಾಗರ, ಬಿಎನ್‌ಎಸ್ ಕುಮಾರ್, ಬಿ.ಎಸ್.ರಾಜಶೇಖರಸ್ವಾಮಿ ಜಯಗಳಿಸಿದ್ದಾರೆ.
ಸಂಘದ ಸಾಲಗಾರರಲ್ಲದ ಕ್ಷೇತ್ರದ ೧ ನಿರ್ದೇಶಕ ಸ್ಥಾನಕ್ಕೆ ಒಟ್ಟು ೩ ಮೂವರು ಸ್ಪರ್ಧಿಸಿದ್ದು, ನಾಗಣ್ಣ ಗೆಲುವು ಸಾಧಿಸಿದ್ದಾರೆ. ಸಂಘದ ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ.ಕೆ.ಅರ್ಜುನ, ಕೆ. ಆಯ್ಕೆಯಾಗಿದ್ದಾರೆ. ಸಾಲಗಾರರ ಬಿಸಿಎಂ (ಎ) ಮೀಸಲು ಕ್ಷೇತ್ರದಿಂದ ಬಿ.ಕೆ. ಪಂಚಲಿಂಗಯ್ಯ ಹಾಗೂ ಸಾಲಗಾರರ ಬಿಸಿಎಂ (ಬಿ) ಮೀಸಲು ಕ್ಷೇತ್ರದಿಂದ ಬಿ.ಆರ್. ನಂದೀಶ್ ಗೆಲುವು ಸಾಧಿಸಿದ್ದಾರೆ. ಸಂಘದ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದ ೨ ನಿರ್ದೇಶಕ ಸ್ಥಾನಕ್ಕೆ ಪುಟ್ಟಲಿಂಗಮ್ಮ, ಪ್ರಭಾವತಿ ಅವಿರೋಧ ಆಯ್ಕೆಯಾಗಿದ್ದರು.ನೂತನ ನಿರ್ದೇಶಕರನ್ನು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ಮುಖಂಡರಾದ ಅರಳಾಳುಸಂದ್ರ ಶಿವಪ್ಪ, ವಿ.ಬಿ.ಚಂದ್ರು, ಚನ್ನಂಕೇಗೌಡನದೊಡ್ಡಿ ಸಿ.ಪಿ.ನಾಗೇಶ್, ಮುದಗೆರೆ ಜಯಕುಮಾರ್, ಮೈಲನಾಯಕನಹಳ್ಳಿ ಅಜಿತ್, ವಂದಾರಗುಪ್ಪೆ ರಾಜೇಶ್, ಮಾಜಿ ಗ್ರಾ.ಪಂ. ಸದಸ್ಯ ಮಧುಸೂದನ್, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಪಿ. ಪುಟ್ಟಸ್ವಾಮಿ ಇತರರು ಅಭಿನಂದಿಸಿದರು.
ಪೊಟೋ೧೯ಸಿಪಿಟಿ೨:ಚನ್ನಪಟ್ಟಣ ತಾಲೂಕಿನ ಬೇವೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಮುಖಂಡರು ಅಭಿನಂದಿಸಿದರು.
;Resize=(128,128))