ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಪ್ರತಿಯೊಬ್ಬರೂ (ಎಸ್ಐಆರ್) ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ತಮ್ಮ ಹಕ್ಕು ಕಾಪಾಡಿಕೊಳ್ಳಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮಧುಗಿರಿಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಪ್ರತಿಯೊಬ್ಬರೂ (ಎಸ್ಐಆರ್) ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ತಮ್ಮ ಹಕ್ಕು ಕಾಪಾಡಿಕೊಳ್ಳಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಬುಧವಾರ ತಾಲೂಕಿನ ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ರಂಗಾಪುರ ಕೆರೆ ಕೋಡಿ ಹಾಗೂ - ಬಡವನಹಳ್ಳಿ ರಸ್ತೆ ಮಧ್ಯ ಭಾಗದಲ್ಲಿನ ಸುಮಾರು 7 ಕೋಟಿ ರು.ವೆಚ್ಚದ 2 ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾಣೆಗಳು ಸಮೀದಲ್ಲಿದ್ದು, ಅದರಲ್ಲಿ ಸ್ಪರ್ಧಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಅಲ್ಲದೆ ಸರ್ಕಾರದ ಸೌಲಭ್ಯ ಪಡೆಯಲು ಮತದಾರರ ಪಟ್ಟಿ ಅತಿ ಮುಖ್ಯ. ಆದ್ದರಿಂದ ಪ್ರತಿಯೊಬ್ಬರು ಮುತುವರ್ಜಿ ವಹಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳುವಂತೆ ಸಲಹೆ ನೀಡಿದರು. ರೈತರೆ ಎದುಗುಂದಬೇಡಿ:ಮಳೆ ಬರಲಿಲ್ಲವೆಂದು ರೈತರು ಎದೆಗುಂದಬೇಕಿಲ್ಲ. ಮಳೆ ಬರುತ್ತದೆ. ನಿಮ್ಮ ಜೊತೆ ಸರ್ಕಾರವಿದೆ. ಬರಗಾಲ ಎದುರಾದರೆ ರೈತರಿಗೆ ಮೇವು ಬೆಳೆಯಲು ಬೀಜ ವಿತರಿಸಲಾಗುವುದು. ಗೋ ಶಾಲೆ ತೆರೆಯಲಾಗುವುದು. ಒಟ್ಟಿನಲ್ಲಿ ಜನತೆಗೆ ಬೇಕಾದ ಅಗತ್ಯ ಮೂಲಸೌಲಭ್ಯ ಒದಗಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕೆ.ಎನ್. ರಾಜಣ್ಣ ಭರವಸೆ ನೀಡಿದರು. ರಂಗಾಪುರದ ಕೆರೆ ಕೋಡಿಗೆ ಎರುಡು ಸೇತುವೆಗಳನ್ನು 7 ಕೋಟಿ ರು.ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇನ್ನೂ 6ತಿಂಗಳ ಒಳಗಾಗಿ ಗುಣ ಮಟ್ಟದ ಸೇತುವೆ ಕಾಮಗಾರಿ ಮಾಡಬೇಕು ಎಂದು ರಾಜಣ್ಣ ಗುತ್ತಿಗೆದಾರರಿಗೆ ತಾಕೀತು ಮಾಡಿದರು.ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಸರ್ಕಾರಗಳ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಗ್ಯಾರಂಟಿ ಸಮಿತಿ ಅಧ್ಯಕ್ಷ ಬಡವನಹಳ್ಳಿ ಚೌಡಪ್ಪ, ಕೆಪಿಸಿಸಿ ಸದಸ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡರಾಜು, ತಾಪ ಮಾಜಿ ಅಧ್ಯಕ್ಷ ಕೆ. ಮಹಾಲಿಂಗಯ್ಯ, ಯುವ ಮುಖಂಡ ಕುರುಬಹಳ್ಳಿ ಹರ್ಷ, ಶಿವರಾಂ, ಪಿಡಬ್ಲ್ಯುಡಿ ಇಇ ಹನುಮಂತರಾವ್, ಇಒ ಉತ್ತಮ್, ಎಡಿ ಧನಂಜಯ, ಮುಖಂಡರಾದ ಎಡಿ ಬಲರಾಮಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ಜಯರಾಮ್, ಚೌಡಪ್ಪ, ಸಿದ್ಧಗಂಗಪ್ಪ, ಸಣ್ಣರಾಮಣ್ಣ ಸೇರಿ ವಿವಿಧ ಹಂತದ ಜನಪ್ರತಿನಿಧಿಗಳು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.