ಸಾರಾಂಶ
- ಅರ್ಹ ಕಟ್ಟಡ ಕಾರ್ಮಿಕರಿಗೆ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಮನವಿ - - - ದಾವಣಗೆರೆ: ನಗರ ಸೇರಿದಂತೆ ಜಿಲ್ಲಾದ್ಯಂತ ಹಲವಾರು ಸಂಘಟನೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯಗಳನ್ನು ಕೊಡಿಸುತ್ತೇವೆ ಎಂದು ಆಸೆ, ಆಮಿಷಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಎಐಟಿಯಸಿ ನೇತೃತ್ವದ ರಾಜ್ಯ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ತಿಳಿಸಿದೆ.
ನೈಜ ಕಟ್ಟಡ ಕಾರ್ಮಿಕರೇ ಅಲ್ಲದವರಿಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಗುರುತಿನ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾಗುವ ಸಾಮಗ್ರಿಗಳ ಮಾರಾಟ ಮಳಿಗೆಗಳಿಗೆ ತೆರಳಿ ವಂತಿಗೆ ವಸೂಲಿ ಮಾಡುತ್ತಿದ್ದಾರೆ. ನಕಲಿ ಕಟ್ಟಡ ಕಾರ್ಮಿಕರ ಕಾರ್ಡುಗಳನ್ನು ಮಾಡಿಸುವ ಮೂಲಕ ಕಟ್ಟಡ ಕಾರ್ಮಿಕರಲ್ಲದವರಿಗೂ ಸರ್ಕಾರಿ ಸವಲತ್ತುಗಳನ್ನು ನೀಡುವ ಯತ್ನ ಮಾಡುತ್ತಿದ್ದಾರೆ. ಒಂದು ಗುರುತಿನ ಕಾರ್ಡ್‌ಗೆ ₹500 ರಿಂದ ₹1000 ವರೆಗೂ ಅಮಾಯಕ ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.ಈ ಹಿನ್ನೆಲೆ ಕಟ್ಟಡ ಕಾರ್ಮಿಕರಾಗಲೀ, ದಾವಣಗೆರೆ ಜಿಲ್ಲಾಯ ನಾಗರೀಕರಾಗಲೀ ಬೋಗಸ್ ಕಾರ್ಡುಗಳನ್ನು ಮಾಡಿಕೊಡುವ ಸಂಘಟನೆಗಳಿಗೆ ಮಣೆ ಹಾಕಬಾರದು. ಯಾವುದೇ ದೇಣಿಗೆಗಳನ್ನೂ ನೀಡಬಾರದು. ಅನಧಿಕೃತ ಸಂಘಟನೆಗಳ ವಿರುದ್ಧ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅರ್ಹರು ಯಾವುದೇ ಹೆಚ್ಚಿನ ಹಣ ನೀಡದೇ ನಮ್ಮ ಸಂಘಟನೆಯ ಕಚೇರಿಗೇ ದಾಖಲೆಗಳನ್ನು ನೀಡಿದರೆ, ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಅಧಿಕೃತ ಗುರುತಿನ ಚೀಟಿಗಳ ಸೌಲಭ್ಯ ಪಡೆಯುವಂತೆ ಸಂಘಟನೆ ರಾಜಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ್, ದಾವಣಗೆರೆ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್ ಮನವಿ ಮಾಡಿದ್ದಾರೆ.
- - - -17ಕೆಡಿವಿಜಿ32: ಆವರಗೆರೆ ಉಮೇಶ್-17ಕೆಡಿವಿಜಿ33 ವಿ.ಲಕ್ಷ್ಮಣ್