ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದಲ್ಲಿ ಫಸಲುಗಳಿಗೆ ಮೇ 25 ರವರಿಗೆ ನೀರು ಹರಿಸಬೇಕೆಂಬ ಮನವಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಹರಿಹರ: ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದಲ್ಲಿ ಫಸಲುಗಳಿಗೆ ಮೇ 25 ರವರಿಗೆ ನೀರು ಹರಿಸಬೇಕೆಂಬ ಮನವಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ ಮಾತನಾಡಿ, ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಭತ್ತದ ಫಸಲಿಗೆ ನೀರಿನ ಅವಶ್ಯಕತೆ ಇದೆ. ಭಾನುವಳ್ಳಿ, ಕಮಲಾಪುರ ಸೇರಿದಂತೆ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ನೀರಿನ ಅವಶ್ಯಕತೆ ಇದೆ. ಮೇ 17ಕ್ಕೆ ಪ್ರಕಟಣೆಯಂತೆ ನೀರು ನಿಲುಗಡೆ ಮಾಡಿದರೆ, ಬೆಳೆದ ಬೆಳೆ ಕೈಗೆ ಬಾರದೇ, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.

ಸೊರಬದ ಆನವಟ್ಟಿ ಸಮನಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ರೈತರೊಂದಿಗೆ ಶನಿವಾರ ಭೇಟಿಯಾಗಿ, ನೀರು ಹರಿಸುವ ಕುರಿತು ಮನವಿ ಮಾಡಿದ್ದಾರೆ.

ಭಾನುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಹನುಮಂತಪ್ಪ ಮಾತನಾಡಿ, ಸಚಿವ ಮಧು ಬಂಗಾರಪ್ಪ ಅವರು, ನೀರಾವರಿ ಅಧಿಕಾರಿಗಳು ಮತ್ತು ಕಾಡಾ ಸದಸ್ಯರ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.

ರೈತರಾದ ಭಾಸ್ಕರ್ ರಾವ್ ಕ್ಯಾಂಪಿನ ಕರಿಬಸಪ್ಪ, ಭಾನುವಳ್ಳಿ ಹಣಚಿಕ್ಕಿ ನಾರಾಯಣಪ್ಪ, ಗ್ರಾಪಂ ಮಾಜಿ ಸದಸ್ಯ ಕೆ. ಪ್ರಶಾಂತ ಮತ್ತು ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಇದ್ದರು.

- - -

-09HRR.01:

ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ ಅವರು ರೈತರೊಂದಿಗೆ ಶನಿವಾರ ಸೊರಬದ ಆನವಟ್ಟಿ ಸಮನಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ನೀರು ಹರಿಸುವ ಕುರಿತು ಮನವಿ ಮಾಡಿದರು.