ಕರ್ನಾಟಕ ನೀರಾವರಿ ನಿಗಮದ ಒಂದು ಭಾಗವಾಗಿರುವ ಭದ್ರಾ ಡ್ಯಾಂನ್ನು ರೈತರ ಅಭಿಪ್ರಾಯಯನ್ನೇ ಪಡೆಯದೇ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸುವ ಮೂಲಕ ಭದ್ರಾ ಡ್ಯಾಂ, ಭದ್ರಾ ಅಚ್ಚುಕಟ್ಟು ರೈತರು, ಭದ್ರಾ ನದಿಅವಲಂಬಿತ ಜಿಲ್ಲೆಗಳಿಗೆ ಮರಣ ಶಾಸನ ಬರೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಭದ್ರಾ ಡ್ಯಾಂ ಮಾಲೀಕರು ರೈತರೇ ಹೊರತು, ಸರ್ಕಾರವಲ್ಲ - - -
ದಾವಣಗೆರೆ: ಕರ್ನಾಟಕ ನೀರಾವರಿ ನಿಗಮದ ಒಂದು ಭಾಗವಾಗಿರುವ ಭದ್ರಾ ಡ್ಯಾಂನ್ನು ರೈತರ ಅಭಿಪ್ರಾಯಯನ್ನೇ ಪಡೆಯದೇ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸುವ ಮೂಲಕ ಭದ್ರಾ ಡ್ಯಾಂ, ಭದ್ರಾ ಅಚ್ಚುಕಟ್ಟು ರೈತರು, ಭದ್ರಾ ನದಿಅವಲಂಬಿತ ಜಿಲ್ಲೆಗಳಿಗೆ ಮರಣ ಶಾಸನ ಬರೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂ ಅನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸುವ ಕೆಲಸವನ್ನು ಕೈಬಿಡಬೇಕು. ಈ ಬಗ್ಗೆ ಸಿಎಂ, ಡಿಸಿಎಂ ಭೇಟಿ ಮಾಡಿ, ಮನವಿ ಮಾಡಿದ್ದೇವೆ. ನಾವು ತುಮಕೂರು, ಬಳ್ಳಾರಿ, ವಿಜಯ ನಗರ ಜಿಲ್ಲೆಗಳ ರೈತರ ವಿರುದ್ಧ ಇಲ್ಲ. ಕಾಂಗ್ರೆಸ್ ಸರ್ಕಾರ ಮೊಂಡುತನ ಪ್ರದರ್ಶಿಸಿದರೆ ದೊಡ್ಡ ಮಟ್ಟದ ಹೋರಾಟವನ್ನೇ ನಾವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವರ್ತನೆ ಖಂಡನೀಯ. ವಾಲ್ಮೀಕಿ ಪುತ್ಥಳಿ ಅನಾವರಣ ಹೆಸರಿನಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನ ಮೇಲೂ ಗುಂಡು ಹಾರಿಸಿದ್ದು, ಇದು ಅದೇ ಶಾಸಕರ ಖಾಸಗಿ ಬೆಂಗಾವಲು ಸಿಬ್ಬಂದಿ ಕೃತ್ಯವೆಂಬ ಸಂಗತಿ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಕಾಂಗ್ರೆಸ್ ಹಾಗೂ ಬಳ್ಳಾರಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಳಿಸಿದ್ದು ಅಕ್ಷಮ್ಯ. ಭರತ್ ರೆಡ್ಡಿಯನ್ನು ಶಾಸಕ ಸ್ಥಾನದಿಂದ ವಜಾ ಮಾಡಿ, ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದರು.ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಎನ್.ಎಚ್. ಹಾಲೇಶ ನಾಯ್ಕ, ಪಂಜು ಪೈಲ್ವಾನ್ ಇತರರು ಇದ್ದರು.
- - --4ಕೆಡಿವಿಜಿ6, 7: