ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 119ನೆ ಜನ್ಮ ದಿನವನ್ನು ಪಟ್ಟಣದ ಮಲ್ಲಯ್ಯನ ದೇವಸ್ಥಾನದಲ್ಲಿ ಭಗತ್ ಸಿಂಗ್ ಗೆಳೆಯರ ಬಳಗದಿಂದ ಸೋಮವಾರ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಕೆಂಭಾವಿ
ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 119ನೆ ಜನ್ಮ ದಿನವನ್ನು ಪಟ್ಟಣದ ಮಲ್ಲಯ್ಯನ ದೇವಸ್ಥಾನದಲ್ಲಿ ಭಗತ್ ಸಿಂಗ್ ಗೆಳೆಯರ ಬಳಗದಿಂದ ಸೋಮವಾರ ಆಚರಿಸಲಾಯಿತು.ಗೆಳೆಯರ ಬಳಗದ ಸಂಗಮೇಶ ಇಜೇರಿ ಮಾತನಾಡಿ, ಯುವಜನತೆ ಭಗತ್ ಸಿಂಗ್ ಅವರ ಆದರ್ಶ, ಧೈರ್ಯ ಹಾಗೂ ದೇಶ ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಾಲ್ಯದಲ್ಲಿ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಹೇಳುತ್ತಿದ್ದ. ಬ್ರಿಟಿಷರ ಕಪಿ ಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವಜನತೆಗೆ ಪ್ರೇರಣೆಯಾಗಿದ್ದರು. ಅತಿಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಹುತಾತ್ಮರಾದರು. ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಹುಟ್ಟುಹಾಕಿದ್ದೆ ಭಗತ್ ಸಿಂಗ್. ಇದು ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ‍್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು ಎಂದು ಹೇಳಿದರು.
ಶರಣು ನಾಗರಾಳ, ಸಿದ್ದು ಇಜೇರಿ, ಮಹಾಂತೇಶ ಸಿರಿ, ಶರಣು ಖಾನಾಪುರ, ಪ್ರಧಾನಿ ಯಾಳಗಿ, ಶಂಕರ ಕರಣಗಿ, ಶ್ರೀಕಾಂತ, ಮಂಜುನಾಥ ಕವಲ್ದಾರ, ಸೋಮನಾಥ, ಭೀಮು, ರಾಮಣ್ಣ, ಸೋಮು, ಶ್ರೀಕಾಂತ, ನಿಂಗಪ್ಪ ಕುಳಗೇರಿ, ಗುರುಅಂಗಡಿ ಸೇರಿದಂತೆ ಭಗತ್ ಸಿಂಗ್ ಗೆಳೆಯರ ಬಳಗದ ಸದಸ್ಯರಿದ್ದರು.