ಚೈತ್ರ ಮಾಸ ಶುಕ್ಲ ಪಕ್ಷದ ಮೊದಲ ದಿನವಾದ ಯುಗಾದಿ ಪ್ರಯುಕ್ತ ಮಾರಿಗುಡಿ ಸೇವಾ ಸಮಿತಿ ವತಿಯಿಂದ ಭಗವಾ ಧ್ವಜಾರೋಹಣ ಮಾಡಲಾಯಿತು.
ಮಾರಿಗುಡಿ ಸೇವಾ ಸಮಿತಿಯಿಂದ ಯುಗಾದಿ ಆಚರಣೆ । ಹಿಂದೂ ವರ್ಷಾರಂಭವನ್ನು ಸಿಹಿ ಹಂಚಿ ಸ್ವಾಗತಿಸಿದ ಮುಖಂಡರು
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚೈತ್ರ ಮಾಸ ಶುಕ್ಲ ಪಕ್ಷದ ಮೊದಲ ದಿನವಾದ ಯುಗಾದಿ ಪ್ರಯುಕ್ತ ಮಾರಿಗುಡಿ ಸೇವಾ ಸಮಿತಿ ವತಿಯಿಂದ ಭಗವಾ ಧ್ವಜಾರೋಹಣ ಮಾಡಲಾಯಿತು.ನಗರದ ಮಾರಿಗುಡಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆ, ಮಹರ್ಷಿ ವಾಲ್ಮೀಕಿ, ಶೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ನಂತರ ಭಗವಾ ಧ್ವಜಾರೋಹಣ ನೆರವೇರಿಸಲಾಯಿತು. ತದ ನಂತರ ಅನ್ನಸಂತರ್ಪಣೆ ಮಾಡಲಾಯಿತು.ನಗರಸಭಾ ಅಧ್ಯಕ್ಷ ಸುರೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಧ್ವಜಾರೋಹಣ ನೆರವೇರಿಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಯುಗಾದಿಯು ಹಿಂದೂಗಳ ಹೊಸ ವರ್ಷಾರಂಭವಾಗಿದ್ದು, ಯುಗಾದಿ ಅಂದರೆ ಚೈತ್ರ ಶುಕ್ಲ ಪ್ರತಿಪದೆ ಅಂದರೆ ಹಿಂದೂಗಳ ಹೊಸ ವರ್ಷಾರಂಭದ ದಿನವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾರಿಗುಡಿ ಸೇವಾ ಸಮಿತಿಯಿಂದ ಭಗವಾ ಧ್ವಜಾರೋಹಣವನ್ನು ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ.ಭಗವಾಧ್ವಜ ಅಥವಾ ಕೇಸರಿ ಧ್ವಜವು ಸನಾತನ ಧರ್ಮದ ಪವಿತ್ರ ಸಂಕೇತವಾಗಿದ್ದು, ಶಕ್ತಿ, ಜ್ಞಾನ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ. ಇದು ಹಿಂದೂ ಸಂಪ್ರದಾಯದಲ್ಲಿ ಭಕ್ತಿ ಮತ್ತು ಗೌರವದ ಸಂಕೇತವಾಗಿದೆ ಎಂದರು.
ಮಾರಿಗುಡಿ ಸೇವಾ ಸಮಿತಿಯ ಶಿವು ವಿರಾಟ್ ಮಾತನಾಡಿ, ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವಾಗಿದ್ದು, ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು ಆಚರಿಸಲಾಗುತ್ತದೆ. ಇದು ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದ ದಿನವೆಂದು ನಂಬಲಾಗಿದೆ. ಬೇವು-ಬೆಲ್ಲ ಸವಿಯುವ ಮೂಲಕ ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಪಾಠ, ಹೊಸ ಆಶೆ, ಸಮೃದ್ಧಿ ಮತ್ತು ವಸಂತ ಋತುವಿನ ಆಗಮನವನ್ನು ಈ ಹಬ್ಬವು ಸಂಕೇತಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ ನಾಯಕ, ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಆರ್. ಸುಂದರ್, ವೆಂಕಟರಾವ್ ಸಾಠೆ, ರಾಮಸಮುದ್ರ ಶಿವು ಮಾತನಾಡಿದರು.
ಮಾರ್ಕೆಟ್ ಕುಮಾರ್, ಚಂದ್ರಶೇಖರ್, ಕಿರಣ್, ವೆಂಕಟೇಶ್ ನಾಯಕ, ಆನಂದ್ ಭಗೀರಥ್, ಭಜರಂಗ ದಳ ಮುಖಂಡ ರಮೇಶ್, ಸತೀಶ್, ಮಾಜಿ ಶಿವಣ್ಣ, ಬಸವಣ್ಣ, ಕೃಷ್ಣ, ಬಂಗಾರ ನಾಯಕ, ರಾಹುಲ್ ಪಾಷಿ, ರಾಮಣ್ಣ, ಪುಟ್ಟಸ್ವಾಮಿ ನಾಯಕ, ನಾಗೇಂದ್ರ, ಹರೀಶ್, ಎಲ್. ಪೃಥ್ವಿ, ಮಣಿ, ಮಹೇಶ್, ನಾಗೇಂದ್ರ, ಪ್ರವೀಣ್, ಪ್ರಸನ್ನ, ಶ್ರೀಕಂಠ, ಅರ್ಜುನ, ಕೃಷ್ಣ, ಅಶ್ವಿನ್ ಇತರರು ಹಾಜರಿದ್ದರು.---
20ಸಿಎಚ್ಎನ್12ಚಾಮರಾಜನಗರದಲ್ಲಿ ಯುಗಾದಿ ಪ್ರಯುಕ್ತ ಭಗವಾಧ್ವಜಾರೋಹಣ ನಡೆಯಿತು.