ಸಮಸ್ಯೆಗೆ ಉತ್ತರಿಸಬಲ್ಲ ಜ್ಞಾನಭಂಡಾರ ‘ಭಗವದ್ಗೀತೆ’

| Published : Aug 27 2024, 01:34 AM IST

ಸಮಸ್ಯೆಗೆ ಉತ್ತರಿಸಬಲ್ಲ ಜ್ಞಾನಭಂಡಾರ ‘ಭಗವದ್ಗೀತೆ’
Share this Article
  • FB
  • TW
  • Linkdin
  • Email

ಸಾರಾಂಶ

ಭಗವದ್ಗೀತೆ ನಮ್ಮ ದೈನಂದಿನ ಜೀವನದ ಅನೇಕ ಸವಾಲುಗಳು, ಸಂದಿಗ್ಧತೆಗಳು, ಸಮಸ್ಯೆಗಳು ಮತ್ತು ದ್ವಂದ್ವಗಳ ಉತ್ತರ ನೀಡಬಲ್ಲ ಜ್ಞಾನ ಭಂಡಾರವಾಗಿದ್ದು, ಸನಾತನ ಧರ್ಮದ ದಿವ್ಯ ಗ್ರಂಥವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಭಗವದ್ಗೀತೆಯ ಅಧ್ಯಯನ ಮಾಡಿ ಅದರಲ್ಲಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಾಲ್ಯದಿಂದ ಹಿಡಿದು ಕುರುಕ್ಷೇತ್ರ ಯುದ್ಧದವರೆಗೆ ಶ್ರೀಕೃಷ್ಣ ಪರಮಾತ್ಮನ ಲೀಲೆಗಳು, ಬೋಧನೆಗಳು ಮತ್ತು ಭಗವದ್ಗೀತೆಯಲ್ಲಿ ಮಾಡಿದ ಧರ್ಮೋಪದೇಶ ಸಾರ್ವಕಾಲಿಕವಾಗಿದ್ದು ನಮ್ಮ ಜೀವನದ ಪ್ರತೀ ಹಂತದಲ್ಲೂ ದಾರಿದೀಪವಾಗಬಲ್ಲದು ಎಂದು ಸಂಸದ ಡಾ. ಕೆ.ಸುಧಾಕರ್ ಹೇಳಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಕ್ಷೇತ್ರದ ಜನತೆಯ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಭಗವದ್ಗೀತೆ ಅಧ್ಯಯನ ಮಾಡಿ

ಭಗವದ್ಗೀತೆ ನಮ್ಮ ದೈನಂದಿನ ಜೀವನದ ಅನೇಕ ಸವಾಲುಗಳು, ಸಂದಿಗ್ಧತೆಗಳು, ಸಮಸ್ಯೆಗಳು ಮತ್ತು ದ್ವಂದ್ವಗಳ ಉತ್ತರ ನೀಡಬಲ್ಲ ಜ್ಞಾನ ಭಂಡಾರವಾಗಿದ್ದು, ಸನಾತನ ಧರ್ಮದ ದಿವ್ಯ ಗ್ರಂಥವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಭಗವದ್ಗೀತೆಯ ಅಧ್ಯಯನ ಮಾಡಿ ಅದರಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಡವಳಿಸಿಕೊಳ್ಳಬೇಕು " ಎಂದು ಹೇಳಿದರು.ಎಂದಿನಂತೆ ಈ ಸೋಮವಾರವೂ ಜನರ ಅಹವಾಲುಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಈ ಬಾರಿ ಹೆಚ್ಚು ಅಹವಾಲುಗಳು ಬಂದಿವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡಿದ್ದರೆ ಸಾರ್ವಜನಿಕರು ಇಷ್ಟು ಅಹವಾಲುಗಳನ್ನು ತೆಗೆದು ಕೊಂಡು ನಮ್ಮ ಬಳಿ ಬರುವ ಪ್ರಮೇಯವೇನಿತ್ತು ಎಂದು ಪ್ರಶ್ನಿಸಿದರು. ಬಂದಿರುವ ಅರ್ಜಿಗಳಲ್ಲಿ ಕಂದಾಯದ ಸಮಸ್ಯೆಗಳು. ಅದರಲ್ಲೂ ಜಮೀನಿನ ಹದ್ದು ಬಸ್ತು ಮತ್ತು ಒತ್ತುವರಿ ಮಾಡಿ ಕೊಂಡಿರುವುದು, ಇದಕ್ಕೆ ಸ್ಥಳೀಯವಾಗಿ ರಾಜಕಾರಣಿಗಳು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾರು ನಿಜವಾದ ಅರ್ಹ ಫಲಾನುಭವಿಗಳಿರುತ್ತಾರೆ, ರೈತರಿರುತ್ತಾರೆ ಅವರಿಗೆ ಕಾನೂನು ಬದ್ದವಾಗಿ ದಾಖಲೆಗಳಿರುತ್ತವೆ. ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದೆ ಆಯ್ಕೆಯಾದ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳ ವಿಷಯ ಕೋರ್ಟ್ ಅಂಗಳದಲ್ಲಿತ್ತು. ಈಗ ತೀರ್ಮಾನವಾಗಿ ಬಂದಿದ್ದರೂ ಸಹಾ ಅರ್ಹ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಟ್ಟು ತಮಗೆ ಬೇಕಾದವರ ಹೆಸರನ್ನು ಸೇರಿಸಿರುವುದು ತಪ್ಪು. ಫಲಾನುಭವಿಯ ಹೆಸರು ಬದಲಾಯಿಸಿ ತಮಗೆ ಬೇಕಾದವರಿಗೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ. ಅಂತಹ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ತಾಲೂಕಿನ ಜಂಗಮಕೋಟೆಯ ಬಳಿ ಕೈಗಾರಿಕೆಗಾಗಿ ರಾಜ್ಯ ಸರ್ಕಾರ ರೈತರ ಫಲವತ್ತಾದ ಜಮೀನು ವಶಪಡಿಸಿಕೋಳ್ಳಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ. ಈಗಾಗಲೆ ಗೌರಿಬಿದನೂರು, ಚಿಂತಾಮಣಿ ಕೈಗಾರಿಕಾ ಪ್ರದೇಶಗಳಲ್ಲಿ ಎಷ್ಟು ಕಾರ್ಖಾನೆಗಳು ಬಂದಿವೆ .ಇನ್ನು ಎಷ್ಟು ಖಾಲಿ ಜಾಗಗಳಿವೆ. ಮೊದಲು ಅಲ್ಲಿ ಖಾಲಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ತರಲಿ. ನಂತರ ಬೇರಡೆ ಸರ್ಕಾರಿ ಜಾಗಗಳಿವೆ ಅಲ್ಲಿ ಕೈಗಾರಿಕೆಗಳ ಬಗ್ಗೆ ಗಮನ ಹರಿಸಲಿ, ಯಾವುದೇ ಕಾರಣಕ್ಕೂ ರೈತರ ಫಲವತ್ತಾದ ಜಮೀನುಗಳು ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.ಸಿ.ಎಂ.ಸಿದ್ದರಾಮಯ್ಯ ಗೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ ಅನುಮತಿ ವಿಷಯದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಷಯ ಕೋರ್ಟ್ ನಲ್ಲಿರುವುದರಿಂದ ಮಾತನಾಡುವುದಿಲ್ಲಾ. ಕೋರ್ಟ್ ಮತ್ತು ರಾಜ್ಯಪಾಲರು ಸಂವಿಧಾನಾತ್ಮಕ ಹುದ್ದೆಗಳು. ಅದರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಕಾದು ನೋಡೋಣ ಎಂದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿಂದ ಹೈದರಾ ಬಾದ್ ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44 ನ್ನು ದಶಪತಗಳಿಗೆ ಹೆಚ್ಚಿಸುವುದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತದೆ. ಆದುದರಿಂದ ತಾವು ಈಗಿರುವ ರಸ್ತೆ ಬಿಟ್ಟು ಗ್ರೀನ್ ಕಾರಿಡಾರ್ ಮಾಡಲು ಯೋಜನೆ ನೀಡಿದ್ದು, ಗ್ರೀನ್ ಕಾರಿಡಾರ್‌ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದರು