ಸಾರಾಂಶ
ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ
ಕುಷ್ಟಗಿ: ಸಮಸ್ತ ಮನುಕುಲದ ಉದ್ಧಾರಕ್ಕಾಗಿ ತನ್ನ ಜೀವನ ಮುಡುಪಾಗಿಟ್ಟ ಭಗೀರಥರಂತಹ ಮಹಾತ್ಮರ ಆದರ್ಶ ಮತ್ತು ತತ್ವ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.
ತಾಲೂಕಿನ ಕೇಸೂರು ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಭಗೀರಥ ಮಹರ್ಷಿ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಾಜಿ ಗ್ರಾಪಂ ಸದಸ್ಯ ಮುತ್ತುರಾಜ ಹೊಸಲಕೊಪ್ಪ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡ ಮಹಾತ್ಮರು ಇವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಗುರುನಗೌಡ ಪಾಟೀಲ, ಯಂಕಪ್ಪ ದಾಸರ, ಶುಖರಾಜ ಈಳಗೇರ, ಶೇಖಪ್ಪ ಪೂಜಾರ, ವೀರಯ್ಯ ಮಳಿಮಠ, ಬಸವರಾಜ ಜಲಕಮಲದಿನ್ನಿ, ವಿವೇಕಾನಂದ ಸುರಪೂರ, ರಮೇಶ ಗೋಪಾಲನಾಯಕ ಸೇರಿದಂತೆ ಭಗೀರಥ ಸಮಾಜದ ಮುಖಂಡರು, ಯುವಕರು ಗ್ರಾಪಂ ಸಿಬ್ಬಂದಿಗಳು ಇದ್ದರು.