ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಚವಡಿಹಾಳ ಗ್ರಾಮದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದಿರುವುದಕ್ಕೆ ಕೈಗನ್ನಡಿಯಂತೆ ಆಂಗ್ಲ ಮಾಧ್ಯಮದಲ್ಲಿ 100ಕ್ಕೆ 100 ಫಲಿತಾಂಶ ಬರುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿದ್ದರೇ, ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.100ರ ಗಡಿಯಲ್ಲಿ ಇದೆ. ಪಿಯುಸಿ ಫಲಿತಾಂಶದಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಸಂಸ್ಥೆ ಪ್ರಸಕ್ತ ವರ್ಷದ 10ನೇ ತರಗತಿಯಲ್ಲಿ ಶೇ.72 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಭಾಗ್ಯವಂತಿ ಕನ್ನಡ ಮಾಧ್ಯಮ ಪ್ರೌಢಶಾಲೆಯು 2024- 25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಪ್ರತಿಶತ 72ರಷ್ಟು ಫಲಿತಾಂಶ ಪಡೆದಿದೆ. ಸೃಷ್ಟಿ ಪಂಡಿತ ಬಿರಾದಾರ (595/625) ಶೇ.96 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.
ರೇವಗೊಂಡ ಈರಣ್ಣ ಬಿರಾದಾರ 625ಕ್ಕೆ 549 ಅಂಕ ಪಡೆದು ಶೇ.88 ಅಂಕ ಪಡೆದು ದ್ವಿತೀಯ, ಸಾಗರ ಅಣ್ಣರಾಯ ಕರ್ಜಿಗಿ 625ಕ್ಕೆ 547 ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಶ್ರೀ ಭಾಗ್ಯವಂತಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100ಕ್ಕೆ100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಅನಿಲ್ ವಿಠೋಬ ದಶವಂತ (598/625) ಪ್ರಥಮ ಸ್ಥಾನ (ಶೇ.96), ಆರ್ಯನ ರಾಠೋಡ (568/625) ದ್ವಿತೀಯ, ಐಶ್ವರ್ಯ ಸಿದ್ದರಾಯ ಪಾಟೀಲ್ ತೃತೀಯ ಸ್ಥಾನ (546/625) ಪಡೆದಿದ್ದಾನೆ.ಶಾಂತಪ್ಪ ದಶವಂತ ನೇತೃತ್ವದಲ್ಲಿ 1989-90ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಮತ್ತು ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ಮತ್ತು ಜೀವನಕ್ಕಾಗಿ ಶಿಕ್ಷಣ ಎಂಬ ಧ್ಯೇಯದೊಂದಿಗೆ ಮುಂದುವರಿಯುತ್ತ ಬಂದಿದೆ. ಆಡಳಿತ ಮಂಡಳಿ ಯಾವುದೇ ವೈಯಕ್ತಿಕ ಪ್ರತಿಫಲಾಪೇಕ್ಷೆಯಿಲ್ಲದೆ ಸಂಗ್ರಹವಾದ ಹಣವನ್ನು ಸಂಸ್ಥೆಯ ಬೆಳವಣಿಗೆಗೆ ವಿನಿಯೋಗಿಸುತ್ತ ಬಂದಿದೆ.
----------ಬಾಕ್ಸ್....
ಅಭಿನಂದಿಸಿದ ಆಡಳಿತ ಮಂಡಳಿ
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ, ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಕಾಮಣ್ಣ ದಶವಂತ, ಸಲಹಾ ಸಮಿತಿಯ ಅಧ್ಯಕ್ಷ ಅಪ್ಪಾರಾಯ ದಶವಂತ, ಕಾರ್ಯದರ್ಶಿ ಶಿವಾನಂದ ದಶವಂತ, ಆಂಗ್ಲ ಮಾಧ್ಯಮ ವಿಭಾಗದ ಅಧ್ಯಕ್ಷ ನಾಗರಾಜ ದಶವಂತ, ಕನ್ನಡ ಮಾಧ್ಯಮ ವಿಭಾಗದ ಅಧ್ಯಕ್ಷ ಅಶೋಕ ದಶವಂತ, ಪ್ರಾಚಾರ್ಯ ಚಂದ್ರಶೇಖರ ದಶವಂತ, ಎಸ್.ಐ ಕಾರಬಾರಿ, ಟಿ.ಆರ್ ನಾಯಕ, ಎಸ್.ಎಂ.ಗುಳೇದಗುಡ , ಆರ್.ಎಸ್.ಕೋಳಿ, ಬಸವರಾಜ ಚಂದ್ರಪ್ಪ, ಸುಭಾಷ ಲಮಾಣಿ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯ ಬಸವರಾಜ ರೋಡಗಿ, ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ ಹಲಸಂಗಿ, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.-----------
ಕೋಟ್...ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ನಗರ ಪ್ರದೇಶದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಮಹಾದಾಸೆಯಿಂದ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಪ್ರತಿ ವರ್ಷ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಫಲಿತಾಂಶ ಗುಣಮಟ್ಟದಿಂದ ಬರುತ್ತಿದ್ದು ಸಂತಸ ತಂದಿದೆ. ಪಪೂ ವಿಭಾಗದ ಫಲಿತಾಂಶವೂ ಉತ್ತಮವಾಗಿ ಬರುತ್ತಿದೆ. ಗ್ರಾಮೀಣ ಮಕ್ಕಳಿಗೆ ಈ ಸಂಸ್ಥೆಯಿಂದ ಅನುಕೂಲವಾಗುತ್ತಿದೆ.
-ಶಾಂತಪ್ಪ ದಶವಂತ, ಅಧ್ಯಕ್ಷರು, ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆ ಚವಡಿಹಾಳ.------------
ಶ್ರೀಭಾಗ್ಯವಂತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುತ್ತಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ಇನ್ನೂ ಹೆಚ್ಚಿನ ಕಲಿಕಾ ಕೇಂದ್ರಗಳನ್ನು ಅರಂಭಿಸಲಿದೆ. ಪಾಲಕರ ಸಹಕಾರ,ಶಿಕ್ಷಕರ ಶ್ರಮ,ಆಡಳಿತ ಮಂಡಳಿಯ ಪ್ರಯತ್ನದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ.-ಅಪ್ಪಾರಾಯ ದಶವಂತ, ಸಲಹಾ ಸಮಿತಿ ಅಧ್ಯಕ್ಷರು