ಬೆಟ್ಟದ ಮೇಲಿರುವ ಸ್ವಾಮಿಗಳ ಉದ್ಭವ ಪಾದಗಳನ್ನು ಭಕ್ತರು ಭಕ್ತಿಭಾವದಿಂದ ವಂದಿಸಿ, ನಂತರ ಬೆಟ್ಟದ ಕೆಳಗಿರುವ ಗರ್ಭಗುಡಿಯಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ರಾಜಗೋಪುರ ಮತ್ತು ಮೆಟ್ಟಿಲುಗಳ ಬಳಿ ಭಕ್ತರು ಕರ್ಪೂರ ಆರತಿ ಹಾಗೂ ದೀಪಾರಾಧನೆ ಸಲ್ಲಿಸುವ ದೃಶ್ಯಗಳು ಅಚ್ಚರಿ ಮೂಡಿಸಿದವು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡ ಸಾವಿರಾರು ಮಹಿಳೆಯರು ವಿವಿಧ ಊರುಗಳಿಂದ ಹೆಚ್ಚುವರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಕ್ತಾದಿಗಳ ಸ಼ಂದಣಿಯಿಂದ ಯಾದಾಪುರ ಗ್ರಾಮ ಪ್ರದೇಶವೇ ಉತ್ಸವ ವಾತಾವರಣವನ್ನು ಪಡೆದುಕೊಂಡಿತ್ತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ದತ್ತಾತ್ರೇಯ ಜಯಂತಿ ಹಾಗೂ ಹುಣ್ಣಿಮೆ ಪ್ರಯುಕ್ತ ತಾಲೂಕಿನ ಯಾದಾಪುರದಲ್ಲಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ಭಕ್ತರ ಮಹಾಪ್ರವಾಹ ಕಂಡುಬಂದಿತು. ಸಾವಿರಾರು ಭಕ್ತರು ಮುಂಜಾನೆಯಿಂದಲೇ ಆಗಮಿಸಿ ಶ್ರೀಗಳ ದರ್ಶನ ಪಡೆದರು.ಬೆಟ್ಟದ ಮೇಲಿರುವ ಸ್ವಾಮಿಗಳ ಉದ್ಭವ ಪಾದಗಳನ್ನು ಭಕ್ತರು ಭಕ್ತಿಭಾವದಿಂದ ವಂದಿಸಿ, ನಂತರ ಬೆಟ್ಟದ ಕೆಳಗಿರುವ ಗರ್ಭಗುಡಿಯಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ರಾಜಗೋಪುರ ಮತ್ತು ಮೆಟ್ಟಿಲುಗಳ ಬಳಿ ಭಕ್ತರು ಕರ್ಪೂರ ಆರತಿ ಹಾಗೂ ದೀಪಾರಾಧನೆ ಸಲ್ಲಿಸುವ ದೃಶ್ಯಗಳು ಅಚ್ಚರಿ ಮೂಡಿಸಿದವು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡ ಸಾವಿರಾರು ಮಹಿಳೆಯರು ವಿವಿಧ ಊರುಗಳಿಂದ ಹೆಚ್ಚುವರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಕ್ತಾದಿಗಳ ಸ಼ಂದಣಿಯಿಂದ ಯಾದಾಪುರ ಗ್ರಾಮ ಪ್ರದೇಶವೇ ಉತ್ಸವ ವಾತಾವರಣವನ್ನು ಪಡೆದುಕೊಂಡಿತ್ತು.ಭಕ್ತರಿಗೆ ಉಚಿತ ಸಾಮೂಹಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ರಸ್ತೆ ಎರಡೂ ಬದಿಗಳಲ್ಲಿ ಇರಿಸಿದ್ದ ವಿವಿಧ ಅಟಿಕೆ ಮಳಿಗೆಗಳು, ತಿಂಡಿತಿನಿಸುಗಳು ಹಾಗೂ ಪರಂಪರಾ ವಸ್ತುಗಳ ಅಂಗಡಿಗಳು ಭಕ್ತರನ್ನು ಆಕರ್ಷಿಸಿತು. ಭಕ್ತರ ಸುರಕ್ಷತೆ, ಸಂಚಾರ ವ್ಯವಸ್ಥೆ ಹಾಗೂ ಶಿಸ್ತಿನ ಪಾಲನೆಗಾಗಿ ಸ್ಥಳೀಯ ಆಡಳಿತ ಮತ್ತು ಸ್ವಯಂಸೇವಕರು ಸಕಲ ವ್ಯವಸ್ಥೆ ಮಾಡಿದ್ದರು.